ಸ್ಥಿತಿ

ಸ್ಥಿತಿ

ಕವನ

 ಹರಿಯುವ ನದಿ

ಜಂಗಮವಾಯ್ತು

ನಿಂತ ಕಡಲು

ಸ್ಥಾವರವಾಯ್ತು!

 

ಬೀಸಿದ ಗಾಳಿ

ಜಂಗಮವಾಯ್ತು

ಅಲುಗದ ಹೆಬ್ಬಂಡೆ

ಸ್ಥಾವರವಾಯ್ತು!

 

ನೀನೆಂಬ ತನುವಿನೊಳಗಣ ಪ್ರಾಣ

ಜಂಗಮವಾಗಿ

ನಾ ಪಡೆದ ನಶ್ವರ ದೇಹ

ಮಣ್ಣು ಸೇರಿ ಸಮಾದಿ ರೂಪದಿ

 ಸ್ಥಾವರವಾಯ್ತು!

Comments