ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ!

ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ!

ಬರಹ

ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ!

ಬಿಜೆಪಿ ತನ್ನನ್ನು ರಾಷ್ಟ್ರೀಯ ಪಕ್ಷ ಎಂದು ಕರೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ರಾಷ್ಟ್ರೀಯತೆಯನ್ನು ಗುತ್ತಿಗೆ ಹಿಡಿದ ಪಕ್ಷದಂತೆಯೂ ವರ್ತಿಸುತ್ತಾ ಬಂದಿದೆ. 'ಭಾರತ ಮಾತೆ' ಎಂದು ಅದು ಕಲ್ಪಿಸಿಕೊಂಡ ಚಿತ್ರಕ್ಕೆ ಪೂಜೆ ಮಾಡುತ್ತ ತನ್ನನ್ನು ರಾಷ್ಟ್ರಭಕ್ತರ ಪಕ್ಷವೆಂದೂ ಕರೆದುಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ 'ಸಾಂಸೃತಿಕ ರಾಷ್ಟ್ರೀಯತೆ' ಎಂಬುದೊಂದನ್ನು ನಿರೂಪಿಸಿಕೊಂಡು ರಾಷ್ಟ್ರಾದ್ಯಂತ ಅನೇಕ ರೀತಿಯ ಧಾರ್ಮಿಕ ಮೆರವಣಿಗೆಗಳನ್ನೂ, ಜಾಥಾಗಳನ್ನೂ, ಅಭಿಯಾನಗಳನ್ನೂ ನಡೆಸಿ ಕೆಲವೇ ರಾಜ್ಯಗಳಲ್ಲಿದ್ದ ತನ್ನ ಪ್ರಭಾವವನ್ನು ಹಲವು ರಾಜ್ಯಗಳಿಗೆ ವಿಸ್ತರಿಸಿಕೊಂಡು, ಕೇಂದ್ರದಲ್ಲೂ ಒಮ್ಮೆ ಅಧಿಕಾರ ನಡೆಸಿದೆ. ಈಗ ಕರ್ನಾಟಕದ ಮೂಲಕ ಈವರೆಗೆ ಕಾಲಿಡಲಾಗದಿದ್ದ ದಕ್ಷಿಣ ಭಾರತಕ್ಕೂ ಅಧಿಕಾರದ ಕಾಲು ಇಟ್ಟಿದೆ. ಆದರೆ ಅದು ಹಾಗೆ ಕಾಲಿಡುವಾಗ, ಮೊದಲ ಹೆಜ್ಜೆಯಲ್ಲೇ ತನ್ನ ಮುಖಕ್ಕೆ ಪೂರ್ತಿ ಮಸಿ ಬಳಿದುಕೊಂಡೇ ಕಾಲಿಟ್ಟಿದೆ. ಬಿಜೆಪಿ ಪಕ್ಷೇತರರನ್ನು ಅಕ್ಷರಶಃ (ಗಣಿ ಧಣಿಗಳ ಹೆಲಿಕಾಪ್ಟರುಗಳಲ್ಲಿ)'ಹಾರಿಸಿಕೊಂಡು' ಬಂದ 'ಬಗೆ'ಗಳನ್ನು ಜನತೆ ಇನ್ನೂ ಜೀರ್ಣಿಸಿಕೊಳ್ಳುತ್ತಿರುವಾಗಲೇ, ಇತರ ಪಕ್ಷಗಳ ಐವ್ವರು ಶಾಸಕರನ್ನು ಭೂಗತ ಕಾರ್ಯಾಚರಣೆಯ ಮೂಲಕ 'ಅಪಹರಿಸಿ'ಕೊಂಡು ಬಂದಿರುವ ಬಗೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತಾನು 'ವಿಭಿನ್ನ' ಎಂದು ಹೇಳಿಕೊಂಡು ಅಧಿಕಾರದ ಹತ್ತಿರಕ್ಕೆ ಬಂದ ಪಕ್ಷ ಈಗ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಹಿರಂಗವಾಗಿಯೇ, ತಾನು ಇತರ ಪಕ್ಷಗಳಿಂದ ಕಲಿಯಬೇಕಾದ್ದೆನ್ನೆಲ್ಲ ಕಲಿತು ಅವುಗಳನ್ನು ಚಾಲ್ತಿಗೆ ತರಲು ಸಿದ್ಧವಾಗಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವ ಭಂಡ ಧೈರ್ಯ ಪ್ರದಶಿ೯ಸಿದೆ. ಅಲ್ಲದೆ, ಅವನ್ನು ಕೂಡಲೇ ಚಾಲ್ತಿಗೂ ತಂದು ತನ್ನ ಅಧಿಕಾರವನ್ನು ಸ್ಥಿರಗೊಳಿಸಿಕೊಳ್ಳುವ ಪ್ರಯತ್ನ ಮಾಡಿದೆ! ನಿಜವಾಗಿಯೂ ಈ ಪಕ್ಷ 'ವಿಭಿನ್ನ'ವೇ!!

