ಸಿನಿಮಾ ಯಾವುದಕ್ಕೆ ಸ್ಫೂರ್ತಿ?
ಹಿಂದೆ ಸಿನಿಮಾ ಎಂದರೆ ಮನೊರಂಜನೆ ಅಂತ ಅಂದ್ಕೊಂಡಿದ್ದೆ , ಇತ್ತೀಚೆಗೆ ಮನೊರಂಜನೆಗೆ ಬದ್ಲು ಮಾರಕವಾಗಿದೆ. ಹಿಂದಿನ ಸಿನಿಮಾಗಳಲ್ಲಿ ನೀತಿ, ಸಾತ್ವಿಕ ಪಾತ್ರಗಳು ,ಒಂಥರ ಚೆನ್ನಾಗಿರುತ್ತಿತ್ತು. ಹಿಂದೆ ಒಂದು ಸಿನಿಮ ಬಂತು, ಅದಾದ್ಮೇಲೆ ಕೆಲವು ಹುಡುಗರು ಆಸಿಡ್ಗಳನ್ನು ಹಾಕೋಕೆ ಸ್ಟಾರ್ಟ್ ಮಾಡಿದ್ರು, ತಮ್ಮ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ. ಇದು ಯಾಕೆ ಹೀಗೆ, ಹುಡುಗಿಯರಿಗೆ ಅವರಿಗೇ ಆದ ಒಂದು ಕಲ್ಪನೆ, ಆಸೆ, ಪ್ರತಿಯೊಂದು ಅಭಿಪ್ರಾಯ ಇರುತ್ತದೆ, ಅದಕ್ಕೋಸ್ಕರ ಆಸಿಡ್ ಹಾಕೋದು ಎಷ್ಟರ ಮಟ್ಟಿಗೆ ಸರಿ?
ಒಂದು ಸಿನಿಮದಲ್ಲಿ entrance examಗೆ lecturer ಹೋಗಿ ಬರೆಯೋದು, ಈ ಕಡೆ ಸ್ಟೂಡೆಂಟ್ ಆಟ ಆಡೋದು, ಎಕ್ಸಾಮ್ನಲ್ಲಿ ಮೋಬೈಲ್ ನಲ್ಲಿ ಉತ್ತರಗಳನ್ನು ಕೇಳೋದು ನಂತರ ಅವನಿಗೆ ಪ್ರಥಮ ಸ್ಥಾನ. ಇದೇ ರೀತಿ KPSE ಯಲ್ಲಿ ಒಂದು ಸ್ಟೂಡೆಂಟ್ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾಳೆ ಇಂತ ಸೀನ್ಸ್ ಇದ್ರೆ ಸೋಮಾರಿ ಸ್ಟೂಡೆಂಟ್ಸ್ಗೆ ಬಿಟ್ಟಿ ಐಡಿಯ ಹೊಳೆಯುತ್ತೆ. ಇದರಿಂದ ಎಶ್ಟೋ ಬುದ್ದಿವಂತ ಸ್ಟೂಡೆಂಟ್ಸ್ಗೆ ನಿರುತ್ಸಾಹ, ಬೇಜಾರು, ಜೊತೆಗೆ ಆಕ್ರೋಶ. ಇಂತ ಫಿಲ್ಮ್ಸ್ ಯಾಕೆ ತೆಗಿತಾರೆ? ನಮ್ಮ ಅಧಿಕಾರಿಗಳ ನಿರ್ಲಕ್ಶ್ಯ , ಬೇಜವಬ್ದಾರಿತನ ಇವೆಲ್ಲಾ ಇಲ್ಲದಿದ್ದರೆ ಮೊಬೈಲನ್ನು ಎಕ್ಸಾಮ್ ಹಾಲ್ ಗೆ ಬಿಡುತ್ತಿರಲ್ಲಿಲ್ಲ. "ಹಣ ಕೊಟ್ಟರೆ ಹೆಣ ಕೂಡ ಬಾಯಿ ಬಿಡುತ್ತೆ" ಅಂತ ಕೇಳಿದ್ದೆ, ಈಗ ಅದರ ಒಳ ಅರ್ಥ ಗೊತ್ತಾಗ್ತಿದೆ , ಹಣಕ್ಕೋಸ್ಕರ ಎಲ್ಲಾ ಕಾನೂನುಗಳನ್ನು ಕೂಡ ಮುರಿದುಹಾಕುತ್ತಾರೆ. ಇಂತ ವ್ಯವಸ್ಥೆ ಯಾವಾಗ ಹೋಗುತ್ತೊ? ಇಂಥದುಕ್ಕೆ ಯಾಕೆ ಎಕ್ಸಾಮ್ ನೆಡೆಸುತ್ತಾರೆ? ಇದೊಂದು ಉದಾಹರಣೆ ಅಷ್ಟೆ .
ಸಾಪ್ಟ್ ವೇರ್ ಇಂಜಿನೀಯರ್ಗಳು ಸ್ಪೀಡ್ ಸಿನಿಮಾದಿಂದ ಸ್ಪೂರ್ತಿ ಪಡೆದು ದರೋಡೆ ನೆಡೆಸಿದ್ದು , ಐಷರಾಮಿ ಜೀವನಕೋಸ್ಕರ. ವಿದ್ಯಾವಂತರೇ ಹೀಗೆ ಮಾಡಿದ್ರೆ ಹೇಗೆ? ಬೇಲಿಯೇ ಎದ್ದು ಹೊಲ ಮೇಯ್ದಂತಿದೆ, ಈ ರೀತಿಯಿಂದ ಬಂದ ಹಣದಿಂದ ಹೇಗೆ ತಾನೆ ಐಷರಾಮಿ ಜೀವನ ನೆಡೆಸುತ್ತಾರೆ?
ಸಿನಿಮಾದಲ್ಲಿರುವ ಒಳ್ಳೆಯ ನೀತಿಗಳನ್ನು, ಜೀವನದ ಮೌಲ್ಯಗಳನ್ನು, ದೇಶಪ್ರೇಮವನ್ನು ಬೆಳಸಿಕೊಳ್ಳೋದು, ಲಂಚದ ವಿರುದ್ದ ಹೋರಾಡೋದು, ಇವೆಲ್ಲವನ್ನು ರೂಢಿಸಿಕೊಂಡ್ರೆ ನಾವು ಒಳ್ಳೆ ಸಮಾಜವನ್ನು ನಿರ್ಮಾಣ ಮಾಡ್ಬಹುದು.