ರಾತ್ರಿ ವಿಧವೆ, ನಾನು ವಿಧುರ

3.57143

ಈ ರಾತ್ರಿಗಳಲ್ಲಿ ನಾನೂ ರಾತ್ರಿಯೂ ದಿವ್ಯ ಮೌನ ಮರೆತು,
ಒಬ್ಬರನ್ನೊಬ್ಬರು ನೋಡುತ್ತೇವೆ.
ನಾನೂ ಮಾತಾಡೊಲ್ಲ, ರಾತ್ರಿಯೂ ಮೂಗಿ
ಆದರೂ ಕಳೆಯುತ್ತೇವೆ ಒಂದಾಗಿ.

ಒಂದು ರಾತ್ರಿ, ನಾನು ರಾತ್ರಿಗೆ ಕೇಳಿದೆ
ಎಲ್ಲಿ ನಿನ್ನ ಪ್ರಿಯತಮ? ರಾತ್ರಿ ಹೇಳಿದಳು,
ನಾನು ಒಬ್ಬಂಟಿ ವಿಧವೆ,
ನಿನ್ನೆ ಸಂಜೆಯಷ್ಟೇ ನನ್ನ ಹಗಲುರಾಯ ತೀರಿಹೋದ.
ನಾನು ಕೇಳಿದೆ, ಆದರೂ ಯಾರಿಗಾಗಿ ಬದುಕಿರುವೆ?
ರಾತ್ರಿ ಹೇಳಿತು, ಯಾರಿಗಾಗಿ ಬದುಕದಿರುವುದಕ್ಕೆ ನನಗೆ ರಾತ್ರಿ ಎನ್ನುವರು,
ನಿಮ್ಮವರಾರೋ ಸತ್ತರೆ ನನಗೆ ಹೋಲಿಸುತ್ತೀರಿ
ನಾನು ಸತ್ತರೆ ಬೆಳಗಾಯಿತೆಂದು ಸಂಭ್ರಮಿಸುತ್ತೀರಿ.

ನಾನು ಮೂಕನಾದೆ, ಮತ್ತೇ ರಾತ್ರಿಯೇ ಕೇಳಿದಳು,
ನಾನು ಸಾಯುವುದರೊಳಗಾಗಿ ನೋಡಬೇಕಿದೆ ಹಗಲನ್ನ ತೋರಿಸುವೆಯಾ?
ನಾನು ಬರಿದೇ ನಕ್ಕೆ,
ನಾನು ಬೆಳಗನ್ನು ನೋಡೇನೇ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಠದ ಅವ್ರೆ ನಿಮ್ಮ ಈ ಕವನ ನನಗೆ ಇಷ್ಟ ಆಯ್ತು.. ಸರಳವಾಗಿದ್ದು ಅರ್ಥವತ್ತಾಗಿದೆ.. ಈ ಹಗಲು-ಇರುಳು ಅನಾದ ಕೂಡಲೇ ನನಗೆ ಒಂಬ್ಬ 'ಮಹಾನ್' ವ್ಯಕ್ತಿ ಕಣ್ಣಿಗೆ(ಮನಸೀಗೆ) ತೋಚುತ್ತಾರೆ ಅವ್ರ ಬಗ್ಗೆ ನಿಮಗೆ ಮುಂದೆ ಗೊತ್ತಾಗಲಿದೆ, ಕಾಯಿರಿ...ಇಲ್ಲ ರಾತಿ ೧೨ ಘಂಟೆ ಮೇಲೆ ಆನ್ ಲಯ್ನ್ ಇರ್ವವರನ್ನ ನೋಡಿರಿ 'ಅವರೇ' >> ಅವರು:) :) ಶುಭವಾಗಲಿ ಧನ್ಯವಾದಗಳು

