ವಿಪರ್ಯಾಸ
ಆ ದಿನ ಬೆಳ್ಳಿಗ್ಗೆ ಎಂದಿನಂತೆ ವಾಕಿಂಗ್ ಗೆ ಹೋದ ಮನು ಮನೆಗೆ ಬರುವಾಗ ದಿನಕ್ಕಿಂತ ತಡ ಆಗಿತ್ತು .ಮನೆಗೆ ಬರುವುದನ್ನೇ ಕಾಯುತ್ತಿದ್ದ ರಶ್ಮಿ ಬಂದ ತಕ್ಷಣ ತರಾಟೆ ತೆಗೆದುಕೊಂಡಳು . ಯಾಕೆ ಇಷ್ಟು ಲೇಟ್ ಮಾಡಿದ್ದು ?ನಾನು ಆಫಿಸ್ ಗೆ ಹೋಗಬೇಕಲ್ಲ ನಿಮಗೆ ತಿಂಡಿ ಕೊಟ್ಟು ಹೀಗೆ ಮಾಡಿದರೆ ನನಗೆ ತುಂಬಾ ಕಷ್ಟ ಆಗುತ್ತೆ ಮನೆಯಲ್ಲೂ ಮಾಡಿ ಹೋಗಬೇಕು ನಾನು ಎಂದು ಬೈಯುತ್ತಿದ್ದಳು.ಮನು ಇದಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.ದಾರಿಯಲ್ಲಿ ನನ್ನ ಗೆಳೆಯ ಸಿಕ್ಕಿದ್ದ ಮಾತನಾಡುತ್ತ ನಿಂತುಬಿಟ್ಟೆ ಎಂದು ತಿಂಡಿ ತಿಂದು ಆಫಿಸ್ ಗೆ ಹೋದ .
ಇತ್ತ ತಡವಾಗಿ ಬಂದ ರಶ್ಮಿ ಗೆ ಆಫಿಸ್ ನಲ್ಲಿ ಮಂಗಳಾರತಿ ಆಯಿತು . ಇವತ್ತು ಮನೆಗೆ ಹೋದ ತಕ್ಷಣ ಮನು ವಿಗೆ ಚೆನ್ನಾಗಿ ಬೈಯಬೇಕು ನಾನ್ಯಾಕೆ ಕೆಲಸ ಮಾಡಬೇಕು ? ಇನ್ನು ಮುಂದೆ ಅವರೊಬ್ಬರೇ ಮಾಡಲಿ ನಾನು ಮನೆಯಲ್ಲೇ ಇರುತ್ತೇನೆ .ಮಗನನ್ನ ನೋಡಿಕೊಂಡು ,ಅವನಿಗೂ ಶಾಲೆಗೆ ಕಳುಹಿಸಿ ಮನೆ ಕೆಲಸ ಮುಗಿಸಿ ಮನುವಿಗೆ ಎಲ್ಲ ರೆಡಿ ಮಡಿ ಆಫಿಸ್ ಗೆ ಬಂದು ಇಲ್ಲೂ ಬೈಸಿಕೊಂಡು ಎಲ್ಲ ಮಾಡಲಾರೆ ಎಂದು ಮನಸಿನಲ್ಲೇ ಮನುವಿಗೆ ಬೈದುಕೊಳ್ಳುತ್ತಾ ಕೆಲಸ ಪ್ರಾರಂಬಿಸಿದಳು.
ಇತ್ತ ಮನು ಆಫಿಸ್ ಗೆ ಬಂದು ಕೆಲಸ ಪ್ರಾರಂಬಿಸಿದರೂ ಏನೋ ಒಂದು ರೀತಿಯ ಆಲಸ್ಯ .ತಾನು ಎಂದಿನಂತೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ .ಎದೆಯಲ್ಲಿ ಬೆಂಕಿ ಹಾಕಿದಂತಾಗುತ್ತಿದೆ.ಕುಳಿತುಕೊಳ್ಳಲು ಕಷ್ಟವಾಗುತ್ತಿತ್ತು .ಅಲ್ಲೇ ಇದನ್ನು ಗಮನಿಸುತ್ತಿದ್ದ ಗೆಳೆಯ ಶ್ರೀಧರ ಬಂದು ವಿಚಾರಿಸಿದ .ಏನಿಲ್ಲ ಇವತ್ತು ಸ್ವಲ್ಪ ಜಾಸ್ತಿ ವಾಕಿಂಗ್ ಮಾಡಿದೆ ಅದಿಕ್ಕೆ ಏನೋ ಸ್ವಲ್ಪ ಸುಸ್ತಾಗುತ್ತಿದೆ ಎಂದ.
