ಮೋಸಗಾರ್ತಿಯ ಬೆನ್ನತ್ತಿ.... ಪತ್ತೇದಾರಿ ಕಥೆ (4) ಮುಕ್ತಾಯ
ರೀಚರ್ಡನಿಗೆ ಜೂರಿಯ ಮೇಲೆ ಯಾವುದೇ ವಿಧವಾದ ಅನುಮಾನ ವ್ಯಕ್ತವಾಗಿಲ್ಲದಿದ್ದರು ಆಕೆ ಆತನ ಪತ್ನಿಯಾದ್ದರಿಂದ ಕೆಲ ಕಾನ್ಫಿಡೆನ್ಶಿಯಲ್ ವಿಚಾರ ಆತನಿಗೆ ತಿಳಿದಿರುತ್ತದೆಂದು ಕರೆದು ವಿಚಾರಣೆ ಶುರು ಮಾಡಿದ..ಆಕೆಗೆ ಲೇವ್ ಯಾರೋಂದಿಗಾದರು ದ್ವೇಷವಿಟ್ಟುಕೊಂಡಿದ್ದನೇ ಎಂದು ಪ್ರಶ್ನಿಸಿದ.ಆಕೆ ಇಲ್ಲವೆಂದೆಳು.ಆತನ ಬಗೆಗಿನ ಕೆಲ ಖಾಸಗಿ ವಿಷಯಗಳ ಬಗೆಗೆ ಪ್ರಶ್ನೆ ಕೇಳಿದರು ಆಕೆ ಸರಿಯಾಗಿ ಉತ್ತರಿಸಲಿಲ್ಲ.ರೀಚರ್ಡ ಗೆ ಸಮಾಧಾನವಾಗಲಿಲ್ಲ ಆಕೆಯನ್ನು ವಾಪಸ್ ಕಳಿಸಿದಳು.ಈಗ ರೀಚರ್ಡ ನ ಎರಡನೇ ಕೆಲಸ ಆತನ ಪಿ.ಎ ಜಸ್ಸಿ ಯನ್ನು ಕರೆದು ವಿಚಾರಣೆಗೊಳಪಟಿಸಿದ.ಆ ದಿನ ಲೇವ್ ಅನ್ನು ಭೇಟಿ ಮಾಡಲಿದ್ದವರು ಯಾರು ಎಂದ.ಆತ ಒಬ್ಬ ಸುಳ್ಳು ಉದ್ಯಮಿಯ ಹೆಸರು ಹೇಳಿದ.ರೀಚರ್ಡ ಕೊಲೆ ಮಾಡಿದವರ ಚಹರೆ ಏನಾದರು ವಿವರ ತಿಳಿದಿದೆಯೆ ಎಂದಾಗ ಇಲ್ಲವೆಂದೆನು.ಸರಿ ನೀನು ಹೊರಡು ಎಂದು ಆತನನ್ನು ಕಳಿಸಿದ.ರೀಚರ್ಡ ಈಗ ತಕ್ಷಣ ಕಾರ್ಯಪ್ರವೃತ್ತನಾದ ರೀಚರ್ಡ ತಿಳಿಸಿದ ಆ ಉದ್ಯಮಿಯ ಹೆಸರಿನ ಹಿಂದೆ ಬಿದ್ದ ಆತನಿಗೆ ಆ ಹೆಸರಿನ ಯಾವ ವ್ಯಕ್ತಿಯು ಉದ್ಯಮಿಯಿಲ್ಲ ಎಂದು ತಿಳಿಯಿತು.ಈಗ ಲೇವನ ಖಾಸಗಿ ಕಾರ್ ಡ್ರೈವರ್ ಆ ದಿನ ಬಂದಿರಲಿಲ್ಲ.ಏಕೆ ಎಂದು ಡ್ರೈವರ್ ನ ವಿಚಾರಣೆ ಮಾಡಿದ.ಆತ ತನಗೆ ಆ ದಿನ ತೀವ್ರ ಜ್ವರವಿದ್ದ ಕಾರಣ ಕಾನಫರ್ಡ ಆಸ್ಪತ್ರೆಯಲ್ಲಿ ಚಿಕಿತ್ಸಿ ಪಡೆದೆನೆಂದ.ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದ.ಗಂಟಲು ನೋವಿನಿಂದ ಎಂದು ಉತ್ತರಿಸಿದ.ರೀಚರ್ಡನಗೆ ಆತ ಪುಂಗಿ ಊದುತ್ತಿರಬೇಕು ಎಂದು ಮೈಲ್ನೋಟಕ್ಕೆ ಅನಿಸತೊಡಗಿತ್ತು.ಯಾಕೆಂದರೆ ಕೊಲೆ ನೆಡೆದು ಕೇವಲ 3ದಿನವಾಗಿತ್ತು.ಗಂಟಲು ನೋವಿದ್ದರೆ ಅದಿನ್ನು ಆತನ ಮಾತಿನಲ್ಲಿ ಕಾಣಬೇಕಿತ್ತು.ಆದರೆ ಆತ ಚೆನ್ನಾಗಿಯೇ ಮಾತಾಡುತಿದ್ದ.ಆಯಿತೆಂದು ಸೀದಾ ಕಾನ್ ಫರ್ಡ ಆಸ್ಫತ್ರೆಗೆ ಗಾಡಿ ತಿರುಗಿಸಿದ.ಕೊಲೆಯಾದ ದಿನ ಡ್ರೈವರ್ ಕೆಲೆನ್ ಹೆಸರಲ್ಲಿ ಯಾವುದಾದ್ರು ಚಿಕಿತ್ಸೆಯ ವಿವರ ದಾಖಲಾತಿಯಾಗಿದೆಯಾ ಎಂದು ಆಸ್ಪತ್ರೆಯ ರಿಜಿಸ್ಟರ್ ನಲ್ಲಿ ಹುಡುಕಿದ.ಅತನ ಹೆಸರು ಅಲ್ಲಿರಲಿಲ್ಲ.ಹಾಗೆ ಆ ಆಸ್ಪತ್ರೆಯ ಗಂಟಲು ತಜ್ಞರಲ್ಲಿಈತ ಬಂದಿದ್ದನೋ ಇಲ್ಲವೋ ಎಂಬುದರ ಬಗ್ಗೆ ತಿಳಿಯೋಣವೆಂದು ರಿಸಿಪ್ ಶೆನಲಿ ವಿಚಾರಿಸಿದ.ರಿಸಿಪಶನ್ ಅಲ್ಲಿ ಗಂಟಲು ತಜ್ಞರು ಸಧ್ಯಕ್ಕೆ ಯಾರು ಇಲ್ಲ.ಅಪಾಯಿಂಟ್ ಗಾಗಿ ಅರ್ಜಿ ಆಹ್ವಾನಿಸುರುವುದಾಗಿ ತಿಳಿಯಿತು.ಆಗ ರೀಚರ್ಡ ಈ ಬಗ್ಗೆ ಇನ್ನಷ್ಟು ಖಚಿತನಾದ.ರೀಚಡ್ ಸೀದಾ ಜಸ್ಸಿ ಈ ಮುಂಚೆ ವಾಸವಿದ್ದ ರೂಮಿಗೆ ಭೇಟಿ ಕೊಟ್ಟ..ಅಲ್ಲಿ ನವವಿವಾಹಿತ ಜೋಡಿ ವಾಸವಿದ್ದರು.ಅವರಲ್ಲಿ ನಿಮಗೆ ಈ ರೂಮಿಗೆ ವಾಸಕ್ಕೆಂದು ಬಂದಾಗ ಯಾವಾದರು ವಸ್ತುಗಳು ಸಿಕ್ಕವೆ ಎಂದು ಪ್ರಶ್ನಿಸಿದ.ಅವರು ನೆನಪಿಸಿಕೊಂಡು ಒಂದೆರೆಡು ಹಳೆಯ ಫೋಟೊಗಳು ಸಿಕ್ಕವೆಂದು ತಿಳಿಸಿದರು.
Comments
ಉ: ಮೋಸಗಾರ್ತಿಯ ಬೆನ್ನತ್ತಿ.... ಪತ್ತೇದಾರಿ ಕಥೆ (4) ಮುಕ್ತಾಯ