ಸ್ಟೇಟಸ್ ಕತೆಗಳು (ಭಾಗ ೪೬೦) - ಬದುಕು

ಸ್ಟೇಟಸ್ ಕತೆಗಳು (ಭಾಗ ೪೬೦) - ಬದುಕು

ಎಲ್ಲೋ ನೆಲದೊಳಗೆ ಅಡಗಿದ್ದ ಮಣ್ಣಿಗೆ ಅರಿವಿರಲಿಲ್ಲ. ನನ್ನನ್ನು ಒಂದು ದಿನ ಪೂಜಿಸುತ್ತಾರೆ, ನನಗೂ ಒಂದು ಆಕಾರ ಕೊಟ್ಟು ಅದಕ್ಕೆ ಸಂಭ್ರಮಾಚರಣೆ, ಜೀವ ಪ್ರತಿಷ್ಠೆ, ಹೀಗೆಯೇ ಸಕಲವನ್ನೂ ನೀಡಿ ಅದನ್ನು ಪೂಜಿಸಿ ವಿಜೃಂಭಣೆಯ ಉತ್ಸವವನ್ನಾಗಿ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ಅದು ಮಣ್ಣಿನ ಒಳಗೆ ಗಟ್ಟಿಯಾಗಿ ತನ್ನ ರೂಪಗಳನ್ನು ಬದಲಿಸುತ್ತಾ ಬದುಕುತ್ತಿತ್ತು. ಹಾಗೆ ಬದುಕುತ್ತಿದ್ದಾಗ ಯಾರೋ ಒಬ್ಬ ಅಗೆದು ಅದನ್ನು ಸಂಸ್ಕರಿಸಿ ಅದಕ್ಕೊಂದು ಮೂರ್ತರೂಪ ನೀಡಿದ. ಅಲ್ಲಿ ಸೇರಿದ್ದ ಹಲವರು ಮಣ್ಣಿನ ಬದಲಾದ ರೂಪಕ್ಕೆ ಭಕ್ತಿಯಿಂದ ಕೈಮುಗಿದು ನಿವೇದನೆ ಮಾಡಿಕೊಂಡರು. ಇಲ್ಲಿ ಮಣ್ಣು ನೆಲದೊಳಗೆ ಒಂದಷ್ಟು ಸಮಯದವರೆಗೆ ತನ್ನನ್ನು ಹಿಡಿತದಲ್ಲಿಟ್ಟುಕೊಂಡು ಕಲ್ಮಶಗಳನ್ನು ಸೇರಿಸಿಕೊಳ್ಳದೇ ಬದುಕಿರುವ ಕಾರಣಕ್ಕೆ ಈ ರೂಪ ಸಿಕ್ಕಿದೆ. ಇಲ್ಲವಾದರೆ ಇಂದು ಖಾಲಿ ಆಗಿಬಿಡುತ್ತಿತ್ತು. ಬದುಕು ಹಾಗೆ ನಾವು ಕೆಲವೊಂದು ಸಲ ಕಾಯಬೇಕಾಗುತ್ತದೆ ಹಾಗಾದಾಗ ಮುಂದೊಂದು ದಿನ ದೊಡ್ಡ ಉಡುಗೊರೆ ನಮಗೆ ದೊರಕಿ ಬಿಡಬಹುದು ....ಬದುಕಲು ಪ್ರೇರೇಪಿಸಬಹುದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