ಪಕ್ಷಾಂತರ ನಮ್ಮ ರಾಜಕಾರಣದಲ್ಲಿ ಹೊಸದೇನಲ್ಲ. ಕೆಲವು ಪಕ್ಷಾಂತರಗಳು ನಿಜವಾಗಿಯೂ ತಾತ್ವಿಕ ಕಾರಣಗಳ ಮೇಲೆ ಅನಿವಾರ್ಯವೆಂಬಂತೆ ನಡೆದಿದ್ದಿರೆ, ಬಹಳಷ್ಟು ಪಕ್ಷಾಂತರಗಳು ಹಣ-ಅಧಿಕಾರಗಳಿಗೆಂದೇ ದಿಢೀರನೆ ನಡೆದಿವೆ ಹಾಗೂ ಅವು ಸಹಜವಾಗಿಯೇ ಖಂಡನೆಗೆ ಒಳಗಾಗಿವೆ. ಆದರೆ ಕರ್ನಾಟಕದಲ್ಲಿ ಈಗ ನಡೆದಿರುವುದು ಇಂತಹ ಹಳೆಯ ಶೈಲಿಯ ಪಕ್ಷಾಂತರವಲ್ಲ. ಬದಲಿಗೆ ಅದು, ನಮ್ಮ ಪ್ರಜಾಪ್ರಭುತ್ವದ ಮೂಲಾಧಾರವಾದ ಪಕ್ಷ ರಾಜಕಾರಣವನ್ನೇ ಅಸಂಗತ ಮತ್ತು ಹಾಸ್ಯಾಸ್ಪದಗೊಳಿಸುವಂತಹ ಬುಡಮೇಲು ಕೃತ್ಯ. ತಾವು ಚುನಾಯಿತರಾದ ಒಂದೂವರೆ ತಿಂಗಳಲ್ಲೇ ತಮ್ಮನ್ನು ಪೋಷಿಸಿದ ಪಕ್ಷಕ್ಕೆ ಮತ್ತು ಆರಿಸಿದ ಜನರ ಕಪಾಳಕ್ಕೆ ಬಾರಿಸಿದಂತೆ ಪಕ್ಷಾಂತರ ಮಾಡಿರುವ ಈ ಶಾಸಕರು, ತಮ್ಮ ಈ ಪಕ್ಷಾಂತರಕ್ಕೆ ನೀಡಿರುವ ಕಾರಣಗಳು ಇಲ್ಲಿ ಪ್ರಸ್ತಾಪಿಸುವುದೂ ಅನವಶ್ಯಕವೆನ್ನಿಸುವಷ್ಟರ ಮಟ್ಟಿಗೆ ಬೇಜವಾಬ್ದಾರಿಯವೂ, ಕ್ಷುದ್ರವೂ ಆಗಿವೆ. ಪಕ್ಷಾಂತರ ಮಾಡಿದ ತಕ್ಷಣ ಅವರು ಅಲಂಕರಿಸಿರುವ ಅಧಿಕಾರ ಸ್ಥಾನಗಳೇ ಈ ಪಕ್ಷಾಂತರಿಗಳ ನೀಚ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತವೆ. ಆದರೆ ಇದಕ್ಕಿಂತ ಹೆಚ್ಚಾಗಿ, ಈ ಪಕ್ಷಾಂತರಗಳನ್ನು ಅವರವರ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿಸಿ ಮತ್ತೆ ಮರುಚುನಾವಣೆಗಳಲ್ಲಿ ಅವರನ್ನು ಗೆಲ್ಲಿಸಿಕೊಡುವ ಭರವಸೆಯೊಂದಿಗೆ ಮಾಡಲಾಗಿದೆ ಎಂಬುದೇ ಈ ವಿದ್ಯಮಾನದ ಅತ್ಯಂತ ಭಯಾನಕವೆನಿಸುವ ಮುಖವಾಗಿದೆ. ಅಂದಹಾಗೆ, ತಮ್ಮನ್ನು ಆರಿಸಿದ ಮತದಾರರ ಮುಖಕ್ಕೆ ಬಾರಿಸಿದಂತೆ ರಾಜೀನಾಮೆ ನೀಡಿರುವ ಈ ಶಾಸಕರು, ಅನತಿ ಕಾಲದಲ್ಲೇ ಅದೇ ಮತದಾರರಿಂದ ಮತ್ತೆ ಆರಿಸಿ ಬರುವ ಭರವಸೆಯನ್ನಾದರೂ ಯಾವ ಧೈರ್ಯದ ಮೇಲೆ ಹೊಂದಿದ್ದಾರೆ?

