ಸ್ಟೇಟಸ್ ಕತೆಗಳು (ಭಾಗ ೬೬೮) - ಒಳಗಿನವರು
ನಮ್ಮ ಒಳಗೆ ಒಂದಷ್ಟು ಜನ ಕಾಯ್ತಾ ಇರ್ತಾರೆ. ಅವರಿಗೆ ಅವರನ್ನು ತೆರೆದುಕೊಳ್ಳುವುದಕ್ಕೆ, ಪ್ರದರ್ಶನಕ್ಕಿಡುವುದಕ್ಕೆ ಅಭಿವ್ಯಕ್ತ ಪಡಿಸುವುದಕ್ಕೆ ವೇದಿಕೆ ಬೇಕಾಗುತ್ತದೆ .ಅವರಿಗೆ ವೇದಿಕೆಗಳನ್ನ ಸೃಷ್ಟಿಸಿಕೊಳ್ಳಲು ಗೊತ್ತಿಲ್ಲ. ನಾವು ವೇದಿಕೆಗಳನ್ನ ಸೃಷ್ಟಿಸಿಕೊಂಡಾಗ ಅವರು ಅಲ್ಲಿ ಬಂದು ಪ್ರದರ್ಶನವನ್ನು ನೀಡಿ ಪ್ರಯತ್ನವನ್ನು ಕೊಟ್ಟು ನಾವು ಆ ವೇದಿಕೆಗೆ ಒಪ್ಪುತ್ತೇವಾ ಎಂದು ನಿರ್ಧರಿಸುತ್ತಾರೆ .ಮತ್ತೆ ಅದೇ ಕೆಲಸವನ್ನು ಮುಂದುವರಿಸುತ್ತಾರೆ. ಹಾಗಾಗಿ ನಮ್ಮೊಳಗೆ ವೇದಿಕೆಗಳಿಗೋಸ್ಕರ ಕಾಯುತ್ತಿರುವ ಪುಟ್ಟ ಜೀವಗಳು ಜವಾಬ್ದಾರಿಯನ್ನು ನಿರ್ವಹಿಸಲು ಕಾಯುತ್ತಿರುತ್ತಾರೆ. ಕೆಲವೊಂದು ಕೆಲವೊಂದು ಸಲ ವೇದಿಕೆಗಳನ್ನ ಸೃಷ್ಟಿಸುವುದು ಅಗತ್ಯವಿಲ್ಲ ಅನ್ನಿಸಿದರು, ಸೃಷ್ಟಿಸಿ ಕೊಟ್ಟ ಮೇಲೆ ಅವರು ಅದ್ಭುತವಾದುದ್ದನ್ನ ಸಾಧಿಸುತ್ತಾರೆ. ನಮ್ಮ ಕೆಲಸ ವೇದಿಕೆಗಳನ್ನು ಹುಡುಕುವುದು ಅಥವಾ ಸೃಷ್ಟಿಸುವುದು.. ಹೀಗೆ ಮಾಡಿದರೆ ಬದುಕಿಗೆ ಬಣ್ಣ ತುಂಬಿಕೊಳ್ಳುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