Skip to main content
ಕವನ
ಮರೆಯಲಾರೆನು ಆ ಸವಿ ದಿನಗಳು
ನೆನಪನ್ನು ಕಾಡುವ ಆ ಹಳೆ ದಿನಗಳು
ಶಾಲೆಯಲ್ಲಿದ್ದ ಆ ಗೆಳತಿಯರು
ನಗು ನಗುತಾ ಕಳೆದ ಆ ಸವಿದಿನಗಳು
ಆಡುವಾಗ ಕಾಲು ಜಾರಿ ಬಿದ್ದು
ನೋವಾದರೂ ನಗುತ ಏಳಿದ್ದೆ
ಪಾಠ ಕಲಿಯುವಾಗ ನಿದ್ದೆ ಬಂದು
ತೂಕಡಿಸಿ ಗೋಡೆ ಬಡಿದು ಕೊಂಡಿದ್ದೆ
ಬುಧವಾರ ಬಣ್ಣದ ಬಟ್ಟೆಯೆಂದು
ಬಣ್ಣ ಹಚ್ಚಿಕೊಂಡು ನಟಿಯಾಗಿ ಹೋಗಿದ್ದೆ
ಬಿಳಿ ರಿಬ್ಬನ್ನು ಹಾಕಬೇಕೆಂದಾಗ
ಬಾಯ್ ಕಟ್ ಮಾಡಿಸಿಕೊಂಡು ಬಂದಿದ್ದೆ
ಹುಡುಗರೆಂದರೆ ಶತ್ರು ತಿಳಿದರು
ಹಬ್ಬದಲ್ಲಿ ಮಿತ್ರರೆಂದು ಶಾಲೆ ತೊಳಿಸಿಕೊಂಡಿದ್ದೆ
ಲೇಟಾಗಿ ಎದ್ದು ಶಾಲೆಗೇ ಹೋದರೆ
ಬಸ್ಸು ಇರಲಿಲ್ಲವೆಂದು ಕಾರಣ ಹೇಳಿದ್ದೆ
ಎಲ್ಲರಿಗೂ ನನ್ನ ಕೆನ್ನೆ ಇಷ್ಟವೆಂದು
ಬೆಣ್ಣೆ ಹಚ್ಚಿ ಮಾಲಿಸು ಮಾಡಿದ್ದೆ
ಶಿಕ್ಷಕಿಯರ ಗೆಳೆತನ ಬೆಳೆಸಿ
ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ್ದೆ
ಶಾಲೆಗೆ ಹೋಗಲು ಬೇಡೆದಾಗ
ಜ್ವರದ ನೆಪ ಮಾಡಿ ಮನೆಯಲ್ಲಿ ಉಳಿಸಿದ್ದೆ
ಬಿಳ್ಕೊಡುಗೆ ಸಮಾರಂಭದಲ್ಲಿ ಸುಮ್ಮನೆ
ಅಳಬೇಕಾದರೂ ಬಹಳ ಕಷ್ಟ ಪಟ್ಟಿದೆ
ಹೀಗೆ ಶಾಲೆಯಲ್ಲಿ ಕಳೆದ ದಿನಗಳು ಬಹಳ ಸವಿನೆನಪು ನೀಡಿದೆ