ಲಂಡನ್ ಪಬ್ಬಿನ ಜಗಳ ಹಾಗು ಸಹಾಯಕ್ಕೆ ಬಂದ PAN ಕಾರ್ಡು

ಲಂಡನ್ ಪಬ್ಬಿನ ಜಗಳ ಹಾಗು ಸಹಾಯಕ್ಕೆ ಬಂದ PAN ಕಾರ್ಡು

ಬರಹ

ಇದು ಸುಮಾರು ಎರಡೂವರೆ ವರ್ಷದ ಹಿಂದೆ ನಡೆದ ಘಟನೆ, ಅಂದ್ರೆ November 2006. ಆ ವರ್ಷ ಸೆಪ್ಟೆಂಬರಿನಲ್ಲಿ ನಾನು ಮೊದಲ ಬಾರಿ ವಿದೇಶಕ್ಕೆ ಕಾಲಿಟ್ಟಿದ್ದು.
ನಾನು ಭಾರತದಿಂದ ಹೊರಗೆ ಕಾಲಿಟ್ಟ ಮೊದಲ ದೇಶ England. ಲಂಡನ್ನಿನಿಂದ ಸುಮಾರು ೬೦ ಮೈಲಿ ದೂರ ಇದ್ದ BASILDON ಅನ್ನೋ ಊರಲ್ಲಿ ನನ್ನ ಕೆಲಸ ಇದ್ದದ್ದು.
ಲಂಡನ್ನಲ್ಲಿ ಇಳಿದದ್ದು Heathrow ವಿಮಾನ ನಿಲ್ದಾಣದಲ್ಲಿ. ಅದು ಬಿಡಿ, ಮೊದಲ ಬಾರಿ ವಿದೇಶಿ ನಗರದಲ್ಲಿ ಇಳಿದದ್ದು, ಸುಮಾರು 5-10 ನಿಮಿಷ ಬೇಕಾಯ್ತು, ಲಂಡನ್ನಲ್ಲಿ ಇದ್ದೀನಿ ಅಂತಾ ಕನ್ಫರ್ಮ್ ಆಗಲು.

ನನ್ನ ಲಂಡನ್ನಿನ ಅನುಭವ ಕಥನ ಬಿಡಿ, ಇನ್ನು ಇದರ ಬಗ್ಗೆ ಬರೀತಾ ಕೂತರೆ ಮಹಾಕಾವ್ಯ ಆಗುತ್ತೆ..

ನನ್ನ ಇಬ್ರು ಮೈಸೂರಿನ ಸ್ನೇಹಿತರು ಅಭಿ ಮತ್ತು ಸಿಮ್ಮಿ (ವಿನಯ್), ಆ ವೇಳೆಯಲ್ಲಿ ಲಂಡನ್ನಿನ Middlesex University ಯಲ್ಲಿ MS in International Finance ಓದುತ್ತಾ ಇದ್ರು.
ಹೊರದೇಶದ ಆ ನಗರದಲ್ಲಿ ನನ್ನವರು ಎನ್ನುವ ಜೀವ ಇವೆರಡೇ. ಹಾಗಾಗಿ ಪ್ರತಿ ವೀಕೆಂಡು ನನ್ನೂರಿನಿಂದ ಲಂಡನ್ನಿಗೆ ಪ್ರಯಾಣ.
ಇವರಿಬ್ಬರು ಇದ್ದದ್ದು ಇವರ ಹಾಸ್ಟೆಲ್ಲಿನಲ್ಲಿ. ನಾನೂ ಇವರ ಹಾಸ್ಟೆಲಿನಲ್ಲೇ ತಂಗುತ್ತಿದ್ದೆ. ಶನಿವಾರ ಬೆಳಿಗ್ಗೆ ಅಲ್ಲಿ ತಲುಪಿ, ಭಾನುವಾರ ಸಂಜೆ ವಾಪಸ್ ನನ್ನೂರಿಗೆ.

