ವಿವಿಧತೆಯಲ್ಲಿ ಏಕತೆ…
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು
ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು
ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ
ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ
ಕಾಸು ಎಸೆಯುವರ ಮುಂದೆ ಕೈಯೊಡ್ಡುವವರಿರುವವರೆಗೂ ಮಹಾತ್ಮರಿಗೆ ಬೆಲೆಯಿದೆಯೆ
ಸ್ವಾತಂತ್ರ್ಯ ಸ್ವ ಹಿತದ ತಂತ್ರವನು ದೇಶದ ಮಂದಿಗೆ ಕಲಿಸಿ ಹೋಗಿದ್ದು ವಿಶೇಷವೆ
ನಾಯಕರು ದೇಶ ಸುತ್ತಬೇಕು ಯಾಕೆಂದರೆ ಒಣಗಿದ ಭೂಮಿಯಲ್ಲೂ ಓಯಸೀಸ್ ಕಂಡುಬರುತ್ತದೆ
ವಿಮಾನದಲ್ಲಿ ಬಂದು ಹೋಗುವವರಿಗೆ ಭೂಮಿಯ ನರಕದ ಬಣ್ಣ ಕಾಣಿಸುವುದೆ
ಅನಾಹುತಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಸಂಬಂಧಿಸಿದವರು ಏ ಸಿ ರೂಪದಲ್ಲಿ ಮಲಗಿದ್ದಾರೆ
ದುಡಿದು ತಿನ್ನುವಗೆ ಬಡತನ ಶಾಪವಲ್ಲ; ಲಾಭದ ಹಣದಲ್ಲಿ ಕುಳಿತವಗೆ ಮಾತ್ರ ಬಡವರ ಶಾಪವೆ
ನಾನೇ ದೊಡ್ಡವನೆಂದು ತಿರುಗದಿರಿ ನಿಮ್ಮ ಹಿಂದೆಯೇ ನಿಮಗಿಂತ ದೊಡ್ಡವರಿದ್ದಾರೆ
ಮಾಳಿಗೆಯಲ್ಲಿ ಎಲ್ಲರೂ ವಾಸ ಮಾಡುತ್ತಾರೆ ಆದರೆ ಮಾಳಿಗೆಯಲ್ಲೇ ಇರುವವರು ಬೆರಳೆಣಿಕೆಯವರು ಮಾತ್ರವೆ
ಪ್ರಕೃತಿಯಲ್ಲಿ ಎಲ್ಲಾ ವರ್ಗದ ಜೀವಿಗಳಿದ್ದರೂ ಸಾಮರಸ್ಯದ ಕೊರತೆಯಿದೆ
ಬರೆಯುವುದು ವರ್ಣಮಾಲೆಯ ರೀತಿಯಾದರೂ ಬರೆಯುವ ಬರಹಗಳಲ್ಲಿ ವೈವಿಧ್ಯತೆಯಿದೆ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