ಸ್ಟೇಟಸ್ ಕತೆಗಳು (ಭಾಗ ೬೩೨) - ಸಮಯ

ಸ್ಟೇಟಸ್ ಕತೆಗಳು (ಭಾಗ ೬೩೨) - ಸಮಯ

ಕಾರ್ಯಕ್ರಮ ನಿಗದಿಯಾಗಿತ್ತು ಹೋಗುವುದು ನಿಶ್ಚಯವಾಗಿತ್ತು ಅಲ್ಲಿ ನನ್ನ ದೇವರ ಮುಂದೆ ಭಕ್ತಿಯಿಂದ ಹಾಡುವ ಕಾರ್ಯಕ್ರಮ ನಾನದನ್ನ ನೋಡುವುದೇ ಭಾಗ್ಯ. ನನಗೆ ತೀರ್ಪುಗಾರರಾಗಿ ಆಹ್ವಾನ. ಹಿಂದಿನ ದಿನವೇ ತಿಳಿಸಿದ ಕಾರಣ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ತಯಾರು ಮಾಡಿಟ್ಟುಕೊಂಡಿದ್ದೆ. ಯಾಕೆಂದರೆ ನನಗೆ ಆ  ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕಿತ್ತು ಕಾರ್ಯಕ್ರಮ ಆರಂಭವಾಗುವುದಕ್ಕೆ ಇನ್ನೇನು ಕೆಲವೇ ಗಂಟೆಗೆ ಇದೆ ಗಂಟೆಗೆ ಇದೆ ಅನ್ನುವಾಗ ಮೊದಲು ಒಪ್ಪಿಕೊಂಡಿದ್ದ ಕಾರ್ಯಕ್ರಮ ತಡವಾಗುವುದಕ್ಕೆ ಆರಂಭವಾಯಿತು. ಸ್ಪರ್ಧೆ ಆರಂಭವಾಗಿ ಹೋಗಿತ್ತು. ಸ್ಪರ್ಧಾ ಕಾರ್ಯಕ್ರಮದ ಬಳಿ ತಲುಪಿದಾಗ ಸ್ಪರ್ಧೆ ಮುಗಿದು ಜನ ಹೊರಟು ಹೋಗುತ್ತಿದ್ದರು. ಬಂದವರಲ್ಲಿ ಕಾರ್ಯಕ್ರಮ ಹೇಗಿದೆ ಅಂತ ಕೇಳಿದಾಗ ಪ್ರತಿಯೊಬ್ಬರು ಆ ಕಾರ್ಯಕ್ರಮದ ಅದ್ಭುತ ರಸ ಸನ್ನಿವೇಶಗಳನ್ನು ವರ್ಣಿಸಿದ್ದೆ ವರ್ಣಿಸಿದ್ದು. ನಾನದನ್ನ ತಪ್ಪಿಸಿಕೊಂಡೆನಲ್ಲಾ ಎನ್ನುವಂತಹ ಯೋಚನೆ ಮನಸ್ಸಿನ ಒಳಗೆ ಕಾಡೋದಕ್ಕೆ ಪ್ರಾರಂಭವಾಯಿತು. ನಾನು ಯಾವ ಕಾರ್ಯಕ್ರಮಗಳನ್ನೆಲ್ಲಾ ಒಪ್ಪಿಕೊಳ್ಳುತ್ತೇನೋ ಅಂತಹ ಅದ್ಭುತವಾದ ಮನಸ್ಸಿಗೆ ಇಷ್ಟವಾದ ಕಾರ್ಯಕ್ರಮಗಳು ನನ್ನ ಕೈ ಹಿಡಿಯುತ್ತಿಲ್ಲ. ಪ್ರತಿಯೊಂದು ಕೈ ತಪ್ಪಿ ಹೋಗ್ತಾನೆ ಇದೆ. ಯಾಕೆ ಹೀಗಾಗ್ತಿದೆ? ತಪ್ಪು ನನ್ನಲ್ಲಿದೆಯೋ? ಅಥವಾ ವಿಧಿಯೇ ಅಂಥಹ ಕಾರ್ಯಕ್ರಮಗಳನ್ನು ನೋಡುವುದಕ್ಕೆ ಬಯಸಿಲ್ವೋ ಗೊತ್ತಾಗ್ತಾ ಇಲ್ಲ. ನಾನೊಂದು ಅದ್ಭುತಾವಕಾಶವನ್ನು ಇವತ್ತು ಕಳೆದುಕೊಂಡೆ ಮತ್ತೆ ಕಾಯುತ್ತೇನೆ ಮುಂದಿನ ಹೊಸ ಅವಕಾಶಕ್ಕಾಗಿ.... ಕೆಲವೊಂದು ಸಲ ಸಮಯವೇ ನಮ್ಮೊಂದಿಗೆ ಸಹಕರಿಸುವುದಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