ಶನಿವಾರದಂದು ಮೂವರೂ ಲಂಡನ್ನಿನ ಗಲ್ಲಿ ಗಲ್ಲಿ ಸುತ್ತಿ, ಸಂಜೆ ಅವರ ಹಾಸ್ಟೆಲಿನ ರೂಮಿಗೆ ಬಂದು, ನಾನ್ಸೆನ್ಸ್ ಮಾತಾಡ್ತಾ ರಾತ್ರಿ ಕಳೀತಾ ಇದ್ವಿ.
ಹೀಗೆ ಒಮ್ಮೆ ನವೆಂಬರ್ 2006 ನ ಒಂದು ಶನಿವಾರ. ಅಭಿ ಮತ್ತು ಸಿಮ್ಮಿಯ ಹಾಸ್ಟೆಲ್ ಇದ್ದದ್ದು North London ನಲ್ಲಿ.
ಶನಿವಾರ ನಮ್ಮ ಬೀದಿ ಸುತ್ತಾಟ ಮುಗಿಸಿ, ಅಲ್ಲೇ North London ನ Hendon Central ಅನ್ನೋ ಜಾಗಕ್ಕೆ ಹೋದ್ವಿ.
ಅಲ್ಲಿ THE BODHRANS ಅನ್ನೋ ಪಬ್ ಇದೆ, ಹಾಗು ಅಲ್ಲಿ ಅಭಿಯ ಕ್ಲಾಸ್ಮೇಟ್ ಒಬ್ಬಾಕೆ ಕೆಲಸ ಮಾಡ್ತಾ ಇದ್ಳು.
ಹಾಗಾಗಿ ಆ ಪಬ್ಬಿಗೆ ಕರ್ಕೊಂಡು ಹೋದ. ಮಾಮೂಲಾಗಿ ನಾನು ಅಭಿ ಹಾಗು ಸಿಮ್ಮಿ ಮಾತಾಡ್ತಾ, ಅಭಿ ತನ್ನ Guinness ಇಳುಸ್ತಾ ಇದ್ದ, ನಾನು Kronenbourg ಇಳುಸ್ತಾ ಇದ್ದೆ.
ಪಕ್ಕದಲ್ಲಿ ಒಬ್ಬ ಫುಲ್ ಚಿತ್ತಾಗಿದ್ದ. ನೋಡಕ್ಕೆ ಬ್ರಿಟಿಷ್ ಥರ ಇರಲಿಲ್ಲ, ಆದ್ರೆ ಸ್ವಲ್ಪ ಫ್ರೆಂಚ್ ಥರ ಇದ್ದ. ನಮ್ಮನ್ನು ನೋಡಿ, ಸಡನ್ನಾಗಿ ನಮ್ಮನ್ನು ಟಾರ್ಗೆಟ್ ಮಾಡುತ್ತಾ ತನ್ನನ್ನು ತಾನೇ
"I am a terrorist.." ಅನ್ನೋಕ್ಕೆ ಶುರು ಮಾಡಿದ.

ನಾನು ಅದರ ಬಗ್ಗೆ ಗಮನ ಕೊಡದೆ ಸುಮ್ನೆ ಅಭಿ, ಸಿಮ್ಮಿ ಜೊತೆ ಮಾತಾಡ್ತಾ ಕೂತೆ. ಪದೇ ಪದೇ ಹೀಗೆ ಅನ್ನುತ್ತಾ ಇದ್ದ. ಸ್ವಲ್ಪ ಹೊತ್ತಾದ ಮೇಲೆ...

"You know, you people look like terrorists and are terrorists" ಅಂದ.

ನಮ್ಮ ಅಭಿ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಮೆಂಟ್ಲು ಹಾಗು ಧೈರ್ಯ ಜಾಸ್ತಿ. ಸಡನ್ನಾಗಿ ಅವನ ಕಡೆ ತಿರುಗಿ,
"You know mate, you too look like a F***in Algerian Terrorist" ಅಂದ.
ಅವ್ನು ಮೋಸ್ಟ್ಲಿಫ್ರೆಂಚ್ ಅನ್ಸುತ್ತೆ.ಈ ಫ್ರೆಂಚರಿಗೆ Algerians ಕಂಡ್ರೆ ಆಗಲ್ಲ.
ಸಿಕ್ಕಾಪಟ್ಟೆ ಉರಿ ಶುರು ಆಯ್ತು ಅನ್ಸುತ್ತೆ. ಮೊದಲೇ ಕುಡಿದು ಚಿತ್ತಾಗಿದ್ದ, ಏನೇನೋ ಬಡಬಡಾಯಿಸೋಕ್ಕೆ ಶುರು ಮಾಡಿದ. ನಾನು ನೋಡೋಷ್ಟು ನೋಡಿದೆ.

ಅವ್ನು ಕೂಗಾಡೋದು ಜಾಸ್ತಿ ಆಯ್ತು. ಅಲ್ಲಿಯ ಪಬ್ಬು, ಬಾರ್, ಡಿಸ್ಕೋ ಗಳಲ್ಲಿ ಮಸ್ತ್ ಹೈಟ್, ಮಸ್ತ್ ತೂಕ ಇರೋ ಜನರನ್ನ Public Safety ಅಂತಾ ಇಟ್ಟಿರ್ತಾರೆ, ಅಂದ್ರೆ Nothing but Bouncers.
ಪಬ್ಬು ಬಾರಿನಲ್ಲಿ ಕಿರಿಕ್ ಆದ್ರೆ ತಡೆಯೋಕ್ಕೆ ಅಷ್ಟೇ. ಅಲ್ಲಿನ Public Safety Man ಹತ್ರ ಹೋದೆ. ಆ ಕ್ಷಣದಲ್ಲಿ ಅದೇನ್ ಐಡಿಯಾ ಹೊಳೀತೋ ಏನೋ, ಪರ್ಸನ್ನು ತೆಗೆದು,
ಅದ್ರಲ್ಲಿ ಇದ್ದ ನನ್ನ PAN ಕಾರ್ಡನ್ನು ಅವನಿಗೆ ತೋರಿಸಿ...

"Look Mate, that drunkard is passing some real nonsense rasist abuses and comments.
I work for the Income Tax Department, Government of India. If that person doesn't stop his nonsense, I will be forced to call the police,
lodge a complaint on the grounds of racial abuse and also I need to call my embassy" ಅಂದೆ.

ನನ್ನ PAN ಕಾರ್ಡನ್ನು ನೋಡಿದ. ಯಾವಾಗ ನಾನು Racial Abuse ಅಂತಾ ಕಂಪ್ಲೇಂಟ್ ಕೊಡ್ತೀನಿ ಅಂದೆನೋ,
ಅವಾಗ ಆ ಕೂಗಾಡುತ್ತಿದ್ದವನ ಹತ್ರ ಹೋಗಿ, ಬಾಯಿ ಮುಚ್ಚಿಕೊಂಡು ಇರು ಅಂತ ಹೇಳಿ, ಅವನನ್ನು ಹೊರಗೆ ಹಾಕಿದ.

ಯಾಕೆ ಅಂದ್ರೆ ಇಂಗ್ಲೆಂಡಿನಲ್ಲಿ Racial Abuse, Racism ಅನ್ನೋದು ಒಂದು ತೀವ್ರ ಅಪರಾಧ.
ಹಾಗಾಗಿ ಈ ಥರ ಘಟನೆ ನಡೆದರೆ, ಕಂಪ್ಲೇಂಟ್ ಕೊಡ್ತೀನಿ ಅಂದಾಗ ಅಲ್ಲಿನ ಬಿಳಿ ಜನ ಸಖತ್ ಹೆದ್ರುತಾರೆ.
ಜೊತೆಗೆ ಪಬ್ಬಿನಲ್ಲಿ ಈ ಥರ ಘಟನೆ ನಡೆದು, ಆ ಪಬ್ಬಿನಲ್ಲಿ ಕೆಲಸ ಮಾಡೋರು ಏನೂ ಮಾಡಲಿಲ್ಲ ಅಂತ ಕಂಪ್ಲೇಂಟು ಹಾಕಿದರೆ, ಆ ಪಬ್ಬಿನ ಲೈಸೆನ್ಸ್ ಕ್ಯಾನ್ಸೆಲ್ ಆಗೋ ಸಾಧ್ಯತೆ ಇದೆ.

ಮೊನ್ನೆ ನನ್ನ ಕೊಲೀಗ್ ಹತ್ರ ಈ ಘಟನೆ ಹೇಳಿದೆ..
ಅವ್ರು, "ಸಖತ್ತಾಗಿದೆ ಶಂಕರ್ ಇದು, ಆದ್ರೆ ಬ್ಲಾಗಿನಲ್ಲಿ ಇನ್ನೂ ಯಾಕೆ ಇದನ್ನು ಹಾಕಿಲ್ಲಾ ?" ಅಂತ ಕೆಳುದ್ರು..
ಹಾಗಾಗಿ ಇವತ್ತು ಹಾಕಿದೆ.
ಅಂತೂ ಇಂತೂ ನನ್ನ PAN ಕಾರ್ಡು ಲಂಡನ್ನಲ್ಲಿ ಹೀಗೆ ಸಖತ್ತಾಗಿ ಉಪಯೋಗಕ್ಕೆ ಬಂತು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
http://somari-katte.blogspot.com