ಸ್ನೇಹ
ಸ್ನೇಹವೆಂಬುದು ಪವಿತ್ರವಾದ ಸಂಭಂದ. ಸ್ನೇಹ ರಕ್ತ ಸಂಭಂದಗಳಂತೆ ಶಾಶ್ವತವಾದುದು.
ಸ್ನೇಹ ಅನ್ನೋದು ಒಂದು ಪವಿತ್ರ ಬಾಂಧವ್ಯ. ಆದರೆ ಕೆಲವರು ಅದೇ ಪ್ರೇಮಕ್ಕೆ ನಾಂದಿ ಅನ್ನೋದು ಎಷ್ಟು ಸೂಕ್ತ?? ಸ್ನೇಹನೆ ಮುಂದೆ ಪ್ರೇಮವಾದರೆ ಅಲ್ಲಿ ಪ್ರೇಮ ಒಂದೇ ಇರುತ್ತೆ ಹೊರತು ಸ್ನೇಹ ಅಲ್ಲ ಅಂದಮೇಲೆ ಅಲ್ಲಿಗೆ ಸ್ನೇಹದ ಕೊಲೆ ಆದಂತೆ ಅಲ್ವಾ? ನಿಜ ಪ್ರೆಮದಲ್ಲೂ ಸ್ನೇಹ ಇರುತ್ತೆ ಅದ್ರೆ ಅದ್ನ ಪ್ರೇಮ ಅನ್ನುತ್ತಾರೆಯೋ ಹೊರತು ಸ್ನೇಹ ಅಂತಲ್ಲ. ಅದಕ್ಕೆ ನನ್ನ ವಾದ ಏನೆಂದರೆ ಸ್ನೇಹನೇ ಬೇರೆ ಪ್ರೆಮನೇ ಬೇರೆ. ಪ್ರೇಮದಲ್ಲಿ ಸ್ನೇಹ ಇರಲೇಬೇಕು ಅದ್ರೆ ಸ್ನೇಹದಲ್ಲಿ ಪ್ರೇಮ ಬರಬಾರದು ಅದು ಸ್ನೇಹದ ಕೊಲೇನೆ ಅಂತ ಅನ್ಸೋಲ್ವಾ? ಇದನ್ಯಾಕಪ್ಪ ಹೇಳ್ತಿದಾನೆ ಅನ್ಕೊಬೇಡಿ ಯೋಚಿಸಿ ನೋಡಿ, ನಾವು ಎಷ್ಟರ ಮಟ್ಟಿಗೆ ಸ್ನೇಹದ ನಿಜವಾದ ರೂಪವನ್ನು ತಿಳಿದಿದ್ದೇವೆ ಅನ್ನೋದನ್ನು ಪರಿಶಿಲಿಸಲೇಬೇಕು. ಯಾಕೇ ಅಂತಿರಾ?, ಈಗಿನ ಸಮಾಜದಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತಿದೆ. ಒಬ್ಬ ಹುಡುಗ, ಹುಡುಗಿ ಸ್ನೇಹಿತರು ಅಗಲಾರರ? ಅವರು ಒಳ್ಳೆ ಸ್ನೇಹಿತರಾಗಿದ್ದಾಗ್ಯು ಅವರ ನಡುವೆ ಪ್ರೇಮದ ಕಥೆ ಕಟ್ಟಿ ಮಾತನಾಡಿಕೊಳ್ಳೋದು ಪಾಪತಾನೆ. ಇಂತಹ ಪರಿಸ್ಥಿತಿ ಬಂದಿರೋಕೆ ಕಾರಣಗಳೇನು? ಸ್ನೇಹದ ಅರ್ಥ ತಿಲಿದಿರದೆ ಇರೋದು ಮತ್ತು ಇಂದಿನ ಸಿನಿಮಾಗಳು ಅಂದ್ರು ತಪ್ಪಾಗಲಾರದು. ಸ್ನೇಹ ಎಂದಿದ್ರು ಸ್ನೇಹನೇ... ಸ್ನೇಹಕ್ಕೆ ಬದಲಾಗೋ ಗುಣ ಇಲ್ಲ. ಈ ಬಗ್ಗೆ ನಮ್ಮ ಅಬಿಪ್ರಾಯಗಳನ್ನು ಹಂಚಿಕೊಳ್ಳೋಕೆ ನನ್ನ ಪ್ರಯತ್ನ ಇದು. ನೀವು ನಿಮ್ಮ ಅಬಿಪ್ರಾಯಗಳನ್ನು ಹಂಚಿಕೊಳ್ಳಿ.