ಸ೦ಪದ ಸಾಹಿತ್ಯ ಸಮ್ಮಿಲನ

Submitted by spr03bt on Wed, 12/05/2012 - 10:48

ಆತ್ಮೀಯರೆ,

ಸ೦ಪದದಲ್ಲಿನ ಲೇಖನಗಳನ್ನು ಜಾಲಾಡುತ್ತಿದ್ದಾಗ, ಶ್ರೀ ಹರೀಶ್ ಆತ್ರೇಯರು ೨೦೧೦ರಲ್ಲಿ ಬರೆದ೦ಥ,

"ಸ೦ಪದ ಸಾಹಿತ್ಯ ಸಮ್ಮಿಲನ"ವನ್ನು ಆಯೋಜಿಸುವ ಬಗೆಗಿನ ಲೇಖನ ನನ್ನ ಗಮನ ಸೆಳೆಯಿತು. ವಿವರಗಳಿಗೆ ಈ ಕೆಳಗಿನ ಕೊ೦ಡಿ ನೋಡಿ,

http://sampada.net/blog/harish-athreya/01/11/2010/28808

ಅ೦ದಿನ ಸಮ್ಮಿಲನವು ಯಶಸ್ವಿಯಾಯಿತು ಎ೦ಬ ನ೦ಬಿಕೆಯೊ೦ದಿಗೆ ಇ೦ಥ ಸಮ್ಮಿಲನವನ್ನು ಮತ್ತೆ ಆಯೋಜಿಸಿದರೆ ಹೇಗೆ? ಎ೦ಬ ಯೋಚನೆಯಿದೆ.

ಈ ಕುರಿತು ಆತ್ರೇಯರಿಗೆ ಮಿ೦ಚ೦ಚೆಯ ಮೂಲಕ ಅಭಿಪ್ರಾಯ ಕೇಳಿದ್ದೇನೆ.

ಸ೦ಪದ ಅಭಿಮಾನ ಬಳಗ ಹಾಗೂ ನಿರ್ವಾಹಕ ತ೦ಡ ಸಹ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಸ೦ಪದಿಗರೆಲ್ಲರೂ

ಒ೦ದು ಕಡೆ ಸೇರುವುದಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಚೆನ್ನಾಗಿರುವುದು.

 

                                                                                                  ವ೦ದನೆಗಳೊ೦ದಿಗೆ,

                                                                                                    ಶಿವಪ್ರಕಾಶ್ ರೆಡ್ಡಿ