ಅದು ಹಣದ ಭರವಸೆ. ಮತದಾರರ ಎಂತಹ ನೈತಿಕ ಕ್ರೋಧವನ್ನೂ ಮಣಿಸಬಲ್ಲ, ತಣಿಸಬಲ್ಲ ಹಣದ ರಾಶಿ ರಾಶಿಯ ಭರವಸೆ. ಈವರೆಗೆ ಮತದಾರರ ಕಲ್ಪನೆಗೂ ಸಿಗದಿದ್ದಷ್ಟು ಹಣವನ್ನು ಚೆಲ್ಲಿದರೆ, ಎಂತಹ ಕಷ್ಟದ ಕ್ಷೇತ್ರವನ್ನಾದರೂ ಸುಲಭವಾಗಿ ಗೆಲ್ಲಬಹುದು ಎಂಬುದು ಕಳೆದ ಚುನಾವಣೆಗಳಲ್ಲಿ ಬಿಜೆಪಿಗೆ ಸಾಬೀತಾಗಿ ಹೋಗಿದೆ. ಹಾಗೆ-ಇತರ ಪಕ್ಷಗಳು ಈವರೆಗೆ ಕಲ್ಪಿಸಿಕೊಳ್ಳಲೂ ಆಗದಷ್ಟು-ಹಣವನ್ನು ಸರಬರಾಜು ಮಾಡಬಲ್ಲವರು ಇಂದು ಆ ಪಕ್ಷದ ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡಿದ್ದಾರೆ. ಜೊತೆಗೆ ಕೆಲವು ವೀರಶೈವ ಮಠಾಧೀಶರೂ ಈ ಕಾರ್ಯಾಚರಣೆಗೆ ಕುಮ್ಮಕ್ಕು ನೀಡುತ್ತಿರುವ ಸುದ್ದಿಗಳಿವೆ. ಹೀಗಾಗಿ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳನ್ನು ಬಹಿರಂಗವಾಗಿಯೇ ಧಿಕ್ಕರಿಸುವ ಧಾಷ್ಟ್ರ್ಯ ಈ ಪಕ್ಷಕ್ಕೆ ಬಂದಿದೆ. ಜನಾಭಿಪ್ರಾಯವೆಂಬುದನ್ನೇ ಅಸಂಗತ, ಅಸಂಬದ್ಧ ಮತ್ತು ಅಪವಿತ್ರಗೊಳಿಸಲೆಣಿಸುವ ಬಿಜೆಪಿಯ ಈ ದುಸ್ಸಾಹಸ, ತನಗೆ ಸ್ಪಷ್ಟ ಬಹುಮತ ನೀಡದ ರಾಜ್ಯದ ಜನತೆಗೆ ತಕ್ಕ ಪಾಠ ಕಲಿಸುವ ಸೇಡಿನ ಕ್ರಮದಂತೆಯೇ ಇದೆ. ಹಾಗೇ, ಹೀಗೆ ಸಂಸದೀಯ ಪ್ರಜಾಪ್ರಭುತ್ವ ಪದ್ಧತಿಯನ್ನೇ ಅಪಹಾಸ್ಯಕ್ಕೀಡು ಮಾಡುವಂತಹ ರಾಜಕಾರಣ ಮಾಡುವವರು ಸಂಸದೀಯ ಪ್ರಜಾಪ್ರಭುತ್ವದ ವಿಶ್ವಸನೀಯತೆಯ ಬಗ್ಗೆಯೇ ಸಂದೇಹ ಹರಡುತ್ತಿರುವ ನಕ್ಸಲೀಯರನ್ನು ಯಾವ ನೈತಿಕತೆಯ ಮೇಲೆ ವಿರೋಧಿಸುವರೋ ಕಾಣದಾಗಿದೆ!

