"ವರ್ಣಮಯ" ಮುಖಪುಟದ ಆಯ್ಕೆ-ಶ್ವೇತಾ ಅಡುಕಳರಿಗೆ ಬಹುಮಾನ.
ಐ-೦೦೪, ಮಂತ್ರಿ ಪ್ಯಾರಡೈಸ್
ಬನ್ನೇರುಘಟ್ಟ ರಸ್ತೆ
ಬೆಂಗಳೂರು - ೫೬೦ ೦೭೬
ಮೊಬೈಲ್ : ೯೮೪೪೪ ೨೨೭೮೨
>vas123u@rocketmail.com
ಮಾನ್ಯರೆ,
ಈ ಬಾರಿಯ 'ಛಂದ ಮುಖಪುಟ ಸ್ಪರ್ಧೆ'ಯಲ್ಲಿ ಶ್ವೇತಾ ಆಡುಕಳ ಅವರಿಗೆ ಬಹುಮಾನ ಬಂದಿದೆ. ಡಿಸೆಂಬರ್ ೧೬ ರಂದು ಬಿಡುಗಡೆಯಾಗಲಿರುವ ವಸುಧೇಂದ್ರರ 'ವರ್ಣಮಯ' ಎಂಬ ಸುಲಲಿತ ಪ್ರಬಂಧ ಸಂಕಲನಕ್ಕೆ ಈ ಮುಖಪುಟವನ್ನು ಬಳಸಿಕೊಳ್ಳಲಾಗುವುದು. ಶ್ವೇತಾರವರಿಗೆ ೫೦೦೦ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಶ್ವೇತಾ, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಎಂಎಫ್ಎ ಅನ್ವಯಕಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ೧೫೦ ಕ್ಕೂ ಹೆಚ್ಚು ವಿನ್ಯಾಸಗಳ ತೀವ್ರ ಪೈಪೋಟಿಯ ಈ ಸ್ಪರ್ಧೆಯ ನಿರ್ಣಯವನ್ನು ನಾಡಿನ ಖ್ಯಾತ ಕಲಾವಿದ ಶ್ರೀ ಪ.ಸ. ಕುಮಾರ್ರವರು ’ಛಂದ ಪುಸ್ತಕ’ ಕ್ಕಾಗಿ ಮಾಡಿಕೊಟ್ಟಿದ್ದಾರೆ.
ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ.
www.chukkubukku.com/...)
ಛಂದಪುಸ್ತಕದ ಪರವಾಗಿ:
ವಂದನೆಗಳು,
ವಸುಧೇಂದ್ರ
೦೬ನೇ ಡಿಸೆಂಬರ್ ೨೦೧೨
Comments
ನೀವ್ ಕೊಟ್ಟ ಲಿಂಕ್ ಮೂಲಕ