ಶುಭವಿಹುದೆ

ಶುಭವಿಹುದೆ

ಕವನ

ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು

ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು !

ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ !

ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ ಸಾವಿಲ್ಲ

ಕಿರಿಯರಿಗೆ ಬೇಕಾಗಿ, ದುಡಿ ದುಡಿದು ಹಣ್ಣಾದೆ-- ಕೊಳೆತು ಹೋದೆ

ಕಿರಿಯರೆಲ್ಲ ಸಿರಿಯ ಕಂಡರು, ನಾನು ದಟ್ಟ ದರಿದ್ರನಾದೆ !

ನನ್ನ ಮಕ್ಕಳು ,ಹಲಸಿನ ಹಪ್ಪಳ ತಿನ್ನುತ್ತಾ ಬೆಳೆದರು

ಅವರ ಮಕ್ಕಳು ಮಸಾಲೆದೋಸೆ ತಿಂದು - ಸವಿದು ಬಾಳಿದರು

ನನ್ನ ಹಾಡು ಹಾಡಾಗಲಿಲ್ಲ

ಅವರ ಹಾಡಲ್ಲಿ ಸಂಗೀತವೇ ಎಲ್ಲ

ಜಾತ್ರೆ ಸಡಗರದ ಗೌಜಿಯಿಲ್ಲ, ಹಬ್ಬದೂಟವ ಉಂಡವರಲ್ಲ 

ಬಾಣ ಬಿರುಸುಗಳ ನೋಡಿದವರಲ್ಲ, ಮುದುಡಿ -- ಮಲಗಿದವರು

ಅನ್ನದೊಳಗಿನ ಅಗುಳುಗಳು ನನ್ನ ಮಕ್ಕಳು !

ಬಾಳಿನೊಳು ಮಳೆಯಿಲ್ಲ, ನಿತ್ಯ ವಸಂತವಿಲ್ಲ -- ಸುಖವಂತು ನೋಡಲೇ ಇಲ್ಲ

ನನ್ನ ಬಾಳಿಗಿಲ್ಲ ಸರಿದಾರಿ, ಕಾರಣ ನಾನು ಅಕ್ಷರದವನಲ್ಲ , ಅಲೆ ಅಲೆಯುವ ಅಲೆಮಾರಿ !

ಬದುಕೇ ಮುಳ್ಳಿನ ಬೇಲಿ! 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್