ಶವ

ಶವ

ಬರಹ
ಎಂದಿಗೂ ನಗುತ ನಗಿಸುತಿಹ ನಗೆ ಬುಗ್ಗೆ ಹಿರಿಯ ಕಿರಿಯರೆಲ್ಲರ ಮನ ತಣಿಸುವ ಕಣ್ಮಣಿ ಕಪ್ಪಾದರೂ ಕಡೆದಿಟ್ಟ ಕರಿಬಂಡೆಯಂತಿಹ ತರುಣ ಸಹೃದಯರಿಗೆ ತೋರಿಸುವ ತನ್ನಲಿರುವ ಕರುಣ ಕೆಟ್ಟವರಿಗೆ ಕೆಟ್ಟವನಾಗಿ ದುಷ್ಟರ ಸದೆಬಡಿಯುವ ವೀರ ದಾಂಡಿಗರೂ ಇವನ ಹತ್ತಿರ ಬರಲು ಹೆದರಿಯಾರು ಒಳ್ಳೆಯವರಿಗೆ ಒಳ್ಳೆಯವನಾಗಿ ಸಹಾಯ ಹಸ್ತ ಚಾಚುವ ಧೀರ ಓಣಿಯ ಮಕ್ಕಳಿಗೆಲ್ಲ ಅಚ್ಚು ಮೆಚ್ಚಿನ ಅಣ್ಣ ಸ್ನೇಹಿತರ ನಗಿಸುತ ದಾಟಲು ಹೋದ ರೈಲ್ವೇ ಹಳಿ ದೈತ್ಯಾಕಾರದ ಬಂಡಿ ಬಂದೇ ಬಿಟ್ಟಿತು ಇವನ ಬಳಿ ಇವನ ಸಹೃದಯತನವ ಹೇಗೆ ಅರಿಯಬೇಕಾ ಬಂಡಿ ಕಣ್ಮುಚ್ಚಿ ಇವನ ಕೊಚ್ಚಿ ಹಾಕಿತು ಆ ಚಂಡಿ ರಕ್ತ ಸಿಕ್ತ ದೇಹ ನೋಡಲು ಹೃದಯ ವಿದ್ರಾವಕ ರುಂಡ ಮುಂಡ ಬೇರ್ಪಡಲು ಎಲ್ಲಿ ಹೋಯಿತೋ ಅವನ ಚೇತನ ಎಲ್ಲರ ಹೆದರಿಸಿ ಹೆಬ್ಬಂಡೆಯಾಗಿದ್ದಾ ದೇಹ ಮೇಲೆ ಕೂತ ಸಣ್ಣ ನೊಣವನೂ ಓಡಿಸಿಲಾದೀತೇ ಕ್ಷಣ ಮಾತ್ರದಲಿ ಆಯಿತೇ ಅಂದಿನ ಮಾಂಸ ಪರ್ವತ ಇಂದಿನ ಎಲುಬಿನ ಹಂದರ ಅಂದು ಅಬ್ಬೇಪಾರಿಗಳಿಗೆ ಉಣಿಸಿದ ಮೃಷ್ಟಾನ್ನ ಇಂದು ಕಾಗೆ ನಾಯಿಗಳಿಗಾಗಿಹ ಚಿತ್ರಾನ್ನ ಅವನ ರಕ್ಷಣೆಗೆ ಯಾರೂ ಬರಲಾರರೇ ಮತ್ತೆ ಆ ದಷ್ಟ ಪುಷ್ಟ ದೇಹ ಮೃದು ಮನಸು ಅರಳೀತೇ?