ಏನ್ರೀ ಸಪ್ತಗಿರಿ ವಾಸಿ! ಏನೋ twist ಇಟ್ಟಿದಿರಾ? ರಾತ್ರಿ 2 ಗಂಟೆಗೆ ಎಲ್ಲಿ ಕಾಣಿಸ್ತಾರೆ ಆ ಮಹಾನ್ ವ್ಯಕ್ತಿ? ಕಾವ್ಯಮಯವಾಗಿ ಹೇಳ್ತಾಯಿದಿರೋ ಅಥವಾ ನೈಜವಾಗಿ ಹೇಳ್ತಿದಿರೋ? ವಿವರಣೆ ಕೊಡಿ

ಸಾರಥಿ, ಆಶಯ ತುಂಬ ಆಶಾದಾಯಕವಾಗಿತ್ತು, ಈ ನೂವು ಪುಟಿದೇಳುವುದೇ ಹಗಲು ಜಾರಿದ ನಂತರ, ಗವ್ವನೇ ಕತ್ತಲೆ, ಮೌನ ಮತ್ತೆ ಎಲ್ಲವೂ ನೆನಪಾಗುವ ಸಮಯ. ತುಂದ ಧನ್ಯವಾದಗಳು. ಓದಿ ಓದಿಸಿ ಲೈಫ್ ನಿಮ್ಮದಾಗಿಸಿ :)

>>>ಸಾರಥಿ, !! ಮಹೇಶ್ವರ ಅವರೆ, ಪಾರ್ಥ ಅನ್ನಿ ಪರವಾಗಿಲ್ಲ. ಅರ್ಜುನ ಮತ್ತು ಕೃಷ್ಣನಿಗೆ ಅಷ್ಟೊಂದು ಗೆಳೆತನ, ಪ್ರೀತಿ ಇತ್ತು. ಆದರೆ ಪಾರ್ಥಸಾರಥಿಯನ್ನು ಬರೀ "ಸಾರಥಿ" ಅಂದರೆ ಹೇಗೆ? ತಾವು ರಶ್ಯಾದಲ್ಲಿರುವುದಾ :) -ಗಣೇಶ.

ಮಠದ ಅವ್ರೆ ಸಿಗಲಿಲ್ಲವೇ" ಹೊಳೆಯಲಿಲ್ಲವೇ:) ಇನ್ನುಈ ವಿಷಯವಾಗಿ(ಶ್ರೀ ಮಹಾನ್) ನಿಮ್ಮನ್ನು ಹೆಹ್ಚು ಕಾಯಿಸಿ-ಸತಾಯಿಸಿ ಉಪಯೋಗವಿಲ್ಲ! ) ನೋಡಿ 'ಅವರು' ನಿಮಗೆ ಇಲ್ಲಿ ಸಿಗುತ್ತಾರೆ http://sampada.net/user/%E0%B2%97%E0%B2%A3%E0%B3%87%E0%B2%೬ (ಅವರ ಜೊತೆ ನಾನೂ ಸಹಾ -ಮಧ್ಯರಾತ್ರಿ -ಸಂಪದದಲ್ಲಿ):)

ಕ್ಚಮಿಸಿ ಆ ಲಿಂಕು ತಪ್ಪಿತ್ತು:) ಈ ಕೆಳಗಿನ ಬರಹ -ಬರೆದ -ಆವರೆ 'ಆ ಮಹಾನ್' ವ್ಯಕ್ತಿ..... http://sampada.net/blog/%E0%B2%95%E0%B2%BF%E0%B2%9A%E0%B2%A8%E0%B3%8D-%E0%B2%AE%E0%B3%86-%E0%B2%9A%E0%B2%AE%E0%B3%8D%E0%B2%AE%E0%B2%95%E0%B3%8D-%E0%B2%9A%E0%B2%B2%E0%B3%8D%E0%B2%B2%E0%B3%8B-%E0%B2%93/20/11/2011/34314