ರಶ್ಮಿ ಗೆ ಆ ದಿನವೆಲ್ಲ ತುಂಬಾ ಕೆಲಸ ವಿತ್ತು .ಸಂಜೆ ಗಂಟೆ ೭ ಆದರು ಮನೆಗೆ ಹೋಗಲು ಆಗಲಿಲ್ಲ ಬಾಸ್ ಆರ್ಡರ್ ಮಾಡಿದ್ದರು ಇ ಕೆಲಸ ಇವತ್ತು ಮಗಿಸಲೇ ಬೇಕು ಎಂದು .
ಇತ್ತ ಆಫಿಸ್ ನಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಲಾಗದ ಮನು ೫ ಗಂಟೆಗೆಲ್ಲ ಮನೆಗೆ ಬಂದಿದ್ದ . ಮಗ ಶಿಶಿರ ಮನೆಗೆ ಬಂದಾಗ ಸ್ವಲ್ಪ ಹೊತ್ತು ಅವನ ಹೋಂ ವರ್ಕ್ ಕಡೆ ಗಮನ ಹರಿಸಿದ ಅವನಿಗೆ ಕಾಫಿ ತಿಂಡಿ ಮಾಡಿಕೊಟ್ಟ . ಶಿಶಿರನಿಗೆ ತುಂಬಾ ಸಂತೋಷ ಆಗಿತ್ತು .ಅಪ್ಪ ನೀನು ದಿನ ಹೀಗೆ ಬೇಗ ಬಾ ನೀನೆ ಒಳ್ಳೆಯವನು ನನ್ನ ಹೊಡೆಯುವುದಿಲ್ಲ ಎಂದೆಲ್ಲ ಹೇಳಿದಾಗ ಮನು ವಿಗೆ ನಗು ಬಂತು .ಆಯ್ತು ಕಣೋ ನಾಳೆ ಇಂದ ನೀನು ಮನೆಗೆ ಬರುವುದರೊಳಗೆ ನಾನು ಬಂದಿರ್ತೀನಿ ನೋಡ್ತಿರು ಎಂದ ಮನು.
ರಾತ್ರಿ ಎಂಟು ಗಂಟೆಗೆ ಮನೆ ತಲುಪಿದ ರಶ್ಮಿಗೆ ತುಂಬಾ ಸುಸ್ತಾಗಿತ್ತು ಜೊತೆಗೆ ಗಂಡನ ಮೇಲೆ ಇನ್ನಿಲ್ಲದ ಕೋಪ ಬಂದಿತ್ತು .ಬಂದ ತಕ್ಷಣ ಗಂಡ ನನ್ನು ತರಾಟೆಗೆ ತೆಗೆದುಕೊಂಡಳು . ನಾಳೆ ಇಂದ ನಾನು ಕೆಲಸಕ್ಕೆ ಹೋಗಲ್ಲ ನನಗೆ ನಿಮ್ಮನ್ನು ಕಾಯುತ್ತ ಇರೋಕ್ಕಾಗಲ್ಲ ಎಲ್ಲ ಕೆಲಸ ನಾನೆ ಮಾಡಬೇಕು ಮನೆಯಲ್ಲಿ ಕೆಲಸದವಲಿಲ್ಲ ಎಂದು ಕೂಗಾಡಿದಳು.ಮನು ಸಮಾದಾನಪಡಿಸಿದ ನಾಳೆ ವಾಕಿಂಗ್ ನಿಂದ ಖಂಡಿತ ಬೇಗ ಬರುತ್ತೇನೆ ಇವತ್ತಿನ ತರ ಲೇಟ್ ಮಾಡಲ್ಲ ಎಂದ .