ಹಾಗೆ ನೋಡಿದರೆ, ಇದು ಮೂಲತಃ ರಾಷ್ಟ್ರದ್ರೋಹಿ ಕೆಲಸವೇ ಆಗಿದೆ. ಏಕೆಂದರೆ, ನಮ್ಮ ರಾಷ್ಟ್ರ, ರಾಷ್ಟ್ರೀಯತೆಗಳೆಂಬ ಪರಿಕಲ್ಪನೆಗಳು ರೂಪುಗೊಂಡಿರುವುದೇ ನಮ್ಮ ಸಂವಿಧಾನದ ಮೂಲಕ ಒಂದು ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಗೆ ನಮ್ಮನ್ನು ನಾವು ಒಪ್ಪಿಸಿಕೊಂಡಿರುವುದರಿಂದಾಗಿ. ಆದರೆ ಹಣ ಬಲ ಬಳಸಿಕೊಂಡು ಈ ವ್ಯವಸ್ಥೆಗೆ ಸವಾಲೆಸೆಯುವ, ಅದನ್ನು ಅಪಹಾಸ್ಯಗೊಳಿಸುವ ಕರ್ನಾಟಕದ ಈ ಭಂಡ ಪಕ್ಷಾಂತರ ಪ್ರಕರಣ, ನಿಜವಾಗಿ ಒಂದು ರಾಷ್ಟ್ರದ್ರೋಹಿ ಕೆಲಸವೇ ಆಗಿದೆ. ಇದನ್ನು ಆರೆಸ್ಸೆಸ್ ರಾಷ್ಟ್ರಭಕ್ತರೂ ಸಹಿಸುತ್ತಿರುವುದು ಆಶ್ಚರ್ಯಕರವೇನಲ್ಲ. ಏಕೆಂದರೆ, ನಮ್ಮ ಸಂವಿಧಾನ ನಿರೂಪಿಸುವ ರಾಷ್ಟ್ರೀಯತೆಯನ್ನು ಕಟ್ಟಿದ ಸ್ವಾತಂತ್ರ್ಯ ಹೋರಾಟದಲ್ಲಿ ಇವರ್ಯಾರೂ ಭಾಗವಹಿಸಿದವರಲ್ಲ. ಇವರ ಇಂದಿನ ರಾಜಕೀಯ ಮುಖವಾದ ಬಿಜೆಪಿ ಬೆಳೆದಿರುವುದೇ ನಮ್ಮ ರಾಷ್ಟ್ರೀಯ ಹೋರಾಟದ ಆದರ್ಶಗಳ ವಿರುದ್ಧವಿದ್ದ ಪಟ್ಟಭದ್ರ ಹಿತಾಸಕ್ತಿಗಳ ಬೆಂಬಲದಿಂದ. ಹಾಗಾಗಿಯೇ ಯಡಿಯೂರಪ್ಪನವರು ತಾವು ಪ್ರಜಾಪ್ರಭುತ್ವ ವ್ಯವಸ್ಥೆಯಿಂದಾಗಿಯೇ ಮುಖ್ಯಮಂತ್ರಿಯಾಗಿರುವುದು ಎಂಬುದನ್ನು ಮರೆತಂತೆ, ಮಧ್ಯಯುಗೀನ ಸಾಮ್ರಾಜ್ಯಶಾಹಿ ರಾಜಕಾರಣದ ಒತ್ತಡಗಳಲ್ಲಿ ಮೂಡಿದ ಚಾಣಕ್ಯನ ತಂತ್ರಗಳ ಹೆಸರಿನಲ್ಲಿ ಈ ಅಸಹ್ಯ ರಾಜಕಾರಣವನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವುದು. ಪ್ರಜಾಪ್ರಭುತ್ವದ, ರಾಷ್ಟ್ರ ವ್ಯವಸ್ಥೆಯ ಬುನಾದಿಗೇ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹೀಗೆ ಕತ್ತಿ ಬೀಸಿರುವ ಯಡಿಯೂರಪ್ಪ ಒಂದಲ್ಲ ಒಂದು ದಿನ ಆ ಕತ್ತಿಗೇ ಬಲಿಯಾದರೆ ಆಶ್ಚರ್ಯವಿಲ್ಲ!

