ವೇದನಾ ವೇದವತಿ
ಕವನ
ಗಂಗೆತುಂಗೆಯರೀಗಬೀಗುವರು ಬರಿದಾಯಿತೆನ್ನೊಡಲು
ಬರದನಾಡ ಬವಣೆನೀಗಿದೆನಾಗ ಬರಲಿಲ್ಲ ಮತ್ತೆನಗೆಕಾಲ
ತೊನೆಯುತಲಿದ್ದೆ ಬರಿದಾದ ಬಿರಿದ ನೆಲವ ಮೀಯಿಸಿ
ತಣಿಸಿದೆನೆಲ್ಲ ಜೀವರಾಶಿಗಳ ಬವಣೆಯ
ಮನುಜನತಿಯಾಶೆಯಿಂದೆನೆಗೀ ದೆಸೆಯು
ಕೃಶಳಾಗಿ ಹೋದೆನಾ ಕಾಲಕೀಲಕದಲ್ಲಿ
ಬರಲಿಲ್ಲ ಭಗೀರಥನೊಬ್ಬ ಭರಪೂರತುಂಬಿಸಲೆನ್ನೊಡಲ
ಮುನಿಜನರೆಲ್ಲ ಮೀಯುತಿದ್ದರುತ್ತರಮುಖಿ ಪುಣ್ಯ ವೇದವತಿಯೆಂದಾಗ
ಸಹ್ಯಾದ್ರಿಯಂಚಲಿ ಜನಿಸಿ ಜನಜನಿತಳಾದೆ ಕರುನಾಡಾಂಧ್ರ ರಾಯರ ಸೀಮೆಯಲಿ
ತುಂಗಭದ್ರೆಯ ಸಂಗಮ ಸಂಭ್ರಮವು ಬಳ್ಳಾರಿ ಬಿರುಬಿಸಿಲ ನಾಡಲ್ಲಿ
ಕಟ್ಟಿಹಾಕಿದರೆನ್ನ ಕಲ್ಪತರು ನಾಡಲ್ಲಿ ವಾಣಿವಿಲಾಸಿನಿಯಾಗಿ
ಮುಗಿಯಿತಲ್ಲಿಗೆನ್ನಯ ವಿಲಾಸ ಹಗುರವಾಗಿಹೆನೆಲ್ಲರಿಗೀಗ
ಹಗರಿ ಯೆಂದೆನಗೆ ಕರೆಯುವರಲ್ಲ ಮರೆತಿಹರಿತಿಹಾಸ ವೇದವತಿಯ
ಮೋಕ್ಷಪುರಿಯದುವೆ ಮೋಕ ವೆಂದಾಯ್ತು ಬಾರದೆ ಮತ್ತೆ ಗತ ಸಂಭ್ರಮವೀಗ.
Comments
ಉ: ವೇದನಾ ವೇದವತಿ