ಶಂಕು ಸ್ಥಾಪನೆ-ಹಾಗೆಂದರೇನು

ಶಂಕು ಸ್ಥಾಪನೆ-ಹಾಗೆಂದರೇನು

 ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಖಾಯಂ ಆಗಿ ಬಳಸುವ ಶಬ್ಧ "ಶಂಕು ಸ್ಥಾಪನೆ"  ಅಥವಾ "ಗುದ್ದಲಿ ಪೂಜೆ"


  ಆದರೆ ಈ ಬಗ್ಗೆ ವಿವರವನ್ನು ಹುಡುಕುತ್ತ ಹೋದಾಗ ಸಿಕ್ಕ ಮೂಲ ಮಾಹಿತಿ ಇದು......


 ಶಂಕು ಎಂದರೆ....


  ಅರಳಿ, ಆಲ,ಕೆಂಪು ಚಂದನ, ಶ್ರೀಗಂಧ,ಹೊಂಗೆ, ಬೇವು ಹಲಸು ಈ ಮರಗಳಲ್ಲಿ ಯಾವುದಾದರೂ ಒಂದನ್ನು ಬಳಸಿ


ಮಾಡುವ ಕಟ್ಟಿಗೆಯ  ಆಕೃತಿ. ಇದರ  ಉದ್ದ ಮನೆ ಕಟ್ಟುವ ಯಜಮಾನನ ಕೈ ಅಳತೆಯ  ಒಂದುವರೆ ಗೇಣಿನಷ್ಟು


 ಇರಬೇಕು. 2 ಅಂಗುಲ ದಪ್ಪವಾಗಿದ್ದು  ಒಂದೇ ಅಳತೆಯಿರುವಂತೆ ನೋಡಿಕೊಳ್ಳ ಬೇಕು. ಇದನ್ನು ಮೂರು ಸಮಭಾಗ


ಮಾಡಬೇಕು.ಇದರಲ್ಲಿ ಮದ್ಯಭಾಗ ಚೌಕಾಕಾರವಾಗಿರಬೇಕು.ಒಂದು ಕೊನೆಯ ಭಾಗ ವೃತ್ತಾಕಾರವಾಗಿ ಕೆತ್ತಬೇಕು.


ಇನ್ನೊಂದು ಕೊನೆಯ ಭಾಗ  ಎಂಟು ಮೂಲೆಗಳಿಂದ ಕೂಡಿರ ಬೇಕು ಹೀಗೆ ಮೂರೂ ಸಮಭಾಗಗಳು ಮೂರು


ರೀತಿಯ  ಆಕೃತಿಯಲ್ಲಿರುವಂತೆ ನಯವಾಗಿ ಕೆತ್ತಸಿದಾಗ  ಅದನ್ನು ಶಂಕು ಎನ್ನುವರು.


ಶಂಕು ಸ್ಥಾಪನೆ....


  ಈ ರೀತಿ ನಿರ್ಮಿಸಿದ ಕಟ್ಟಿಗೆಯ ಶಂಕುವನ್ನು  ಕಟ್ಟಡ ನಿರ್ಮಿಸುವ  ಸ್ಥಳದ (ಫೌಂಡೇಶನ್) ಸರಿಯಾದ ಮಧ್ಯಭಾಗದಲ್ಲಿ


1 ಅಡಿ ಅಗಲ 1 ಅಡಿ ಉದ್ದ ಹಾಗೂ ಒಂದುವರೆ ಅಡಿ ಆಳದ ಗುಂಡಿಯನ್ನು ತೋಡಿ ಈ ಶಂಕುವಿಗೆ  ಪೂಜೆ ಸಲ್ಲಿಸಿ


ಹೂತು ಹಾಕುವುದೇ ಶಂಕು ಸ್ಥಾಪನೆ.


   ಆದರೆ  ಇಂದು ಈ ರೀತಿ  ಶಂಕು ಸ್ಥಾಪನೆ ಮಾಡುವರೇ.........?


 

Comments

Submitted by H.A.Patil. Wed, 05/08/2013 - 20:11

ಭಾಗ್ವತ ರವರಿಗೆ ವಂದನೆಗಳು, ' ಶಂಕುಸ್ಥಾಪನೆ ' ಪದದ ಅರ್ಥ ಗೊತ್ತಿರಲಿಲ್ಲ, ತಮ್ಮ ಬರಹದ ಮೂಲಕ ವಿವರ ಗೊತ್ತಾಯಿತು. ನನಗೆ ತಿಳಿದಿರುವಂತೆ ನೀವು ಲೇಖನದಲ್ಲಿ ವಿವರಿಸಿದ ರೀತಿ ಈಗ ಯಾರೂ ಶಂಕುಸ್ಥಾಪನೆ ಮಾಡುವುದಿಲ್ಲ. ಬಹುಶಃ ನಮ್ಮ ಜನಕ್ಕೆ ಶಂಕುಸ್ಥಾಪನೆಯ ಸವಿವರ ಮಾಹಿತಿ ಇಲ್ಲದಿರುವುದೆ ಇದಕ್ಕೆ ಕಾರಣವಿರಬಹುದು, ಉತ್ತಮ ಮಾಹಿತಯುಳ್ಳ ಲೇಖನ ಧನ್ಯವಾದಗಳು.
Submitted by ಭಾಗ್ವತ Wed, 05/08/2013 - 21:50

In reply to by H.A.Patil.

ಪಾಟೀಲರವರೆ, ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ಗೃಹ ವಾಸ್ತುವಿನ ಬಗ್ಗೆ ನಂಬಿಕೆ ಇರುವವರು ಮನೆ ನಿರ್ಮಿಸುವಾಗ ಪ್ರಾರಂಭದಲ್ಲಿ ಈ ರೀತಿ ಶಂಕು ಸ್ಥಾಪನೆ ಮಾಡಿ ಮನೆ ನಿರ್ಮಾಣ ಮಾಡುವದರಿಂದ ಅಂತಹ ಮನೆಯಲ್ಲಿ ಎಲ್ಲ ರೀತಿಯ ನೆಮ್ಮದಿ ಸುಖ ಸೌಭಾಗ್ಯ ದೊರೆಯುವುದೆಂಬ ನಂಬಿಕೆ ಇದೆ.
Submitted by ಭಾಗ್ವತ Thu, 05/09/2013 - 18:26

In reply to by shridharjs

ಒಂದೇ ಕಾಮಗಾರಿಗೆ ಮೂರು ಬಾರಿ ಶಂಕು ಸ್ಥಾಪನೆಯು ಆಗುವ ದುರಂತ ನಮ್ಮಲ್ಲಿರುವುದರಿಂದ ನೀವೆಂದಂತೆ ಅದು ತ್ರಿಶಂಕು ಸ್ಥಾಪನೆ.))) ಪ್ರತಿಕ್ರಿಯೆಗೆ ಧನ್ಯವಾದಗಳು
Submitted by ಗಣೇಶ Thu, 05/09/2013 - 23:47

In reply to by ಭಾಗ್ವತ

ನಂತರವೂ ಕಾಮಗಾರಿ ತ್ರಿಶಂಕುಸ್ಥಿತಿಯಲ್ಲೇ...; ಶಂಕುಸ್ಥಾಪನೆ ಬಗ್ಗೆ ವಿವರ ನೀಡಿದ ಭಾಗ್ವತರಿಗೂ, ಅದನ್ನು ತ್ರಿಶಂಕು ಸ್ಥಿತಿಗೆ ಕೊಂಡೊಯ್ದ :) :) ಶ್ರೀಧರ್ ಅವರಿಗೂ ಧನ್ಯವಾದಗಳು.