ಇಂತಹ ಪರಿಸ್ಥಿತಿಯಲ್ಲಿ ಈ ಪಕ್ಷಾಂತರ ಪ್ರಕರಣವನ್ನು ಖಂಡಿಸಿಯೂ, ಅದು ಕ್ಷಮಾರ್ಹವೆಂದೂ ಧ್ವನಿಸುವ ರೀತಿಯಲ್ಲಿ ರವೀಂದ್ರ ರೇಷ್ಮೆಯವರು ಇದನ್ನು ಈ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ರಾಣೆ ರಾಜೀನಾಮೆ ಪ್ರಕರಣಕ್ಕೆ ಹೋಲಿಸಿ ಲೇಖನ ಬರೆದಿರುವುದು ಮಾತ್ರ ನಿಜವಾಗಿಯೂ ದುಃಖಕರ ಸಂಗತಿ. ಏಕೆಂದರೆ ಅಲ್ಲಿ ನಡೆದದ್ದು, ಇಲ್ಲಿ ನಡೆದಂತಹ ಮಂತ್ರಿ ಪದವಿ ಆಮಿಷಾಧಾರಿತವಾದ ವೈಯುಕ್ತಿಕ ಮಟ್ಟದ ಪಕ್ಷಾಂತರ ಪ್ರಚೋದನೆಯಲ್ಲ. ಅಲ್ಲಿ ರಾಣೆ ಮತ್ತು ಅವರ ಸಮಾನ ಮನಸ್ಕ ಗೆಳೆಯರ ರಾಜೀನಾಮೆಯನ್ನು ಪ್ರಚೋದಿಸಿದ್ದು, ಅವರ ಪಕ್ಷವಾಗಿದ್ದ ಶಿವಸೇನೆಯೊಳಗೆ ಅದರದ್ದೇ ಆದ ಕಾರಣಗಳಿಂದಾಗಿ ಭುಗಿಲೆದ್ದಿದ್ದ ಆಂತರಿಕ ರಾಜಕಾರಣ. ಅದರ ಫಲವನ್ನು ಕಾಂಗ್ರೆಸ್ ತನ್ನ ಲಾಭಕ್ಕಾಗಿ ಬಳಸಿಕೊಂಡಿತಷ್ಟೆ. ಹಾಗೇ, ಅಲ್ಲಿ ರಾಜೀನಾಮೆ ನೀಡಿದವರು ತಮ್ಮ ದೀರ್ಘ ರಾಜಕೀಯ ಅನುಭವದ ಸಾಮಥ್ರ್ಯದ ಆಧಾರದ ಮೇಲೇ ಮರುಚುನಾವಣೆಯನ್ನು ಎದುರಿಸಬಲ್ಲ ಮತ್ತು ಸಚಿವರಾಗಬಲ್ಲ ಸಹಜ ಅರ್ಹತೆಗಳಿದ್ದ ರಾಣೆಯವರಂತಹ ಹಿರಿಯ ನಾಯಕರೇ ಹೊರತು; ಇಲ್ಲಿನಂತೆ, ತಮ್ಮದು ಅಧಿಕಾರ ಪಕ್ಷವಲ್ಲವೆಂದು ಗೊತ್ತಾದೊಡನೆ ವಿಚಲಿತರಾಗಿ ಇತರ ಪಕ್ಷಗಳ ಕಡೆ ಹಣಕುವ ಅನಾಮಿಕ ರಾಜಕೀಯ ಪಡ್ಡೆಗಳಲ್ಲ. ಅಲ್ಲಿನ ಪಕ್ಷಾಂತರದ ಹಿಂದೆ ಕಣ್ಣಿಗೆ ಕಾಣುವಂತಹ ಒಂದು-ರಾಜಕೀಯ ಭಿನ್ನಾಭಿಪ್ರಾಯದ-ತಾತ್ವಿಕ ಕಾರಣವಿತ್ತು. ಆದರೆ ಇಲ್ಲಿ ಹಣ, ಅಧಿಕಾರದ ಆಮಿಷಗಳ ಹೊರತಾಗಿ ಇನ್ನೇನಿತ್ತು? ಇದನ್ನು ಸಿದ್ಧರಾಮಯ್ಯನವರಂತಹ ಸಿದ್ಧರಾಮಯ್ಯನವರೇ 'ದೇವೇಗೌಡ್ರು ಪಕ್ಷಾಂತರ ಮಾಡಿಸಿಲ್ಲವೇನ್ರಿ?' ಎಂದು ಅಸಂಗತವಾಗಿ ತಮ್ಮ ದೇವೇಗೌಡ ಕೇಂದ್ರಿತ ರಾಜಕಾರಣದ ವರಸೆಯಲ್ಲಿ ಕೇಳುತ್ತಾ ತಮ್ಮ ಮುಂದಿನ ರಾಜಕೀಯ ದಾರಿಗೆ ಒಂದು ಸಾಧುತ್ವವನ್ನು ಗಳಿಸಿಕೊಳ್ಳಲು ಹಾಸ್ಯಾಸ್ಪದ ರೀತಿಯಲ್ಲಿ ಯತ್ನಿಸುತ್ತಿರುವಾಗ, ರೇಷ್ಮೆಯರಂತಹವರೂ ಇದರಿಂದ ವಿಚಲಿತರಾದುದರಲ್ಲಿ ಆಶ್ಚರ್ಯವೇನು?

