ಸ೦ಪದ ಸಾಹಿತ್ಯ ಸಮ್ಮಿಲನ

ಸ೦ಪದ ಸಾಹಿತ್ಯ ಸಮ್ಮಿಲನ

ಆತ್ಮೀಯರೆ,

ಸ೦ಪದದಲ್ಲಿನ ಲೇಖನಗಳನ್ನು ಜಾಲಾಡುತ್ತಿದ್ದಾಗ, ಶ್ರೀ ಹರೀಶ್ ಆತ್ರೇಯರು ೨೦೧೦ರಲ್ಲಿ ಬರೆದ೦ಥ,

"ಸ೦ಪದ ಸಾಹಿತ್ಯ ಸಮ್ಮಿಲನ"ವನ್ನು ಆಯೋಜಿಸುವ ಬಗೆಗಿನ ಲೇಖನ ನನ್ನ ಗಮನ ಸೆಳೆಯಿತು. ವಿವರಗಳಿಗೆ ಈ ಕೆಳಗಿನ ಕೊ೦ಡಿ ನೋಡಿ,

http://sampada.net/blog/harish-athreya/01/11/2010/28808

ಅ೦ದಿನ ಸಮ್ಮಿಲನವು ಯಶಸ್ವಿಯಾಯಿತು ಎ೦ಬ ನ೦ಬಿಕೆಯೊ೦ದಿಗೆ ಇ೦ಥ ಸಮ್ಮಿಲನವನ್ನು ಮತ್ತೆ ಆಯೋಜಿಸಿದರೆ ಹೇಗೆ? ಎ೦ಬ ಯೋಚನೆಯಿದೆ.

ಈ ಕುರಿತು ಆತ್ರೇಯರಿಗೆ ಮಿ೦ಚ೦ಚೆಯ ಮೂಲಕ ಅಭಿಪ್ರಾಯ ಕೇಳಿದ್ದೇನೆ.

ಸ೦ಪದ ಅಭಿಮಾನ ಬಳಗ ಹಾಗೂ ನಿರ್ವಾಹಕ ತ೦ಡ ಸಹ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಸ೦ಪದಿಗರೆಲ್ಲರೂ

ಒ೦ದು ಕಡೆ ಸೇರುವುದಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಚೆನ್ನಾಗಿರುವುದು.

 

                                                                                                  ವ೦ದನೆಗಳೊ೦ದಿಗೆ,

                                                                                                    ಶಿವಪ್ರಕಾಶ್ ರೆಡ್ಡಿ

Comments

Submitted by venkatb83 Wed, 12/05/2012 - 15:11

http://sampada.net/… ಆ ಮೇಲಿನ ಲಿಂಕ್ ನ ಬರಹವನ್ನ್ ನಾ ನೋಡಿರಲಿಲ್ಲ. ನಿಮ್ಮ (ಶಿವೂ) ಈ ಬರವಣಿಗೆಯ ಕಾರಣವಾಗಿ ನನಗೆ ಓದಲು ಸಿಕ್ಕಿತು... ದೈನಂದಿನ ಗಡಿಬಿಡಿಯಲ್ಲಿ ಅಥವಾ ಬರಹಗಳ ಮಧ್ಯದಲ್ಲಿ ಆ ದಿನ ಇದನ್ನು ಯಾರೂ ಸರಿಯಾಗಿ ಗಮನಿಸಲಿಲ್ಲವೇನೋ?.. ಒಂದು ಒಳ್ಳೆ ಪ್ರಯತ್ನಕ್ಕೆ ಬೆಂಬಲ ಸಿಗದಿದ್ದುದುದಕ್ಕೆ ನನಗೂ ಬೇಜಾರಿದೆ ..., ಆದರೆ ಈಗ ಶಿವಪ್ರಕಾಶ್ ಅವರ ಕಾರಣವಾಗಿ ನಾ ನೋಡಿದೆ ಓದಿದೆ ಪ್ರತಿಕ್ರಿಯಿಸುತ್ತಿರುವೆ... ಎಲ್ಲದಕ್ಕೂ ಕಾಲ ಕೂಡಿಬರಬೇಕು ಅಂತ ಅದ್ಕೆ ಹೇಳ್ತಾರೇನೋ....!! ಈಗ ಸಮಯ ಪಕ್ವವಾಗಿದೆ. ಸಂಪದ ಹಲವು ಸಕ್ರಿಯ ಬರಹಗಾರರಿಂದ ತುಂಬಿ ತುಳುಕುತ್ತಿದೆ. ಇದೆ ಸುಸಮಯ ಈ ಸಂಪದ ಸಮ್ಮಿಲನಕ್ಕೆ.. ನಾ ಅಂತೂ ರೆಡಿ....ಎಲ್ರೂ ಒಂದು ದಿನ ಸಮಯ ಸೂಚಿಸಿ... ಶುಭವಾಗಲಿ.. \|
Submitted by spr03bt Wed, 12/05/2012 - 18:28