ಈ ರಾತ್ರಿಗಳಲ್ಲಿ ನಾನೂ ರಾತ್ರಿಯೂ ದಿವ್ಯ ಮೌನ ಮರೆತು, ಒಬ್ಬರನ್ನೊಬ್ಬರು ನೋಡುತ್ತೇವೆ. ನಾನೂ ಮಾತಾಡೊಲ್ಲ, ರಾತ್ರಿಯೂ ಮೂಗಿ ಆದರೂ ಕಳೆಯುತ್ತೇವೆ ಒಂದಾಗಿ. >>>>>ಆ ಸಾಲು ನಿಮಗಸ್ತೆ ಅಲ್ಲ(ನಿಮಗೆ ಒಂದು ವಿಧವಾಗಿ >>ಅಂದ್ರೆ ? ಅದೇ ಪ್ರೀತಿ-ಪ್ರೇಮ:) ಹೊಂದುತ್ತೆ, ಮತ್ತು ಅದೇ ಕವನದ ಆ ಸಾಲುಗಳು 'ಮಧ್ಯ ರಾತ್ರಿ ಎದ್ದು(ಅವ್ರು ಹಗಲು ದುರ್ಬೀನು ಹಾಕ್ ನೋಡಿದರೂ ಸಿಕ್ಕಲ್ಲ:)) ಸಂಪದದಲ್ಲಿ ಸಕ್ರಿಯ ಆಗ್ತಾರೆ:) ಆ ಸಾಲುಗಳು ಇನ್ನೊಂದು ಅರ್ಥದಲ್ಲಿ 'ಅವರಿಗೆ' ಸ್ಯೂಟ್ ಆಗ್ತವೆ(ನನ್ನ ಊಹೆ)... ಈಗಲೂ ಅರ್ಥ ಆಗದಿದ್ದರೆ! ಇವತ್ತು ೧೦ ಘಂಟೆ ಮೇಲೆ 'ಅವರೇ' ನಿಮ್ಮ ಸಂಶಯ ನಿವಾರಿಸುತ್ತಾರೆ.... ಅವರ ಬಗ್ಗೆ ಗೊತ್ತಾಗಬೇಕಾದರೆ ,ಅವರ ಬರಹಗಳಿಗೆ ಬೇರೆವ್ರು ಬರೆದ ಪ್ರತಿಕ್ರಿಯೆ ಮತ್ತು 'ಅವರು' ಬೇರೆವ್ರಿಗ್ ಬರೆದ ಪ್ರತಿಕ್ರಿಯೆ ನೋಡಿ, ಆಗ ಎಲ್ಲ ಅರ್ಥ ಆಗುತ್ತೆ... >>> ಹೊಸ ವರ್ಷದ ಮುಂಗಡ ಶುಭಾಶಯಗಳು......

ಮಹೇಶ್ವರ ಅವರೆ, ಅಂಧೇರಿ ರಾತೋಂ ಮೇ.. ಸಂಪದ ಬ್ಲಾಗೋಂ ಮೇ.. ಅಂಧೇರಿ ರಾತೋಂ ಮೇ.. ಸಂಪದ ಬ್ಲಾಗೋಂ ಮೇ.. .......................ಜಿಸೆ ಲೋಗ್ ’ಗಣೇಶ’ ಕಹತೇಂ ಹೇಂ.. :) ಯಾರೋ ಮಹಾನ್ ವ್ಯಕ್ತಿ ಎಂದು ತಿಳಕೊಳ್ಳಬೇಡಿ. ಈ ಸಪ್ತಗಿರಿವಾಸಿಯವರೆಲ್ಲಾ ನನ್ನ (ದೇಹದ ಗಜ ಗಾತ್ರಕ್ಕೆ ಹೋಲಿಸಿ) ಮಹಾನ್ ಎಂದು ತಮಾಶೆ ಮಾಡುವುದು ಅಷ್ಟೇ. :) -ಗಣೇಶ.

ನಿಮ್ದು ಗಜ ಗಾತ್ರದ ಪ್ರತಿಭೆ ಅಂತ ಮಾತ್ರ ಗೊತ್ತಿತ್ತು, ಆದರೆ ಈಗ ನೀವೂ ಗಜಗಾತ್ರದವರು ಎಂದು ತಿಳಿದು ಗಂಟಲಲ್ಲಿ ನೀರೇ ಇಳಿಯುತ್ತಿಲ್ಲ.