ಮರುದಿನ ಎಂದಿನಂತೆ ವಾಕಿಂಗ್ ಗೆ ಹೋರಾಟ ಗಂಡನಿಗೆ ರಶ್ಮಿ ತಾಕೀತು ಮಾಡಿದಳು ಇವತ್ತು ಬೇಗ ಬರದಿದ್ದರೆ ನಾನು ನಿಮಗೆ ಕಾಯುವುದಿಲ್ಲ ನೀವೇ ಎಲ್ಲ ಕೆಲಸ ಮುಗಿಸಿ ಹೋಗಬೇಕು ಆಫಿಸ್ ಗೆ ಎಂದಳು.ಮನು ನಗುತ್ತ ಹೊರಟ.
ಎಲ್ಲ ಕೆಲಸ ಮುಗಿಸಿ ಆಫಿಸ್ ಗೆ ತಯಾರಾಗಿ ತಿಂಡಿ ತಿನ್ನೋಣ ಅನ್ನುವಷ್ಟರಲ್ಲಿ ಮನು ಯಾಕೆ ಇನ್ನು ಬರಲೇ ಇಲ್ಲ ಇವತ್ತು ಬಂದ ತಕ್ಷಣ ಗಲಾಟೆ ಮಾಡಬೇಕು ಅಷ್ಟು ಹೊತ್ತು ಯಾಕೆ ವಾಕಿಂಗ್ ಮಾಡುವುದು ದಿನ ಒಂದಲ್ಲ ಒಂದು ಗೆಳೆಯರು ಸಿಕ್ಕೆಸಿಗುತ್ತಾರೆ .ಏನಾದರೂ ಮಾಡಿಕೊಳ್ಳಲಿ ನಾಳೆ ಇಂದ ವಾಕಿಂಗ್ ಗೆ ಹೋಗಲು ಬಿಡಬಾರದು . ಡಾಕ್ಟರ್ ಹೇಳಿದ್ದರು ಕೊಲೆಸ್ತ್ರೋಲ್ ಜಾಸ್ತಿ ಇದೆ ವಾಕಿಂಗ್ ಮಾಡಿ ಅಂತ ಇತ್ತೀಚಿಗೆ ಇವರು ವಾಕಿಂಗ್ ನೆ ಒಂದು ಕೆಲಸ ಮಾಡಿಕೊಂಡಿದ್ದಾರೆ ಎಂದು ಯೋಚಿಸುತ್ತಿರುವಾಗಲೇ ಮನುವಿನ ಗೆಳೆಯ ಬಂದು ಆದಷ್ಟು ಬೇಗ ಬನ್ನಿ ಮನು ದಾರಿಯಲ್ಲಿ ಬಿದ್ದು ಬಿಟ್ಟಿದ್ದಾನೆ ಎಂದಾಗ ಓಡೋಡಿ ಹೊರಟಳು . ವಿಪರ್ಯಾಸವೆಂದರೆ ಮನು ಹೃದಯಾಗಾತದಿಂದ ಪರಲೋಕ ಸೇರಿದ್ದ . ರಶ್ಮಿ ಗೆ ನೋವು ತಡೆಯಲಾಗಲಿಲ್ಲ ಗಂಡ ಮನೆಗೆ ಬಂದೊಡನೆ ಬೈಯಬೇಕೆಂದು ಅಂದುಕೊಂಡಿದ್ದಳು ಆದರೆ ಮನು ಮನೆ ಸೇರಲೇ ಇಲ್ಲ .ನಿನ್ನೆ ಕೂಡ ಮಂಕಾಗಿ ಇದ್ದ ಎಂದು ಮನುವಿನ ಗೆಳೆಯ ಹೇಳಿದಾಗ ರಶ್ಮಿಗೆ ನೋವು ಮತ್ತಷ್ಟು ಹೆಚ್ಚಾಯಿತು ತಾನು ಮನುವಿನ ಒಳಗಿನ ನೋವನ್ನು ಅರ್ಥ ಮಾಡಿಕೊಂಡಿಲ್ಲವಲ್ಲ ಎಂದು ಕಣ್ಣೀರು ಸುರಿಸಿದಳು .ಒಂದು ಸಲ ಕಣ್ಣು ತೆರಿ ಮನು ನಾನು ನಿಮಗೆ ಬೈಯುವುದಿಲ್ಲ ಎಂದು ಗೋಗರೆಯುತ್ತಿದ್ದಳು. ಆದರು ಹೋದ ಮನು ಮತ್ತೆ ಬರಲಾಗದಂತ ಜಾಗಕ್ಕೆ ಹೋಗಿ ಆಗಿತ್ತು .