ಅದೇನೇ ಇರಲಿ, ಈ ಅಸಹ್ಯ ರಾಜಕಾರಣದ ಅಪಕೀರ್ತಿಯಲ್ಲಿ ಒಂದು ಪಾಲನ್ನು ಇತರ ಪಕ್ಷಗಳೂ ಹೊರಬೇಕಿದೆ. ಈಗ ಪಕ್ಷಾಂತರ ಮಾಡಿರುವ (ಮತ್ತು ಮಾಡಲು ಸಿದ್ಧರಿರುವ) ಎಲ್ಲ ಶಾಸಕರೂ ಹಣ ಮತ್ತು ಅಧಿಕಾರದ ಕಾರಣಗಳಿಂದಲೇ ಆಯಾ ಪಕ್ಷಗಳಲ್ಲಿದ್ದವರು ಮತ್ತು ಇರುವವರು. ಅವರಿಗೆ ಅವರ ಪಕ್ಷಗಳು ಕಳೆದ ಚುನಾವಣೆಗಳಲ್ಲಿ ಟಿಕೆಟ್ ನೀಡಿದ್ದೇ ಅವರ ಹಣ (ಮತ್ತು ಬಹುಶಃ ಜಾತಿಯ) ಬಲದ ಕಾರಣದಿಂದಾಗಿ. ಹೀಗೆ ರಾಜಕೀಯ ತತ್ವವಿರಲಿ, ರಾಜಕೀಯ ಮರ್ಯಾದೆಯ ಮೂಲ ಪಾಠಗಳೂ ಪರಿಚಯವಿಲ್ಲದಂತಹ ಬಹುಪಾಲು ಇಂತಹ ಲಫಂಗರನ್ನು ಕಟ್ಟಿಕೊಂಡು ರಾಜಕಾರಣ ಮಾಡಹೊರಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು, ಗಣಿ ಹಣ ಮತ್ತು ಕೆಲವು ವೀರಶೈವ ಮಠಾಧೀಶರ ಜಾತೀಯ 'ಕೃಪಾಶೀರ್ವಾದ'ದ ಮೇಲೇ ತನ್ನ ರಾಜಕಾರಣವನ್ನು ಕಟ್ಟಿಕೊಳ್ಳುತ್ತಿರುವ ಬಿಜೆಪಿಯಲ್ಲಿ, ಎಲ್ಲ ವಿಷಯಗಳಲ್ಲೂ ಈಗ ತಮಗೆ ಸೇರಿಗೆ ಸವ್ವಾ ಸೇರು ಹೇಳುವಂತಹ ತಕ್ಕ ಪ್ರತಿಸ್ಪರ್ಧೆಯನ್ನೇ ಕಂಡುಕೊಂಡಿದೆ ಎಂದು ಹೇಳಬೇಕು! ಈಗಲಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಎಚ್ಚೆತ್ತುಕೊಂಡು ತಮ್ಮದೇ ಎನ್ನುವ ಕೆಲವು ವಿಶಿಷ್ಟ ರಾಜಕೀಯ ತತ್ವ ಮತ್ತು ಆದರ್ಶಗಳ ಮೇಲೆ, ಅವುಗಳಿಂದ ಆಕರ್ಷಿತರಾಗಿ ಬರುವ ಜನರ ಬೆಂಬಲದ ಮೇಲೆ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗದಿದ್ದರೆ ಅವು ಅನತಿ ಕಾಲದಲ್ಲೇ ಸರ್ವನಾಶವಾಗುವುದು ಖಂಡಿತ. ಅವು ಅನಿಲ್ ಲಾಡ್‌ರಂತಹ ಸಮಾನಾಂತರ ಗಣಿ ಧಣಿಯನ್ನು ನೆಚ್ಚಿಕೊಂಡರೂ ಬಹುಕಾಲ ಉಳಿಯಲಾರವು. ಏಕೆಂದರೆ ಈ ಅನಿಲ್ ಲಾಡ್ ಅಥವಾ ಇತರ ಲಾಡ್ಗಳು ಅಧಿಕಾರವಿಲ್ಲದೆಡೆ ಬಹುಕಾಲ ಉಳಿಯಲಾರವು!