ಮಹೇಶ್ವರ ಅವರೆ, ನಿಮ್ಮ ಕವಿತೆ ಚೆನ್ನಾಗಿದೆ. ನನ್ನ ಮೆಚ್ಚಿನ ರಾತ್ರಿ.. ವಿಧವೆ/ ವಿಧುರ ಶಬ್ದಗಳು ನನಗೂ ಗಂಟಲು ಕಟ್ಟಿದ ಹಾಗೆ ಆಗುವುದು.. -ಗಣೇಶ.

ವಾವ್ ವಾಹ್ವ್ : ಕ್ಯಾ ಶಾಯರೀ ಹೈ? ಅದ್ಭುತ ರಚನೆ ಗಣೇ ಸಣ್ಣ ! ಜಗವೆಲ್ಲ ಮಲಗಿರಲು ---------------? ಮಠದ ಅವ್ರು ನಿಮ್ಮ ಪ್ರತಿಭೆಗೆ ದಂಗಾಗಿದ್ದಾರೆ !!!!!!!!!!!!!! >>>>>>>>>>>>>ನಿಮ್ಮ ಕೀರ್ತಿ ಪತಾಕೆಯನ್ನ ಎಲ್ಲೆಡೆ 'ಪಸರಿಸುತ್ತಿರುವ' ಈ 'ಸಪ್ತಗಿರಿವಾಸಿ' ಮೇಲೆ ನಿಮಗೆ ಬೊ ಪ್ರೀತಿ ಅಲ್ವೇನನ್ನ? (

ಮಹೇಶ್ವರ ಮಠದರಿಗೆ ವಂದನಗೆಳು ರಾತ್ರಿಯ ಮನದ ದುಗುಡಗಳನ್ನು ನಿರೂಪಕ ಬಹಳ ಅರ್ಥಪೂರ್ಣವಾಗಿ ಸರಳವಾಗಿ ನಿರೂಪಿಸುತ್ತಾನೆ. ರಾತ್ರಿಗೆ ಮೂಗಿ, ಒಬ್ಬಂಟಿ, ವಿಧವೆ ಎಷ್ಟೊಂದು ಹೋಲಿಕೆಗಳನ್ನು ನೀಡಿದ್ದೀರಿ, ರಾತ್ರಿ ಹಗಲಿಗೆ ಮುಖಾಮುಖಿಯಾಗದಿರುವುದಕ್ಕೆ ನನಗೆ ಬಹಳ ವಿಷಾದವಿದೆ, ರಾತ್ರಿಯ ಈ ಸಣ್ಣ ಕೊರಿಕೆಯನ್ನು ಈಡೇರಿಸುವುದು ಹೇಗೆ ? ನನ್ನನ್ನು ಇದೊಂದು ಪ್ರಶ್ನೆಯಾಗಿ ಕಾಡುತ್ತಿದೆ. ರಾತ್ರಿಯ ಸಮಸ್ಯೆಯನ್ನು ತೆರೆದಿಟ್ಟ ನೀವೇ ಇದಕ್ಕೆ ಸಮಜಾಯಿಷಿ ನೀಡಬೇಕು.

ಹಗಲನ್ನು ರಾತ್ರಿಯ ಪ್ರೇಮುಯನ್ನಾಗಿರಿಸಿ, ಅವರಿಬ್ಬರ ಅಂತರ ನಿರಂತರ ಎಂಬುದನ್ನು ಹೇಳುವುದು ನನ್ನ ಉದ್ದೇಶ. ಧನ್ಯವಾದಗಳು, ನಿಮ್ಮ ಬತಹಗಳನ್ನೂ ಓದುತ್ತಿದ್ದೇನೆ.

ಪಾಟೀಲರೇ, ಹಗಲನ್ನು ರಾತ್ರಿಯ ಪ್ರೇಮುಯನ್ನಾಗಿರಿಸಿ, ಅವರಿಬ್ಬರ ಅಂತರ ನಿರಂತರ ಎಂಬುದನ್ನು ಹೇಳುವುದು ನನ್ನ ಉದ್ದೇಶ. ಧನ್ಯವಾದಗಳು, ನಿಮ್ಮ ಬತಹಗಳನ್ನೂ ಓದುತ್ತಿದ್ದೇನೆ.