ರಾಜರ ಆಡಳಿತದಲ್ಲಿ ರಿಸೆಶನ್...!! -ಭಾಗ 1

ರಾಜರ ಆಡಳಿತದಲ್ಲಿ ರಿಸೆಶನ್...!! -ಭಾಗ 1

ಬರಹ

ಈಗ ಎಲ್ಲಾ ಕಡೆ ಆರ್ಥಿಕ ಹಿಂಜರಿತದ (ರಿಸೆಶನ್) ಬಗ್ಗೆನೇ ಮಾತು ಕತೆ. ಪ್ರಜಾಪ್ರಭುತ್ವದ ಬದಲು ರಾಜರ ಆಳ್ವಿಕೆ ಇದ್ದಿದ್ರೆ ರಿಸೆಶನ್ ಪರಿಣಾಮ ಹೆಂಗ್ ಇರೋದು ಅಂತ ಯೋಚನೆ ಮಾಡ್ತ ಇದ್ದೆ. ಅದನ್ನೆ ಇಲ್ಲಿ ಬರೆದಿದ್ದೇನೆ. ಮೈಸೂರು ಸುತ್ತ ಮುತ್ತ ಪ್ರಾಂತ್ಯಗಳು ಇನ್ನು ರಾಜ ಆಳ್ವಿಕೆ ಇದ್ದು ಬೇರೆ ಎಲ್ಲಾ ಕಡೆ ಪ್ರಜಾಪ್ರಭುತ್ವ ಇದೆ ಅಂತ ಅನ್ಕೊಂಡು ಬರೆದಿದ್ದೇನೆ.

ಇನ್ನೊಂದು ವಿಷಯ, ಮೈಸೂರು ರಾಜರ ಬಗ್ಗೆ,ಅರಮನೆ ಬಗ್ಗೆ ನನಗೆ ತುಂಬಾ ಗೌರವ ಮತ್ತು ಪ್ರೀತಿ ಇದೆ. ಕೈಗಾರಿಕೆಗಳು, ಅಣೆಕಟ್ಟುಗಳು, ವಿದ್ಯುತ್ ಉತ್ಪಾದನೆ, ವಿಶ್ವವಿಧ್ಯಾನಿಲಯ ಮುಂತಾದವುಗಳಿಗೆ ಅವರು ಕೂಟ್ಟ ಬೆಂಬಲಕ್ಕೆ ನಾವು ಅವರಿಗೆ ಸದಾ ಋಣಿಗಳು.

ತುಂಬಿದ ಸಭೆಯಲ್ಲಿ...
ಮಹಾರಾಜರು: ದಿವಾನರೆ, ರಾಜ್ಯದ ಆರ್ಥಿಕ ಸ್ಥಿತಿ ಈಗ ಹೇಗಿದೆ. ಆರ್ಥಿಕ ಹಿಂಜರಿತದ ಪರಿಣಾಮ ರಾಜ್ಯದಲ್ಲಿ ಹೇಗಿದೆ ?
ದಿವಾನರು: ಮಹಾಪ್ರಭು ರಾಜ್ಯದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮದಿಂದ ಯುವಕರು ಕೆಲಸ ಕಳೆದುಕೊಂಡಿದ್ದಾರೆ. ರೈತರ ಬೆಳೆಗೆ ಸರಿಯಾದ ಬೆಲೆ ಸಿಗದೆ ಪರಿತಪಿಸುತ್ತಿದ್ದಾರೆ.
ಮಹಾರಾಜರು: ದಿವಾನರೆ, ಪ್ರಜೆಗಳ ಈ ಸಂಕಷ್ಟದಿಂದ ಪಾರು ಮಾಡಲು ಎನಾದರು ಉಪಾಯವಿದ್ದರೆ ಹೇಳಿ.
ದಿವಾನರು: ಪ್ರಭು, ಪ್ರಜೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವತನಕ ಪ್ರಜೆಗಳಗೆ ಎಲ್ಲಾ ತರಹದ ತೆರಿಗೆಗಳಿಂದ ವಿನಾಯಿತಿ ಕೊಟ್ಟು, ಕಾರ್ಖಾನೆಗಳಿಗೆ ಸೂಕ್ತ ನೆರವನ್ನು ಕೊಟ್ಟು ಯುವಕರನ್ನು ಕೆಲಸದಿಂದ ತೆಗೆಯಬಾರದೆಂದು ನಿರ್ದೆಶಿಸಬಹುದು. ಮತ್ತು ರೈತರ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಮಾಡುವುದು.
ಮಹಾರಾಜರು: ದಿವಾನರೆ, ಆಗಲಿ.. ಈ ಎಲ್ಲಾ ನಿರ್ಧಾರಗಳು ನಮಗೆ ಒಪ್ಪಿಗೆಯಾಗಿವೆ. ಇವುಗಳನ್ನು ಈಗಲೇ ಜಾರಿಗೊಳಿಸಿ. ಆದರೆ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಮೇಲೆ ಪ್ರಜೆಗಳು ತಾವಗಿಯೇ ಎಲ್ಲ ತೆರಿಗೆಗಳನ್ನು ಪಾವತಿಸತಕ್ಕದ್ದು ಎಂದು ತಿಳಿಸಿ.
ದಿವಾನರು: ಅಪ್ಪಣೆ ಮಹಪ್ರಭು.

