ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!

ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!

ಕವನ

 ಚಂದ್ರನಿಗೆ ಹೋಲಿಸಲೇ , ನನ್ನಾಕೆಯ ಸೂರ್ಯನಿಗೆ ಹೋಲಿಸಲೇ..

ಶಶಿಗಿಂತ ತಂಪಿವಳು ತನ್ನ ಪ್ರೀತಿಯ ಒರಸೆಯಲಿ...

ರವಿಗಿಂತ ಬಿಸಿಇವಳು ತನ್ನ ತೀಕ್ಷ್ಣತೆಯ ನೋಟದಲಿ......!!!!!

 

ನವಿಲಿಗೆ ಹೋಲಿಸಲೇ , ನನ್ನಾಕೆಯ ಕೋಗಿಲೆಯ ದನಿಗೆ ಹೋಲಿಸಲೇ...

ಮಯೂರಿಗೂ ವಯ್ಯಾರವ ತೋರುವಳು ನಡಿಗೆಯಲಿ...

ಕೋಗಿಲೆಗೂ ಇಂಪಾಗಿ ಗುನುಗುವಳು ತನ್ನ ಮಾತಿನಲಿ.....!!!!!

 

ರೇಷ್ಮೆಗೆ ಹೋಲಿಸಲೇ , ನನ್ನಾಕೆಯ ವಜ್ರದ ಕಠಿಣತೆಗೆ ಹೋಲಿಸಲೇ...

ರೇಷ್ಮೆಗೂ  ಮ್ರದು ಇವಳು ಸ್ನೇಹದ ಸಮಯದಲಿ...

ವಜ್ರಕೂ ಕಠಿಣತೆಯು ಅವಳ ಪ್ರೀತಿಯ ಅನುಮಾನದಲಿ....!!!!!

 

ರಂಭೆಗೆ ಹೋಲಿಸಲೇ ,ನನ್ನಾಕೆಯ ಚಂದನದ ಗೊಂಬೆಗೆ ಹೋಲಿಸಲೇ...

ರಂಭೆಗೂ ನಾಚಿಸುವಳು ತನ್ನ ಸೌಂದರ್ಯದಲಿ..

ಚಂದನವೂ ಮಂಕಾಗಿಹುದು ಇವಳ ಸೌಗಂಧದಲಿ.....!!!!!

                                                                      - ಹರೀಶ ಶೆಣೈ

Comments