ಶಬ್ಧವಿರದ ಘಳಿಗೆ

ಶಬ್ಧವಿರದ ಘಳಿಗೆ

ಬರಹ

ಬಂದ ಮಾತು ಬಂದ ಹಾಗೆ ಕರಗುತಿರಲು
ಮೌನದಲ್ಲೂ ಸೇಡಿನ ಕೀಡಿಯಾಡುತಿರಲು
ಮನ ಬಯಸಿತು ಶಬ್ಧವಿರದ ಘಳಿಗೆಯೊಂದನ್ನು
ದೇಹ ಬಯಸಿತು ಕೊನೆಯಿರದ ನಿದ್ದೆಯೊಂದನ್ನು

ಬೆಳಕಾಗದ ಕತ್ತಲಲ್ಲಿ
ದೂರದಲ್ಲೋ ದ್ವೇಷದ ಕಿಡಿಯೊಂದು
ನೋಡು ನೋಡುತಿದ್ದ ಹಾಗೆ
ಹತ್ತಿಯುರಿದು ಮನೆಯ ಮುರಿದು
ರಕ್ತದೊಕುಳಿಯನು ಹರಿಸುತಿರಲು
ಮನ ಬಯಸಿತು ಶಬ್ಧವಿರದ ಘಳಿಗೆಯೊಂದನ್ನು
ದೇಹ ಬಯಸಿತು ಕೊನೆಯಿರದ ನಿದ್ದೆಯೊಂದನ್ನು

ಜೀವನವೊಂದು ಹಾವುಏಣಿ ಆಟವಾಗಿ
ಜಯದ ಮೂರನೇ ಮೆಟ್ಟಿಲೇರುವಾಗ
ನೋಡು ನೋಡುತ್ತಿದ್ದ ಹಾಗೆ
ಏಣಿಗುಂಟ ಹಾವುಗಳೆರಿ
ಪ್ರತಿ ಮೆಟ್ಟಿಲಲ್ಲೂ ವಿಷ ಕಕ್ಕುತಿರಲು
ಮನ ಬಯಸಿತು ಶಬ್ಧವಿರದ ಘಳಿಗೆಯೊಂದನ್ನು
ದೇಹ ಬಯಸಿತು ಕೊನೆಯಿರದ ನಿದ್ದೆಯೊಂದನ್ನು

ಹಾಯಿಯಿರದ ದೋಣಿಯೊಳಗೆ
ಜೀವನದ ಕಡಲಿನೊಳಗೆ
ನೋಡು ನೋಡುತಿದ್ದ ಹಾಗೆ
ಸೊಲಿನ ಸುಳಿಯಲ್ಲಿ ಸಿಕ್ಕಿಕೊಳ್ಳುವಾಗ
ಗೆಲುವಿನ ದೋಣಿಯೊಂದು ನನ್ನನ್ನೆತ್ತಿ ತಾನು ಮುಳುಗುತಿರಲು
ಮನ ಬಯಸಿತು ಶಬ್ಧವಿರದ ಘಳಿಗೆಯೊಂದನ್ನು
ದೇಹ ಬಯಸಿತು ಕೊನೆಯಿರದ ನಿದ್ದೆಯೊಂದನ್ನು