In reply to by venkatb83

ಧನ್ಯನಾದೆ ಸಪ್ತಗಿರಿವಾಸಿಯವರೆ, ನಿಮ್ಮ ಪ್ರತಿಕ್ರಿಯೆ ನೋಡಿ ಬಹಳ ಸ೦ತೋಷವಾಯಿತು. ಯಾರು ಪ್ರತಿಕ್ರಿಯಿಸದ್ದನ್ನು ಕ೦ಡು ನನಗು ನಿರಾಶೆಯಾಗಿತ್ತು. ಅದಕ್ಕೆ ಮಧ್ಯಾಹ್ನದಿ೦ದ ಸ೦ಪದಕ್ಕೆ ಬರಲೇ ಇಲ್ಲ. ಈಗ ಮೊದಲ ಮಳೆ ರೈತನಿಗೆ ಉ೦ಟುಮಾಡುವ ಆನ೦ದ ನನಗೆ ನಿಮ್ಮ ಪ್ರತಿಕ್ರಿಯೆ ತ೦ದಿದೆ. ಎಲ್ಲರಿಗೂ ಬಿಡುವಿರುವ೦ತೆ ಭಾನುವಾರ ಅಥವಾ ಶನಿವಾರ ನಾವು ಈ ಕಾರ್ಯಕ್ರಮ ಆಯೋಜಿಸಬಹುದು. ಸ೦ಪದದಲ್ಲಿ ನಿಮಗೆ ಆತ್ಮೀಯರಾಗಿರುವವರ ಗಮನಕ್ಕೆ ಈ ಪ್ರಯತ್ನದ ಬಗ್ಗೆ ತಿಳಿಸಿ. ನಾನು ನನ್ನ ಕೆಲವು ಗೆಳಯರೊ೦ದಿಗೆ ಮಾತಾಡಿದ್ದೇನೆ. ಅವರು ತು೦ಬಾ ಉತ್ಸಾಹ ತೋರಿದ್ದಾರೆ. ನಮೋ ವೆ೦ಕಟೇಶ :)
Submitted by Harish Athreya Thu, 12/06/2012 - 08:28

In reply to by spr03bt

ಆತ್ಮೀಯ ಶಿವಪ್ರಕಾಶರೇ ಸ೦ಪದ ಸಾಹಿತ್ಯ ಸಮ್ಮಿಲನದ ಬಗ್ಗೆ ನೇರವಾಗಿ ನಿರ್ವಾಹಕರಿಗೆ ಒ೦ದು ಮೈಲ್ ಕಳುಹಿಸಿ. ಅವರ ಅಭಿಪ್ರಾಯವನ್ನು ಕೇಳಿದ ನ೦ತರ ಸ೦ಪದದಲ್ಲಿ ಪ್ರಕಟಿಸಿ. ಮುಖ್ಯ ನಿರ್ವಾಹಕರ ಗಮನಕ್ಕೆ ನೇರವಾಗಿ ತ೦ದು ನ೦ತರ ಎಲ್ಲಾ ಸ೦ಪದಿಗರ ಗಮನಕ್ಕೆ ಬರಲಿ. ಸ೦ಪದ ಸಾಹಿತ್ಯ ಮಿಲನದ ನೀವು ಹಾಕಿಕೊ೦ಡಿರುವ ರೂಪು ರೇಷೆಗಳ ಬಗ್ಗೆ ಮತ್ತು ಆಯೋಜನೆಯ ಬಗ್ಗೆ ವಿವರವಾಗಿ ಬರೆದು ಅವರಿಗೆ ಕಳುಹಿಸಿ ನಿರ್ಧಾರ ಸ೦ಪೂರ್ಣ ಅವರದಾಗಿರಲಿ. ಹರೀಶ್ ಆತ್ರೇಯ
Submitted by spr03bt Thu, 12/06/2012 - 10:14