ಇದು ಬರಲಿರುವ ಲೋಕಸಭಾ ಚುನಾವಣೆಗಳ ಹೊತ್ತಿಗೆ ಕಾಂಗ್ರೆಸ್ಸಿಗರಿಗೆ ಇನ್ನಷ್ಟು ಸ್ಪಷ್ಟವಾಗಬಹುದು. ಪ್ರಧಾನಿ ಮನಮೋಹನ ಸಿಂಗ್ ಅವರ ಸದ್ಯದ ಅವಸರ ನೋಡಿದರೆ, ಅದು ನಿರೀಕ್ಷಿಸಿದುದಕ್ಕಿಂತ ಬಹು ಬೇಗ ಬರುವಂತೆ ತೋರುತ್ತಿದೆ! ಅವರ ರಾಜಕಾರಣ, ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಹಿತ ದೃಷ್ಟಿಯಿಂದ ನೋಡಿದಾಗ, ಬಿಜೆಪಿಯವರ ರಾಜಕಾರಣಕ್ಕಿಂತ ಕಡಿಮೆ ಅಪಾಯಕಾರಿಯಾಗೇನೂ ಕಾಣುತ್ತಿಲ್ಲ. ಕಳೆದ ಚುನಾವಣೆಗಳಲ್ಲಿ ಸರ್ಕಾರ ರಚಿಸುವಷ್ಟು ಬಹುಮತವಿಲ್ಲದೆ ಒದ್ದಾಡುತ್ತಿದ್ದಾಗ ಬೆಂಬಲ ನೀಡಿ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಲು ಸಹಕರಿಸಿದ ಎಡ ಪಕ್ಷಗಳ ಸ್ನೇಹಕ್ಕಿಂತ, ಈಗ ತನ್ನ ಅಧಿಕಾರಾವಧಿ ಮುಗಿಯುವ ಹೊತ್ತಿನಲ್ಲಿ ಮನಮೋಹನ ಸಿಂಗರಿಗೆ ಅಮೆರಿಕಾದ ಅಧ್ಯಕ್ಷ ಬುಷ್‌ರೊಡನೆಯ ವೈಯುಕ್ತಿಕ ಸ್ನೇಹವೇ ಹೆಚ್ಚು ಪವಿತ್ರವೆನಿಸತೊಡಗಿದೆ! ಜಾಗತಿಕ ರಾಜಕಾರಣದಲ್ಲಿ ತನ್ನ ಅಧಿಕಾರಾವಧಿಯುದ್ದಕ್ಕೂ ಕಿಂಚಿತ್ತೂ ವಿಶ್ವಾಸಾರ್ಹವೆನಿಸಿಕೊಳ್ಳದ ಬುಷ್ ಆಡಳಿತದೊಂದಿಗೆ ತಾವು ಸಂಧಾನ ಮಾಡಿಕೊಂಡ ಅಣು ಒಪ್ಪಂದ ಜಾರಿಯಾಗದಿದ್ದರೆ, ಈ ಮನಮೋಹನ ಸಿಂಗರಿಗೆ ಮುಖಭಂಗವಾಗುವುದಂತೆ! ಜಾಗತಿಕವಾಗಿ ಭಾರತದ ವಿಶ್ವಸನೀಯತೆಗೆ ಕುಂದುಂಟಾಗುವುದಂತೆ! ರಾಷ್ಟ್ರ ಈಗ ಸಾಧಿಸಿರುವ ಅಭೂತಪೂರ್ವ ಪ್ರಗತಿ ದರವನ್ನು ಕಾಪಾಡಿಕೊಳ್ಳಲಾಗುವುದಿಲ್ಲವಂತೆ! ಇದನ್ನೆಲ್ಲ ನಂಬಿ, ತಮ್ಮ ಆಡಳಿತಕ್ಕೆ ಜನಪರತೆಯ ಬಿಂಬ ನೀಡಿ ಕಾಪಾಡಿದ ಎಡ ಪಕ್ಷಗಳಿಗೆ ಮನಮೋಹನರು ಎಲ್ಲ ರಾಜಕೀಯ ಸಭ್ಯತೆಯನ್ನೂ ಮೀರಿ ಹೇಳಿರುವ ಧಿಕ್ಕಾರವನ್ನು, ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ಬೆಂಬಲಿಸಿವೆ!