( ಸ್ವಲ್ಪ ದಿನಗಳ ನಂತರ )

ದಿವಾನರು:ಪ್ರಭುಗಳೆ, ನಾವು ನೀಡಿದ ಸೌಲಭ್ಯಗಳನ್ನು ಎಲ್ಲರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಯಾರು ತೆರಿಗೆ ಪಾವತಿಸದ ಕಾರಣ ರಾಜ ಭೊಕ್ಕಸ ಖಾಲಿಯಾಗಿದೆ.
ಮಹಾರಾಜರು: ( ಆಶ್ಚರ್ಯ!) ಎನು ರಾಜ ಭೊಕ್ಕಸ ಖಾಲಿಯಾಗಿದೆಯೆ ?

ತುಂಬಿದ ಸಭೆ. ರಾಜರು, ಮಂತ್ರಿಗಳು ಎಲ್ಲಾರು ತುಂಬ ಚಿಂತಾಕ್ರಾಂತರಾಗಿದ್ದಾರೆ. ಆಗ ರಾಜ ಮೊಬೈಲ್ ಗೆ ಒಂದು ದೂರವಾಣಿ ಕರೆ ಬರುತ್ತದೆ.

ರಾಜರು: ಹಲೊ!
ಆ ಕಡೆಯಿಂದ : sir we are calling from xyz bank. we are givinig loans upto 15 lacks. are you salaried or self employed ?

ರಾಜರು: ( ಆಶ್ಚರ್ಯದಿಂದ!) ಎನು ಹೇಳುತ್ತಿರುವಿರಿ ?
ಟೆಲಿಕಾಲರ್ : Sir Are you salaried or self employed ?
ರಾಜರು : (ಎನು ಹೇಳಬೇಕೆಂದು ತಿಳಿಯದೆ) ೧೦ ನಿಮಿಷದ ಬಳಿಕ ಕರೆ ಮಾಡಿ. ನಾವು salaried ಅಥವಾ self employed ಎಂಬುದನ್ನು ಚರ್ಚೆ ಮಾಡಿ ಹೇಳುತ್ತೇವೆ.

ಫೋನ್ ಕಟ್ ಆಯ್ತು.

