"ವರ್ಣಮಯ" ಮುಖಪುಟದ ಆಯ್ಕೆ-ಶ್ವೇತಾ ಅಡುಕಳರಿಗೆ ಬಹುಮಾನ.

"ವರ್ಣಮಯ" ಮುಖಪುಟದ ಆಯ್ಕೆ-ಶ್ವೇತಾ ಅಡುಕಳರಿಗೆ ಬಹುಮಾನ.

ಐ-೦೦೪, ಮಂತ್ರಿ ಪ್ಯಾರಡೈಸ್
ಬನ್ನೇರುಘಟ್ಟ ರಸ್ತೆ
ಬೆಂಗಳೂರು - ೫೬೦ ೦೭೬
ಮೊಬೈಲ್ : ೯೮೪೪೪ ೨೨೭೮೨
>vas123u@rocketmail.com
ಮಾನ್ಯರೆ,

ಈ ಬಾರಿಯ 'ಛಂದ ಮುಖಪುಟ ಸ್ಪರ್ಧೆ'ಯಲ್ಲಿ ಶ್ವೇತಾ ಆಡುಕಳ ಅವರಿಗೆ ಬಹುಮಾನ ಬಂದಿದೆ.  ಡಿಸೆಂಬರ್ ೧೬ ರಂದು ಬಿಡುಗಡೆಯಾಗಲಿರುವ ವಸುಧೇಂದ್ರರ 'ವರ್ಣಮಯ' ಎಂಬ ಸುಲಲಿತ ಪ್ರಬಂಧ ಸಂಕಲನಕ್ಕೆ ಈ ಮುಖಪುಟವನ್ನು ಬಳಸಿಕೊಳ್ಳಲಾಗುವುದು.  ಶ್ವೇತಾರವರಿಗೆ ೫೦೦೦ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ನೀಡಲಾಗುವುದು.  ಉತ್ತರ ಕನ್ನಡ ಜಿಲ್ಲೆಯ ಶ್ವೇತಾ, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಎಂಎಫ್‌ಎ ಅನ್ವಯಕಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ೧೫೦ ಕ್ಕೂ ಹೆಚ್ಚು ವಿನ್ಯಾಸಗಳ ತೀವ್ರ ಪೈಪೋಟಿಯ ಈ ಸ್ಪರ್ಧೆಯ ನಿರ್ಣಯವನ್ನು ನಾಡಿನ ಖ್ಯಾತ ಕಲಾವಿದ ಶ್ರೀ ಪ.ಸ. ಕುಮಾರ್‌ರವರು ’ಛಂದ ಪುಸ್ತಕ’ ಕ್ಕಾಗಿ ಮಾಡಿಕೊಟ್ಟಿದ್ದಾರೆ.
 

ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ.
www.chukkubukku.com/...)


ಛಂದಪುಸ್ತಕದ ಪರವಾಗಿ:
ವಂದನೆಗಳು,
ವಸುಧೇಂದ್ರ
೦೬ನೇ ಡಿಸೆಂಬರ್ ೨೦೧೨

Comments

Submitted by venkatb83 Mon, 12/10/2012 - 17:27

ನೀವ್ ಕೊಟ್ಟ ಲಿಂಕ್ ಮೂಲಕ ಚುಕ್ಕುಬುಕ್ಕು ಬ್ಲಾಗ್ಗೆ ಹೋಗಿ ಅಲ್ಲಿ ಸ್ಪರ್ಧೆಗೆ ಬಂದ ಹಲವು ಚಿತರ್ಗಳನ್ನು ಅವುಗಳ ಕತ್ರುಗಳ ವಿವರಗಳನು ನೋಡಿದೆ.. ಅಲ್ಲಿ ಕೆಲ ಓದುಗರು ಬರೆದ ಪ್ರತಿಕ್ರಿಯೆಗಳನ್ನು ಗಮನಿಸಲಾಗಿ ಕೆಲ ಚಿತರ್ಗಳು ನೇರ ನೆಟ್ನಿಂದ ಕಾಪಿ ಮಾಡಿದ್ದು ಎಡಿಟ್ ಮಾಡಿದ್ದು ಗೊತ್ತಾಯ್ತು....!! ಕಲೆ ಸ್ವಯಂ ಅರಳಬೇಕು -ಅದು ಬೇರೊಬ್ಬರ ನೆರಳಲ್ಲಿ - ಹಂಗಿನಲ್ಲಿ ಅರಳಿದರೆ ಹೇಗೆ.!! ಹಾಗೆ ನೋಡಿದರೆ ಈ ಸ್ಪರ್ಧ್ಹೆಯ ಚಿತ್ರಗಳನ್ನು ನೋಡಿ ವಿಜೇತ ಚಿತ್ರ ಆಯ್ಕೆ ಮಾಡುವುದು ಕಠಿಣ ಅನ್ನಿಸ್ತು..ಎಲ್ಲವೂ ಒಂದಕ್ಕಂತ ಒಂದು ಸೂಪರ್.... ವಿಜೇತ ಚಿತ್ರದ ಶ್ವೇತ ಅವ್ರಿಗೆ ಶುಭ ಹಾರೈಕೆಗಳು ..ಶುಭಾಶಯಗಳು.. ಸ್ಪರ್ಧೆಗೆ ಬಂದ ಎಲ್ಲ ಚಿತ್ರಗಳೂ ಹಿಡಿಸಿದವು... ಈ ಸ್ಪರ್ಧೆ ಆಯೋಜಿಸಿದ ತನ್ಮೂಲಕ ಕಲಾವಿದರ ಏಳಿಗೆಗೆ ಶ್ರಮಿಸುವ ನಿಮಗೂ ಅಭಿನಂದನೆಗಳು...ಪ್ರಶಂಸನೀಯ ಕಾರ್ಯ. ಶುಭವಾಗಲಿ.. \|