ಶಂಕು ಸ್ಥಾಪನೆ-ಹಾಗೆಂದರೇನು
ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಖಾಯಂ ಆಗಿ ಬಳಸುವ ಶಬ್ಧ "ಶಂಕು ಸ್ಥಾಪನೆ" ಅಥವಾ "ಗುದ್ದಲಿ ಪೂಜೆ"
ಆದರೆ ಈ ಬಗ್ಗೆ ವಿವರವನ್ನು ಹುಡುಕುತ್ತ ಹೋದಾಗ ಸಿಕ್ಕ ಮೂಲ ಮಾಹಿತಿ ಇದು......
ಶಂಕು ಎಂದರೆ....
ಅರಳಿ, ಆಲ,ಕೆಂಪು ಚಂದನ, ಶ್ರೀಗಂಧ,ಹೊಂಗೆ, ಬೇವು ಹಲಸು ಈ ಮರಗಳಲ್ಲಿ ಯಾವುದಾದರೂ ಒಂದನ್ನು ಬಳಸಿ
ಮಾಡುವ ಕಟ್ಟಿಗೆಯ ಆಕೃತಿ. ಇದರ ಉದ್ದ ಮನೆ ಕಟ್ಟುವ ಯಜಮಾನನ ಕೈ ಅಳತೆಯ ಒಂದುವರೆ ಗೇಣಿನಷ್ಟು
ಇರಬೇಕು. 2 ಅಂಗುಲ ದಪ್ಪವಾಗಿದ್ದು ಒಂದೇ ಅಳತೆಯಿರುವಂತೆ ನೋಡಿಕೊಳ್ಳ ಬೇಕು. ಇದನ್ನು ಮೂರು ಸಮಭಾಗ
ಮಾಡಬೇಕು.ಇದರಲ್ಲಿ ಮದ್ಯಭಾಗ ಚೌಕಾಕಾರವಾಗಿರಬೇಕು.ಒಂದು ಕೊನೆಯ ಭಾಗ ವೃತ್ತಾಕಾರವಾಗಿ ಕೆತ್ತಬೇಕು.
ಇನ್ನೊಂದು ಕೊನೆಯ ಭಾಗ ಎಂಟು ಮೂಲೆಗಳಿಂದ ಕೂಡಿರ ಬೇಕು ಹೀಗೆ ಮೂರೂ ಸಮಭಾಗಗಳು ಮೂರು
ರೀತಿಯ ಆಕೃತಿಯಲ್ಲಿರುವಂತೆ ನಯವಾಗಿ ಕೆತ್ತಸಿದಾಗ ಅದನ್ನು ಶಂಕು ಎನ್ನುವರು.
ಶಂಕು ಸ್ಥಾಪನೆ....
ಈ ರೀತಿ ನಿರ್ಮಿಸಿದ ಕಟ್ಟಿಗೆಯ ಶಂಕುವನ್ನು ಕಟ್ಟಡ ನಿರ್ಮಿಸುವ ಸ್ಥಳದ (ಫೌಂಡೇಶನ್) ಸರಿಯಾದ ಮಧ್ಯಭಾಗದಲ್ಲಿ
1 ಅಡಿ ಅಗಲ 1 ಅಡಿ ಉದ್ದ ಹಾಗೂ ಒಂದುವರೆ ಅಡಿ ಆಳದ ಗುಂಡಿಯನ್ನು ತೋಡಿ ಈ ಶಂಕುವಿಗೆ ಪೂಜೆ ಸಲ್ಲಿಸಿ
ಹೂತು ಹಾಕುವುದೇ ಶಂಕು ಸ್ಥಾಪನೆ.
ಆದರೆ ಇಂದು ಈ ರೀತಿ ಶಂಕು ಸ್ಥಾಪನೆ ಮಾಡುವರೇ.........?
Comments
ವಿಶೇಷ ಮಾಹಿತಿಗೆ ಧನ್ಯವಾದಗಳು,
In reply to ವಿಶೇಷ ಮಾಹಿತಿಗೆ ಧನ್ಯವಾದಗಳು, by makara
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
In reply to ವಿಶೇಷ ಮಾಹಿತಿಗೆ ಧನ್ಯವಾದಗಳು, by makara
ನನ್ನದೂ ಧನ್ಯವಾದ.
ಭಾಗ್ವತ ರವರಿಗೆ ವಂದನೆಗಳು,
In reply to ಭಾಗ್ವತ ರವರಿಗೆ ವಂದನೆಗಳು, by H.A.Patil.
ಪಾಟೀಲರವರೆ,
ಸರಕಾರಿ ಕಾಮಗಾರಿಗಳ ಸ0ಧರ್ಬದಲ್ಲಿ
In reply to ಸರಕಾರಿ ಕಾಮಗಾರಿಗಳ ಸ0ಧರ್ಬದಲ್ಲಿ by shridharjs
ಶ್ರೀಧರರವರೆ,
In reply to ಸರಕಾರಿ ಕಾಮಗಾರಿಗಳ ಸ0ಧರ್ಬದಲ್ಲಿ by shridharjs
ಒಂದೇ ಕಾಮಗಾರಿಗೆ ಮೂರು ಬಾರಿ ಶಂಕು
In reply to ಒಂದೇ ಕಾಮಗಾರಿಗೆ ಮೂರು ಬಾರಿ ಶಂಕು by ಭಾಗ್ವತ
ನಂತರವೂ ಕಾಮಗಾರಿ
In reply to ನಂತರವೂ ಕಾಮಗಾರಿ by ಗಣೇಶ
ಗಣೇಶರವರೆ,