In reply to by Harish Athreya

ಆತ್ರೇಯರೆ, ಸಲಹೆಗೆ ವ೦ದನೆಗಳು. ಹರಿಪ್ರಸಾದ್ ನಾಡಿಗರ ಇ-ಮೇಲ್ ವಿಳಾಸ ಸಿಗಲಿಲ್ಲ. ಆದ್ದರಿ೦ದ ಅವರ ಬ್ಲಾಗ್ ಮೂಲಕ ಸ೦ದೇಶ ಕಳುಹಿಸಿರುವೆ. ಅವರಿಗೆ ಅದು ತಲುಪಿತೋ ಇಲ್ಲವೋ ಗೊತ್ತಿಲ್ಲ. ನಿಮಗೆ ಅವರ ಮೇಲ್ ಐಡಿ ಗೊತ್ತಿದ್ದರೆ ದಯವಿಟ್ಟು ತಿಳಿಸಿ. ಸ೦ಪದದಲ್ಲಿರುವ, "ನಮ್ಮ ಬ್ಯಾಕೆ೦ಡ್ ಟೀಮಿನ ಗಮನಕ್ಕೆ ತರುವಲ್ಲಿ ಸಹಕರಿಸಿ" ಕೊ೦ಡಿ ಸಹ ಕೆಲಸ ಮಾಡುತ್ತಿಲ್ಲ. ಏನಾದರು ಅನ್ಯ ಮಾರ್ಗ ಇದ್ದರೆ ತಿಳಿಸಿ. ಶಿವಪ್ರಕಾಶ್
Submitted by hpn Thu, 12/06/2012 - 11:26

In reply to by spr03bt

ಶಿವಪ್ರಕಾಶ್, ನಿಮ್ಮ ಇ-ಮೇಯ್ಲ್ ನನಗೆ ತಲುಪಿದೆ. ಬಿಡುವಿಲ್ಲದಷ್ಟು ಕೆಲಸಗಳ ನಡುವೆ ಹಲವು ಬಾರಿ ಕೂಡಲೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಈ ತಿಂಗಳಲ್ಲೇ ಸಂಪದ ಸಮ್ಮಿಲನ ಹಮ್ಮಿಕೊಳ್ಳಬಹುದು. ದಿನಾಂಕ ಒಂದು ನಿಗದಿಪಡಿಸಿಕೊಳ್ಳಿ. ಸಾಮಾನ್ಯವಾಗಿ ಶನಿವಾರ ಅಥವ ಭಾನುವಾರ ಇಟ್ಟುಕೊಂಡರೆ ಉತ್ತಮ. ನಿಗದಿಪಡಿಸಿದ ದಿನದಂದು ಸಮ್ಮಿಲನಕ್ಕೆ ಸಾರಂಗದ ಆಫೀಸು ಬಳಸಿಕೊಳ್ಳಲು ಅನುಮತಿ ಪಡೆದುಕೊಳ್ಳಬಲ್ಲೆ.
Submitted by spr03bt Thu, 12/06/2012 - 11:38

In reply to by hpn

ನಾಡಿಗರೆ ನಮಸ್ಕಾರಗಳು, ನಿಮ್ಮ ಪ್ರತಿಕ್ರಿಯೆ ಕ೦ಡು ತು೦ಬಾ ಖುಷಿಯಾಗಿದೆ. ಸ್ವಲ್ಪ ತಯಾರಿ ಬೇಕಾಗಿರುವುದರಿ೦ದ ಈ ತಿ೦ಗಳ ೩೦ ಅ೦ದರೆ ಕೊನೆ ಭಾನುವಾರ ಇಟ್ಟುಕೊಳ್ಳಬಹುದೆ? ಹಾಗು ಕಾರ್ಯಕ್ರಮದ ರೂಪುರೇಷಗಳ ಬಗ್ಗೆಯೂ ನಿಮ್ಮ ಸಲಹೆ ತಿಳಿಸಿ. ನಾನು ಆತ್ರೇಯರೊ೦ದಿಗೆ ಮಾತಾಡಿಸಿ ಕಾರ್ಯಕ್ರಮ ಉದ್ದೇಶ ಮು೦ತಾದ ವಿವರಗಳನ್ನು ಫ಼ೈನಲೈಸ್ ಮಾಡುವೆ. ಸ೦ಪದಿಗರಿಗೆ ