ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ
ಚಿತ್ರ ಕೃಪೆ: ರಾಮಕೃಷ್ಣ ಮಠದ ಅಂತರ್ಜಾಲ ಪುಟಗಳಿಂದ ಡೌನ್-ಲೋಡ್ ಮಾಡಿದ್ದು.
ದೇವರನ್ನು ತ್ರಿಗುಣಗಳಿಗೆ ಅತೀತ - ತ್ರಿಗುಣಾತೀತನೆಂದು ನಾವು ಪೂಜಿಸುತ್ತೇವೆ. ಆ ಮೂರು ಗುಣಗಳೇ ಸತ್ವ, ರಜೋ ಮತ್ತು ತಮೋ ಗುಣಗಳು, ಇವೆಲ್ಲಕ್ಕೂ ಆತೀತನಾಗಿರುವವನೇ ಭಗವಂತ. ಸತ್ವ ಗುಣವನ್ನು ಹೇಳಬೇಕಾದರೆ ಅದನ್ನು ದೇವತೆಗಳಿಗೆ ಹೋಲಿಸುವುದುಂಟು, ಹಾಗೆಯೇ ರಜೋ ಗುಣದಿಂದ ಕೂಡಿದವರು ಮನುಷ್ಯರು ಮತ್ತು ತಮೋ ಗುಣಗಳಿಂದ ಕೂಡಿದವರು ರಾಕ್ಷಸರು ಎಂದು ಹೇಳುತ್ತಾರೆ. ಆದರೆ ರಾಮಕೃಷ್ಣ ಪರಮಹಂಸರು ಆ ಮೂರು ಗುಣಗಳ ಅರ್ಥವನ್ನು ಒಂದು ಸರಳವಾದ ಕಥೆಯ ಮೂಲಕ ತಿಳಿಸಿಕೊಡುತ್ತಾರೆ.
ಒಬ್ಬ ಮನುಷ್ಯ ಕಾಡಿನಲ್ಲಿ ಪ್ರಯಾಣ ಮಾಡುತ್ತಿದ್ದ, ಆಗ ಮೂವರು ದರೋಡೆಕೋರರು ಇವನ ಮೇಲೆ ದಾಳಿ ಇಟ್ಟು ಅವನನ್ನು ಹೊಡೆದು ಗಾಯಗೊಳಿಸುತ್ತಾರೆ. ಆಗ ಮೊದಲನೆಯವನು ಇವನ ಹತ್ತಿರವಿರುವುದನ್ನೆಲ್ಲಾ ಲೂಟಿ ಮಾಡಿ, ಸಾಕ್ಷಿ ಉಳಿಯದಂತೆ ಇವನನ್ನು ಸಾಯಿಸಿ ಬಿಡೋಣವೆಂದು ಹೇಳುತ್ತಾನೆ. ಆಗ ಎರಡನೆಯವನು, ಇವನನ್ನು ಮರಕ್ಕೆ ಕಟ್ಟಿಹಾಕಿ ಅವನು ತಪ್ಪಿಸಿಕೊಳ್ಳದಂತೆ ಮಾಡೋಣವೆಂದು ಹೇಳುತ್ತಾನೆ, ಅದರಂತೆ ಮೂವರೂ ಸೇರಿ ಅವನನ್ನು ಅಲ್ಲಾಡದಂತೆ ಆ ಮರಕ್ಕೆ ಕಟ್ಟಿ ಹೊರಟುಹೋಗುತ್ತಾರೆ. ಸ್ವಲ್ಪ ಹೊತ್ತಿನ ನಂತರ ಮೂರನೆಯ ವ್ಯಕ್ತಿ ಹಿಂತಿರುಗಿ ಬಂದು ಅವನನ್ನು ಆ ಬಂಧನದಿಂದ ಮುಕ್ತಿಗೊಳಿಸಿ, ಇನ್ನೊಮ್ಮೆ ಈ ದಾರಿಯಾಗಿ ಬರಬೇಡವೆಂದು ಹೇಳಿ, ಅವನ ಗಾಯಗಳಿಗೆ ಶುಶ್ರೂಷೆ ಮಾಡಿ, ಅವನಿಗೆ ಕಾಡಿನಿಂದ ಹೊರಗೆ ಹೋಗುವ ದಾರಿಯ ಹತ್ತಿರ ಬಿಟ್ಟು ಬರುತ್ತಾನೆ.