ಟೆಲಿಕಾಲರ್ : salaried or self employed ಅಂತ ಹೇಳಕೆ ೧೦ ನಿಮಿಷ ಬೇಕಾ? ಯಾರೋ ಕನ್ನಡದವರೆ. ಇನ್ನೊಂದ ಸಲ ಫೋನ್ ಮಾಡ್ ದಾಗ ಕನ್ನಡದಲ್ಲೇ ಮಾತಡ್ ಬೇಕು.
ರಾಜರು : ಮಂತ್ರಿಗಳೆ ನಮಗೆ ಇದು ಎಂತಾ ಪ್ರಶ್ನೆ ? ನಾವು salaried ಅಥವಾ self employed ?
ದಿವಾನರು: ಮಹಾಪ್ರಭು , ತಾವು salaried ಅಥವಾ self employed ಎಂದು ನಿರ್ದರಿಸುವುದು ತುಸು ಕಷ್ಟದ ಕೆಲಸ. ಆದರೂ, ತಮಗೆ ಅರಮನೆ ಇದ್ದು, ನೀವು ನಮ್ಮನ್ನೆಲ್ಲಾ ಸಲಹುತ್ತಿರುವುದರಿಂದ self employed ಎಂಬ ಪದವು ತಮ್ಮ ಕಾರ್ಯವೈಖರಿಗೆ ಹತ್ತಿರವಾಗಿದೆ.
ರಾಜರು : ಸರಿ ನಾವು self employed ಎಂದು ತಿಳಿಯೋಣ. ಆದರೆ ಇಡೀ ಪ್ರಪಂಚವೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವಾಗ ಈ ಹೆಣ್ಣು ಮಗಳಾರೊ ನಮಗೆ ಸಾಲ ಕೊಡುವಳಂತೆ.
ದಿವಾನರು: ಮಹಾಪ್ರಭು , ಈಕೆ ಸಾಮನ್ಯ ಹೆಣ್ಣು ಮಗಳಲ್ಲ ಪ್ರಭು. ನಮ್ಮ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ತಾಯಿ ಚಾಮುಂಡೇಶ್ವರಿಯೇ ಈ ಹೆಣ್ಣಿನ ಹಾಗೆ ಬಂದಿದ್ದಾಳೆ.
ಟೆಲಿಕಾಲರ್: ಸರ್, ಈಗ ಹೇಳಿ ಸಾರ್ ನೀವು salaried or self employed ? ಎಷ್ಟು ಲೋನ್ ಬೇಕು ?
ರಾಜರು : ನಾವು self employed . ನಮಗೆ ೧೦ ಲಕ್ಷ ಸಾಲ ಬೇಕಾಗಿದೆ.
ಟೆಲಿಕಾಲರ್: ಆಯ್ತು ಸಾರ್. ನಮ್ ಬ್ಯಾಂಕಿದ ಎಕ್ಸಿಕುಟಿವ್ ನಿಮ್ಮ ಮನೆಗೆ ಬರ್ತಾರೆ. ಅವರಿಗೆ ಎಲ್ಲಾ ಡಾಕ್ಯುಮೆಂಟ್ಸ್ ಕೊಡಿ ಸರ್.
ರಾಜರು : ಮಗಳೆ ನಮ್ಮದು ಮನೆಯಲ್ಲ.. ಅರಮನೆ.. !!
ಟೆಲಿಕಾಲರ್: ಆಯ್ತು.. ಆಯ್ತು.. ನಿಮ್ಮ ಅರಮನೆಗೆ ಬರ್ತಾರೆ, ಅವರಿಗೆ ಎಲ್ಲಾ ಡಾಕ್ಯುಮೆಂಟ್ಸ್ ಕೊಡಿ.
ಸ್ವಲ್ಪ ದಿನಗಳ ನಂತರ ಬ್ಯಾಂಕಿದ ಎಕ್ಸಿಕುಟಿವ್ ಮೈಸೂರ್ ಅರಮನೆಗೆ ಬಂದ.. ಅರಮನೆ ನೋಡಿ ಆಶ್ಚರ್ಯಗೊಂಡ..

ಎಕ್ಸಿಕುಟಿವ್ ದಿವಾನರನ್ನು ಕಂಡು: ಟ್ಯಾಕ್ಸ್ ಪ್ರೂಫ್, ಅಡ್ರಸ್ ಪ್ರೂಫ್ ಕೊಡಿ.
ದಿವಾನರನ್ನು : ಟ್ಯಾಕ್ಸ್ ಪ್ರೂಫ್,ಅಡ್ರಸ್ ಪ್ರೂಫ್ ನಮ್ಮ ರಾಜರ ಬಳಿ ಇಲ್ಲ..
(ಎಕ್ಸಿಕುಟಿವ್ ಗೆ ತಲೆ ಕೆಟ್ ಹೋಯ್ತು)

