ಸಂಕ್ರಮಣ ಕಾಲ

ಸಂಕ್ರಮಣ ಕಾಲ

ಕವನ

 
ರಾಷ್ಟ್ರದ ಬೆನ್ನೆಲುಬಿಗಳಿಗೊಂದು
ಹರುಷದ ಪರ್ವಕಾಲ
ಬೆಳೆದ ಬೆಳೆಗಳಿಗೊಂದು
ಸುಗ್ಗಿಯ ಅಪೂರ್ವಕಾಲ||
 
ವರುಷದ ಏಳು-ಬೀಳಿಗಳಿಗೊಂದು
ನಿಲುಕದ ಸಂಕ್ರಮಣ ಕಾಲ
ಮನದ ಭ್ರಾಂತಿಗಳಿಗೆಂದು
ಎಳ್ಳು-ಬೆಲ್ಲಗಳ ಸಂಗಮ ಕಾಲ||
 
ನೇಸರನು ಪಥ ಬದಲಿಸಲೊಂದು
ಅಕ್ಷಗಳ ಮಿಲನ ಕಾಲ
ದೇವರನು ಸೆಳೆಯಲೆಂದು
ಅಮೂರ್ತ ಭಕ್ತಿಯ ಕಾಲ ||
 
ಹುಗ್ಗಿಯಂಥ ಜೀವನಕ್ಕೆಂದು
ಪೊಂಗಲ್ ರಸದೌತಣದ ಕಾಲ
ಜೀವನದ ಪಥ ಹಿತವಾಗಲೆಂದು
ಆಶಿಸೋಣ ಸಮ್ಮಿಲನ ಸಂಕ್ರಾಂತಿಯ ಫಲ||
 
                                      ಚಲಪತಿ ವಿ  ಪಣಸಚೌಡನಹಳ್ಳಿ