ಇಲ್ಲಿ ಮೊದಲನೆಯ ವ್ಯಕ್ತಿ ತಾಮಸ ಗುಣದವನು, ಅವನ ಹಿಡಿತಕ್ಕೆ ಸಿಕ್ಕಿದರೆ ನಮ್ಮಲ್ಲಿರುವುದನ್ನೆಲ್ಲಾ ಕಳೆದುಕೊಂಡು ನಾವು ಸರ್ವನಾಶವಾಗುತ್ತೇವೆ. ಎರಡನೆಯ ವ್ಯಕ್ತಿ ರಾಜಸ ಗುಣದವನು, ಅವನ ಹಿಡಿತಕ್ಕೆ ಸಿಕ್ಕರೆ ಅವನು ನಮ್ಮನ್ನು ಪ್ರಾಪಂಚಿಕತೆಗೆ ಕಟ್ಟಿ ಹಾಕುತ್ತಾನೆ. ಹಾಗೆಯೇ ಮೂರನೆಯ ವ್ಯಕ್ತಿ ಸಾತ್ವಿಕ ಗುಣದವನು, ಅವನು ನಮ್ಮನ್ನು ಪ್ರಾಪಂಚಿಕತೆಯಿಂದ ಮುಕ್ತಗೊಳಿಸುತ್ತಾನೆ ಮತ್ತು ದೇವರೆಡೆಗೆ ಹೋಗುವ ಸನ್ಮಾರ್ಗವನ್ನು ತೋರುತ್ತಾನೆ. ಸತ್ವ ಗುಣದಿಂದ ನಾವು ದೇವರನ್ನು ಕಾಣುವ ಹಾದಿಯಲ್ಲಿ ಸಾಗಬಹುದೇ ಹೊರತು ದೇವರ ಬಳಿಗಲ್ಲ. ಈ ಮೂರು ಗುಣಗಳಿಗೆ ಅತೀತನಾದವನು ದೇವರನ್ನು ಕಾಣಬಲ್ಲ ಎಂದು ಅವರು ಹೇಳುವ ನೀತಿ. ಸಾತ್ವಿಕನಾದವನಿಗೆ ತಾನು ಬಹಳ ಒಳ್ಳೆಯವನೆಂಬ ಅಹಂಭಾವವಿರಬಹುದಾದ್ದರಿಂದ ರಾಮಕೃಷ್ಣ ಪರಮಹಂಸರು, ಸಾತ್ವಿಕನಾದ ಮಾತ್ರಕ್ಕೆ ದೇವರನ್ನು ಕಾಣಲಾಗದೆಂದು ಸೂಚ್ಯವಾಗಿ ತಿಳಿಸಿಕೊಡುತ್ತಾರೆ.
ಇನ್ನೊಂದು ಪ್ರಸಂಗದಲ್ಲಿ ಸ್ವಾಮಿ ವಿವೇಕಾನಂದರು, ಪೂರ್ಣ ಸಾತ್ವಿಕ, ಅಥವಾ ಪೂರ್ಣ ರಾಜಸಿಕ ಅಥವಾ ತಾಮಸಿಕ ಗುಣದ ವ್ಯಕ್ತಿಗಳು ನಮಗೆ ಕಾಣಬರುವುದಿಲ್ಲ, ಎಲ್ಲಾ ಮನುಷ್ಯರೂ ಈ ಮೂರು ಗುಣಗಳ ಮಿಶ್ರಣವೆಂದು ಹೇಳುತ್ತಾರೆ. ಆದರೆ ನಾವು ಮನುಷ್ಯನನ್ನು ಸಾತ್ವಿಕ, ರಾಜಸಿಕ ಅಥವಾ ತಮೋ ಗುಣದವನೆಂದು ಗುರುತಿಸುವುದು ಅವನಲ್ಲಿ ಪ್ರಧಾನವಾಗಿರುವ ಲಕ್ಷಣಗಳಿಂದ ಎನ್ನುತ್ತಾರೆ.
Comments
ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ
In reply to ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ by sathishnasa
ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ
ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ
In reply to ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ by partha1059
ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ
ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ
In reply to ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ by kavinagaraj
ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ
ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ
In reply to ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ by srinima
ಉ: ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