ಸ್ಟೇಟಸ್ ಕತೆಗಳು (ಭಾಗ ೭೭೩) - ಸುದ್ದಿ

ಸ್ಟೇಟಸ್ ಕತೆಗಳು (ಭಾಗ ೭೭೩) - ಸುದ್ದಿ

ಸುದ್ದಿಗಳನ್ನು ಅಲ್ಲಲ್ಲಿ ಚೆಲ್ಲಬೇಡಿ. ಅದನ್ನ ನಿಮ್ಮೊಳಗೆ ಇಟ್ಟುಕೊಂಡು ಹಾಗೆ ಹೊರಟು ಹೋಗಿಬಿಡಿ. ದಾರಿಯಲ್ಲಿ ಚೆಲ್ಲಿದ ಸುದ್ದಿಗಳನ್ನು ಯಾರು ಹೆಕ್ಕಿ ಇನ್ಯಾರಿಗೆ ಹಂಚುತ್ತಾರೋ ಗೊತ್ತಿಲ್ಲ. ಅದಕ್ಕೆ ಇನ್ನೊಂದಷ್ಟು ಹೊಸ ರೂಪವನ್ನು ನೀಡಿ ಸುದ್ದಿಯನ್ನು ದೊಡ್ಡ ಸದ್ದಾಗುವಂತೆ ಮಾಡುತ್ತಾರೋ ಗೊತ್ತಿಲ್ಲ? ಹಾಗಾಗಿ ಸುದ್ದಿಯನ್ನು ಅಲ್ಲಲ್ಲಿ ಚೆಲ್ಲಬೇಡಿ. ಕೆಲವೊಂದು ಸಲ ಸುದ್ದಿ ನಮ್ಮಿಂದ ಗೊತ್ತಿಲ್ಲದೆ ಚೆಲ್ಲಿ ಹೋಗಿರುತ್ತದೆ. ಯಾರಾದರೂ ಸಿಕ್ಕಿದಾಗ ಅದನ್ನು ಅನಗತ್ಯವಾಗಿ ಒಬ್ಬರಿಂದ ಒಬ್ಬರಿಗೆ ದಾಟಿಸುತ್ತಾ ಹೋಗುವುದ್ದಕ್ಕಿಂತಾ ಕಳೆದುಕೊಂಡವರಿಗೆ ತಲುಪಿಸುವುದು ಒಳಿತು ಅನ್ನೋದು ನನ್ನ ಭಾವನೆ. ಹಾಗಾಗಿ ಪ್ರತಿದಿನದ ದಾರಿಯಲ್ಲಿ  ಸಿಗುವ ಒಂದಷ್ಟು ಸುದ್ದಿಗಳು ನಮ್ಮ ದಾರಿಯನ್ನು ಬದಲಾಯಿಸುತ್ತದೆ,ಒಂದಷ್ಟು ದಾರಿಗಳು ಹೊಸ ದಾರಿಯನ್ನ ಕಂಡುಕೊಳ್ಳುತ್ತವೆ. ಅಂತಂದಾಗ ಸುದ್ದಿಯನ್ನು ಸದ್ದು ಮಾಡಿದ್ದೇನೆ. ನಿಮಗೂ ಹಾಗೆ ಹೋಗೋ ದಾರಿಯಲ್ಲಿ ಸುದ್ದಿಗಳು ಸಿಗುತ್ತಾನೆ ಹೋಗಬಹುದು. ಅಗತ್ಯವಿದ್ದರೆ ಹೆಕ್ಕಿ ಮುಂದುವರೆಯಿರಿ, ಇಲ್ಲವಾದರೆ ಹಾಗೆ ಬದಿಗೆ ಸರಿಸಿ ಬಿಡಿ. ಯಾರಿಗೂ ಅಡ್ಡ ಸಿಕ್ಕಿ ದಾರಿ ಕಷ್ಟವಾಗುವುದು ಬೇಡ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