ಸ್ಟೇಟಸ್ ಕತೆಗಳು (ಭಾಗ ೧೦೭೧)- ಊಟ

ಸ್ಟೇಟಸ್ ಕತೆಗಳು (ಭಾಗ ೧೦೭೧)- ಊಟ

ನೀನು ಒಂದು ಕೆಲಸ ಮಾಡುವಾಗ ತುಂಬಾ ಬೇಜಾರಲ್ಲಿ ಇದ್ದರೆ, ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಬೇಡ. ಅದು ಹಾಳಾಗುತ್ತೆ." ಇಲ್ಲಪ್ಪ ಹಾಗೇನು ಆಗುವುದಿಲ್ಲ ನಾವು ಮನುಷ್ಯರು ಸಾಧಿಸಿದರೆ ಎಲ್ಲವನ್ನು ಮಾಡುವುದಕ್ಕೆ ಸಾಧ್ಯ ಇದೆ. ನಮ್ಮ ಮನಸ್ಸು ಅದಕ್ಕೆ ಸಹಕಾರವನ್ನು ನೀಡಬೇಕು." ಹೀಗೆ ಪ್ರತೀಸಲಾನು ಅವನಿಗೂ ಅವನಪ್ಪನಿಗೂ ವಾದ ಮುಂದುವರಿತಾನೆ ಇತ್ತು. 

ಅವತ್ತಿನ ದಿನ ಆತನಿಗೆ ಯಾವುದೋ ಒಂದು ಪರೀಕ್ಷೆ ಒಂದಷ್ಟು ದಿನಗಳ ತರಗತಿಯನ್ನು ಕೇಳಿ ಪರೀಕ್ಷೆಯನ್ನು ಬರೆಯಬೇಕು. ಕೊನೆಯ ಕ್ಷಣದಲ್ಲಿ ಆ ಪರೀಕ್ಷೆಯನ್ನು ಸರಿಯಾಗಿ ಬರೆಯುವುದಕ್ಕಾಗದೆ ಕೆಲವಾರು ಗಂಟೆಗಳ ಪಯಣವನ್ನ ಮಾಡಬೇಕಾದ ಅನಿವಾರ್ಯ ಸ್ಥಿತಿ.  ವ್ಯವಸ್ಥಾಪಕರಿಂದಲೂ   ಯಾವುದೇ ರೀತಿಯ ಪ್ರತಿಕ್ರಿಯೆ ಸಿಗಲೆ ಇಲ್ಲ. ಅದೇ ಸಂದರ್ಭದಲ್ಲಿ ತನ್ನ ಜೊತೆಗೆ ಬದುಕ್ತಾ ಇರುವವರಿಗೆ ಅನ್ನವನ್ನು ಮಾಡುವ ಜವಾಬ್ದಾರಿಯು ಅವನದಾಗಿತ್ತು. ಈ ಕೆಲಸದ ಒತ್ತಡದ ನಡುವೆ ಒಂದಷ್ಟು ಯೋಚನೆಗಳು ತುಂಬಿಕೊಂಡು ಆತ ಮಾಡಿದ ಅಂದಿನ ಪದಾರ್ಥ ಪೂರ್ತಿಯಾಗಿ ಹಾಳಾಗಿ ಹೋಗಿತ್ತು. ಒಂದಿನಿತೂ ತಿನ್ನುವ ಹಾಗೆ ಇರಲಿಲ್ಲ. ಅಪ್ಪ ಹೇಳಿದ ಮಾತು ಮತ್ತೊಮ್ಮೆ ಎಚ್ಚರಿಸಿತು. ಹೌದು, ತುಂಬಾ ಯೋಚನೆಯಲ್ಲಿದ್ದಾಗ ಯಾವುದೇ ಕೆಲಸವನ್ನು  ಮಾಡಬಾರದು. ಆತನಿಗೆ ಅರ್ಥವಾಗುವುದಕ್ಕೆ ಆತ ಮಾಡಿದ ಅಡುಗೆಯ ಎದುರು ನಿಲ್ಲಬೇಕಾಯಿತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