ಎಕ್ಸಿಕುಟಿವ್ : ಮತ್ತೆ ಎನಿದೆ ?
ದಿವಾನರು: ಈ ಅರಮನೆ ಇದೆ.
ಎಕ್ಸಿಕುಟಿವ್ : ಈ ಅರಮನೆ ನಿಮ್ಮದೆ ಅಂತ ಒಂದು ಪತ್ರ ಕೊಡಿ.
ದಿವಾನರು ಪತ್ರ ಕೊಟ್ರು. ಅರಮನೆ ನೋಡಿದ ಬ್ಯಾಂಕ್ ಸಿಬ್ಬಂಧಿ ಲೋನ್ ಅಪ್ರೊವ್ ಮಾಡಿದರು.. ಲೋನ್ ಅಪ್ರೊವ್ ಆಯ್ತು. ರಾಜರ ಬ್ಯಾಂಕ್ ಅಕೌಂಟ್ ಇಲ್ಲದ ಕಾರಣ ಲೋನ್ ಅನ್ನು ಕ್ಯಾಶ್ ರೊಪದಲ್ಲಿ ಕೊಟ್ಟರು. ಆದರೆ ಇ.ಎಮ್.ಐ. ಕಟ್ಟುವ ವಿಧಾನವನ್ನು ಹೇಳುವುದನ್ನು ಮರೆತರು. ರಾಜರಿಗೆ, ದಿವಾನರಿಗೆ ಲೋನ್ ಪ್ರಕ್ರಿಯೆ ಸರಿಯಾಗೆ ಅರ್ಥವಾಗಿರಲಿಲ್ಲ.

ರಾಜರು, ಮಂತ್ರಿಗಳಿಗೆ ಇ.ಎಮ್.ಐ. ಬಗ್ಗೆ ಎನೂ ಗೊತ್ತಿರಲಿಲ್ಲ. ಇ.ಎಮ್.ಐ. ಕಟ್ಟಲಿಲ್ಲ.
ಸ್ವಲ್ಪ ದಿನಗಳ ಬಳಿಕ.. ತುಂಬಿದ ರಾಜ ಸಭೆಯಲ್ಲಿ ರಾಜರ ಮೊಬೈಲ್ ಗೆ ಲೋನ್ ರಿಕವರಿಯವರಿಂದ ಕರೆ ಬಂತು..
ರಿಕವರಿಯವನು : ರಿ ಸ್ವಾಮಿ.. ಯಾಕ್ರಿ ಇ.ಎಮ್.ಐ. ಕಟ್ಟಿಲ್ಲ ?
ರಾಜರು: ೧೦ ನಿಮಿಷದ ನಂತರ ಮತ್ತೆ ಕರೆ ಮಾಡಿ. ಇ.ಎಮ್.ಐ. ಬಗ್ಗೆ ಚರ್ಚೆ ಮಾಡಿ ನಿಮಗೆ ಹೇಳುತ್ತೇವೆ.
ಫೊನ್ ಕಟ್ ಆಯ್ತು.
ರಾಜರು: ಈ ಇ.ಎಮ್.ಐ. ಕಟ್ಟುವುದು ಎಂದರೆ ಎನು ಮಂತ್ರಿಗಳೆ. ?
ಮಂತ್ರಿ : ಮಹಾಪ್ರಭು , ನಮ್ಮ ಗೋಶಾಲೆಯಲ್ಲಿ ನಾವು ಹಸು, ಎಮ್ಮೆಗಳನ್ನು ಕಟ್ಟಿಲ್ಲವೆ, ಅದೇ ರೀತಿ ಈ ಇ.ಎಮ್.ಐ ಅನ್ನುವುದು ಯಾವುದೊ ಪ್ರಾಣಿ ಇರಬೇಕು ಪ್ರಭು.
ರಾಜರು: ಹಾಗೋ ...
೧೦ ನಿಮಿಷದ ನಂತರ
ರಿಕವರಿಯವನು : ರಿ ಸ್ವಾಮಿ.. ಯಾಕ್ರಿ ಇ.ಎಮ್.ಐ. ಕಟ್ಟಿಲ್ಲ ?
ರಾಜರು : ಮಗು, ರಾಜ್ಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ.. ಈಗ ನಮ್ಮ ಗೋಶಾಲೆಯಲ್ಲಿರುವು ಹಸು ಎಮ್ಮೆಗಳೇ ಸಾಕು. ನಮಗೆ ಈ ಇ.ಎಮ್.ಐ. ಕಟ್ಟುವುದರಲ್ಲಿ ಆಸಕ್ತಿಯಿಲ್ಲ.

-- ಮುಂದುವರೆಯುತ್ತದೆ.... ( ನಿಮಗೆ ಇಷ್ಟವಾದರೆ ಮಾತ್ರ... ಇಷ್ಟವಗಿಲ್ಲವಾದರೆ ದಯವಿಟ್ಟು ಹೇಳಿ.. ಇಲ್ಲಿಗೆ ನಿಲ್ಲುಸುತ್ತೇನೆ..)