ರೈಲಿನೊಂದಿಗಿನ ನೆನಪುಗಳು...

ರೈಲಿನೊಂದಿಗಿನ ನೆನಪುಗಳು...

ನಾನು ರೈಲಿನಲ್ಲಿ ಕಳೆದ ಸಮಯದ ನೆನಪುಗಳು ನನ್ನ ಜೀವನದಲ್ಲಿ ಶಾಶ್ವತವಾಗಿ ನನ್ನ ಹೃದಯದಲ್ಲಿ ಉಳಿಯುವ ಹಾಗೆ ಇದೆ. ಅಂದು ಮುಂಜಾನೆ ಸುಮಾರು ನಾಲ್ಕು ಗಂಟೆಗೆ ನನ್ನನ್ನು ಅಮ್ಮ ‘ಬೇಗ ಏಳು’ ಎಂದಾಗ ‘ಯಾಕೆ ಅಮ್ಮ, ಏನು ಆಯಿತು?’ ಎಂದು ಹತ್ತು ಹಲವಾರು ಪ್ರಶ್ನೆ ಕೇಳಿದಾಗ ನಿನಗೆ ಆಮೇಲೆ ತಿಳಿಸುತ್ತೇನೆ ಎಂದು...

ಅವರೇ ಮೊದಲ ಬಾರಿಗೆ ನನ್ನ ಉಡುಪು ತೆಗೆದುಕೊಂಡು ಬಂದು ‘ಇದೋ ತೆಗೆದುಕೋ’ ಎಂದಾಗ ಯಾಕೆ ಇಷ್ಟು ಅವಸರ ಮಾಡುತ್ತಾ ಇದ್ದಾರೆ ಎನ್ನುವುದು ತಿಳಿಯದು…

ನಾನು ಜಳಕ ಮಾಡಿ ದೇವರಿಗೆ ನಮಸ್ಕಾರ ಮಾಡಿ ತಿಂಡಿ ಹುಡುಕಲು ಏನು ಮಾಡಲಿಲ್ಲ. ಅವರ ಬಳಿ ತಿಂಡಿ ಎನ್ನುವುದು ಬೇಡವೇ? ಎಂದಾಗ ಹೊರಡೋಣ ತಡವಾಗುತ್ತದೆ. ‘ಯಾಕೆ?’ ಎಂದು ಪ್ರಶ್ನೆ ಮಾಡಿದಾಗ ನನ್ನ ಕರೆದುಕೊಂಡು ವಾಹನದಲ್ಲಿ ಕುಳ್ಳಿರಿಸಿದಾಗ ವಾಹನದ ಚಾಲಕರ ಬಳಿ ದೂರ ಹೋಗುತ್ತಾ ಇದ್ದೇವೆ ಎಂದಾಗ ಅವರು ಕೂಡಾ ಉತ್ತರ ನೀಡಲಿಲ್ಲ...

ನಾನು ಕಣ್ಣು ತೆರೆಯುವಾಗ ರೈಲಿನಲ್ಲಿ ಪಯಣ ಬೆಳೆಸುತ್ತಿದ್ದೆ. ಅಮ್ಮನವರ ಬಳಿ ‘ದೂರ?’ ಎಂದಾಗ ಅವರು ಯಾವುದೇ ಉತ್ತರ ನೀಡದೇ ಮೌನ ಆಗಿರುವುದನ್ನು ಕಂಡು ಭಯವಾಗಿ ನನ್ನ ಸಂಪರ್ಕವಾಣಿಯನ್ನು ಹುಡುಕಲು ಅವರ ಬಳಿ ಇತ್ತು ಕೊಡುತ್ತೀರಾ? ಎಂದಾಗ ನಮ್ಮ ಮಾರ್ಗ ಬಂದಿತು ಇಳಿಯಲು ಅಮ್ಮ ನನ್ನ ಕರೆದುಕೊಂಡು ಹೋದಾಗ...

ಇದು ನಾನು ಈ ಮೊದಲು ಬಂದಿರುವೆನೇ ಇಲ್ಲಿಗೆ? ಯಾವಾಗ? ಎಂದು ಆಲೋಚನೆ ಮಾಡುವಾಗ ದೂರದಲ್ಲಿ ನೂರಾರು ಮಂದಿ ಒಂದೇ ಸಮನೇ ರೋಧಿಸುವುದನ್ನು ಕಂಡು ಅಲ್ಲಿ ಯಾರು ಇದ್ದಾರೆ? ಅದು ಯಾರ ಮನೆ? ಎಂದು ನೋಡಿದಾಗ ನನ್ನ ಅಚ್ಚು ಮೆಚ್ಚಿನ ಗೆಳತಿ ಆಕೆ ಶವವಾಗಿ ಮಲಗಿರುವುದನ್ನು ಕಂಡು ನಮ್ಮ ಅಮ್ಮನವರ ಬಳಿ ‘ಅಮ್ಮ, ಆಕೆಗೆ ಏನು ಆಗಿದೆ?’ ಎಂದು ಕೇಳಿದಾಗ ಉತ್ತರವಾಗಿ ನನ್ನ ಸಂಪರ್ಕ ವಾಣಿಯ ಸಂದೇಶ ತೋರಿಸಿದರು...

ಅದನ್ನು ಓದಿದಾಗ ನನಗೆ ದುಃಖ ಬಂದಿತು. ಆಕೆಗೆ ಬಲವಂತವಾಗಿ ವಿವಾಹ ಮಾಡಿದ್ದೂ, ಆಕೆಯ ಆಸೆಗಳು ಎಲ್ಲವೂ ಗಾಳಿಯಲ್ಲಿ ಲೀನವಾಗಿ ಬಿಟ್ಟಿತ್ತು. ಅದರಲ್ಲಿ ಆಕೆ ಒಂದೇ ವಾಕ್ಯ ಬರೆದಿದ್ದು ಎಲ್ಲರ ಮನಕ್ಕೆ ನಾಟುವಂತೆ ಇತ್ತು " ದಯವಿಟ್ಟು ಹೆಣ್ಣು ಮಗಳ ಮನಸ್ಸು ಅರ್ಥವಾಗದ ಈ ಮನಕ್ಕೆ ಆಭರಣ ಎಷ್ಟು ಇದ್ದರೇನು?” ಎಷ್ಟು ಅರ್ಥವಿದೆ ನೋಡಿ.

-ವೈಷ್ಣವಿ ಪುರಾಣಿಕ್, ಉಡುಪಿ ಜಿಲ್ಲೆ

ಚಿತ್ರ ಕೃಪೆ: ಶಂತನು ಪಂಡಿತ್, ಇಂಟರ್ನೆಟ್ ತಾಣ