ಲೇಖನಮಾಲೆ: "ಬೆಂಗಳೂರಿನ ಕೆರೆಗಳು"

ಲೇಖನಮಾಲೆ: "ಬೆಂಗಳೂರಿನ ಕೆರೆಗಳು"

ಬರಹ

ವಿಜಯಕರ್ನಾಟಕದಲ್ಲಿ ಬೆಂಗಳೂರಿನ ಕೆರೆಗಳ ಕುರಿತು ಬರೆಯುತ್ತಿದ್ದ ಮಂಜುನಾಥ್ ಈಗ ಅಂತರ್ಜಾಲ ಪ್ರವೇಶಿಸಿದ್ದಾರೆ. ಇಂಡಿಯವಾಟರ್ ಪೋರ್ಟಲ್ ಕನ್ನಡ ಆವೃತ್ತಿಯಲ್ಲಿ ಇವರ ಲೇಖನಗಳ ಸರಣಿ ಮೂಡಿಬರಲಿದೆ. ಮಂಜುನಾಥ್ ಸರಣಿಗೆ ಮುನ್ನುಡಿ ಹೀಗೆ ಬರೆದಿದ್ದಾರೆ:

ಬೆಂಗಳೂರು ಮಹಾನಗರಕ್ಕೆ ಗಾರ್ಡನ್‌ ಸಿಟಿ, ಹೈಟೆಕ್‌ ಸಿಟಿ, ಸಿಲಿಕಾನ್‌ ನಗರಿ ಎಂದೆಲ್ಲಾ ಬಿರುದುಗಳು ಬರುವ ಮುನ್ನ ‘ಕೆರೆಗಳ ನಗರಿ’ ಎಂಬ ಬಿರುದಿತ್ತು. ಅದಕ್ಕೇ ಉದ್ಯಾನನಗರಿ, ಹವಾನಿಯಂತ್ರಿತ ನಗರಿಯೂ ಆಗಿತ್ತು. ಕೆರೆಗಳು ತುಂಬಿದ್ದರಿಂದ ಮರಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಅಂತರ್ಜಲ ಸಮೃದ್ಧವಾಗಿದ್ದು ಈ ಕೆರೆಗಳಿಂದಲೇ. ಬೆಂದಕಾಳೂರು ಆಗಿದ್ದಾಗ ಕುಡಿಯುವ ನೀರಿನ ಮೂಲವೂ ಇದೇ ಕೆರೆಗಳಾಗಿದ್ದವು. ಬೆಂಗಳೂರಿನ ಶಿಲ್ಪಿ ಕೆಂಪೇಗೌಡ ತನ್ನ ಪೂರ್ವಜರ ಕೆರೆ-ಕುಂಟೆ ಕಟ್ಟುವ ಕಾಯಕ್ಕೆ ಬೃಹತ್ ಕೊಡುಗೆ ನೀಡಿದರು. ಕೆಂಪೇಗೌಡರು ಬೆಂಗಳೂರು ನಗರದಲ್ಲಿ ನೂರಾರು ಕೆರೆಗಳನ್ನು ಕಟ್ಟಿದರು. ಅದಕ್ಕೇ ಬೆಂಗಳೂರಿನಲ್ಲಿದ್ದ ಕೆರೆಗಳ ಸಂಖ್ಯೆ ಒಂದು ಸಾವಿರವನ್ನೂ ದಾಟಿತ್ತು. ಐಟಿ-ಬಿಟಿ ದಾಳಿಯಿಡುವ ಮುನ್ನ ಕೆರೆಗಳು ಸಮೃದ್ಧವಾಗಿದ್ದವು. ನಗರೀಕರಣದ ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಕೆರೆಗಳು ಆಹುತಿಯಾದವು. ಆನಂತರ ಕೆರೆಗಳು ಅವನತಿಯತ್ತ ಸಾಗಿದವು. ಇಂದು ಕೆರೆಗಳಲ್ಲಿ ನೀರಿಲ್ಲ. ಬರೀ ಕಲ್ಮಶವೇ ತುಂಬಿದೆ. ಅಷ್ಟೇ ಅಲ್ಲ, ಬೆಂಗಳೂರಿನ ವಾತಾವರಣ ಕಲ್ಮಶವಾಗುವುದಕ್ಕೆ ಈ ಕೆರೆಗಳೇ ಸಾಕಷ್ಟು ಕೊಡುಗೆ ನೀಡುತ್ತಿವೆ. ಇದಕ್ಕೆ ಕಾರಣ ಯಾರು? ಕೆರೆಯ ವ್ಯಾಪ್ತಿಯನ್ನ್ನೂ ನುಂಗುವ ಕಾರ್ಯಕ್ಕೆ ಭೂದಾಹಿಗಳು ಮುಂದಾದರು. ಒತ್ತುವರಿಯಿಂದ ಕೆರೆಗಳು ಹೊಂಡಗಳಾಗಿವೆ. ಕೆರೆಗಳನ್ನು ಉಳಿಸುವ ಪ್ರಯತ್ನ ಯಾರಾದರೂ ಮಾಡುತ್ತಿದ್ದಾರಾ? ಪರಿಸರ ಉಳಿಸಿ ಎಂದು ಹೋರಾಡಲು ಸಂಸ್ಥೆಗಳಿವೆ. ಅದೇ ಪರಿಸರ-ಹಸಿರು ಉಳಿಯಲು ಕೆರೆಗಳೇ ಕಾರಣ ಎಂಬುದು ತಿಳಿದಿಲ್ಲವೇ?

ಮೇಲಿನ ಬರಹದ ಮುಂದುವರೆದ ಭಾಗವನ್ನು ಇಲ್ಲಿ ಓದಬಹುದು. ಸದ್ಯದಲ್ಲೇ ತಮ್ಮ ಲೇಖನಗಳೊಂದಿಗೆ ಮಂಜುನಾಥ್ ಬೆಂಗಳೂರ ಕೆರೆಗಳ ಪರಿಚಯ ನೀಡಲಿದ್ದಾರೆ. ವಾಟರ್ ಪೋರ್ಟಲ್ ಚೆಕ್ ಮಾಡುವುದು ಮರೆಯಬೇಡಿ. :-)