ಭಾರತದ ಸದ್ಯದ ಅಭೂತಪೂರ್ವ ಪ್ರಗತಿ ದರದ ಬಂಡವಾಳ ಈಗಾಗಲೇ ಅಭೂತಪೂರ್ವ ಹಣದುಬ್ಬರ ದರ ಮತ್ತು ಅಭೂತಪೂರ್ವ ರೈತರ ಆತ್ಮಹತ್ಯೆ ದರಗಳ ಮೂಲಕ ಬಯಲಾಗಿದೆ. ಅದನ್ನು ಮರೆಮಾಚಲೋ ಎಂಬಂತೆ, ಮನಮೋಹನ ಸಿಂಗರು ಈಗ ಇದ್ದಕ್ಕಿದ್ದಂತೆ ಭಾರತದ ಭವಿಷ್ಯದ ಇಂಧನ ಅಗತ್ಯಗಳ ಆತಂಕ ಹುಟ್ಟಿಸಿ, ರಾಷ್ಟ್ರೀಯ ಹಿತಾಸಕ್ತಿಯ ಹೆಸರಲ್ಲಿ ತಮ್ಮ ಕೆಲವು ಸಹೋದ್ಯೋಗಿಗಳನ್ನೂ ಯಾಮಾರಿಸಿ ಈ ಅಣು ಒಪ್ಪಂದವನ್ನು ಜಾರಿಗೊಳಿಸುವ ಮೊದಲ ಕ್ರಮಕ್ಕೆ-ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಗೆ ಸುರಕ್ಷತಾ ಒಪ್ಪಂದದ ಕರಡು ಸಲ್ಲಿಸಿ ಚಾಲನೆ ನೀಡಿದ್ದಾರೆ. ನಮ್ಮ ಅಣುಶಕ್ತಿ ಆಯೋಗದ ಈಚಿನ ಇಬ್ಬರು ಅಧ್ಯಕ್ಷರುಗಳು ಈ ಒಪ್ಪಂದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಿದೆ ಮತ್ತು ನಮ್ಮ ಅಣುಶಕ್ತಿ ಕಾರ್ಯಕ್ರಮಗಳನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ಹೇಳುತ್ತಿದ್ದರೂ, ಅವಕ್ಕೆ ಸ್ಪಷ್ಟ ಉತ್ತರ ಕೊಡುವ ವ್ಯವಧಾನವೂ ಇಲ್ಲದೆ ಪ್ರಧಾನಿ ಈ ಅವಸರದ ಹೆಜ್ಜೆ ಇಡುತ್ತಿರುವುದರ ಹಿಂದಿನ ಒತ್ತಡಗಳದರೂ ಯಾವುವು? ವಿಶ್ವಬ್ಯಾಂಕಿನ ಮಾಜಿ ಉದ್ಯೋಗಿಯಾದ ಈ ಮನಮೋಹನ ಸಿಂಗ್ ಮೂಲತಃ ಪಶ್ಚಿಮದ ಬಂಡವಾಳಶಾಹಿ ಆರ್ಥಿಕತೆಯ ಕುರುಡು ಅಭಿಮಾನಿ ಎಂಬ ನಂಬಿಕೆ ಈಗ ಇನ್ನಷ್ಟು ನಿಜವಾಗುತ್ತಿರುವಂತಿದೆ. ಆದರೆ ಮೂಲ ಕಾಂಗ್ರೆಸ್ಸಿಗರೇನು ಮಾಡುತ್ತಿದ್ದಾರೆ? ಅವರು ತನ್ನನ್ನು ಸಮಾಜವಾದಿ ಎಂದು ಕರೆದುಕೊಳ್ಳುವ ಅಮರ ಸಿಂಗ್ ಎಂಬ ದೇಶೀ ಬಂಡವಾಳಶಾಹಿ ವ್ಯವಸ್ಥೆಯ ದಲ್ಲಾಳಿಯೊಂದಿಗೆ ರಾಜಕೀಯ ಚಕ್ಕಂದ ಆರಂಭಿಸಿದ್ದಾರೆ!

ಇದು ಕಾಂಗ್ರೆಸ್ಸಿನ ಎಂದಿನ ದುರಂತ ಕಥ.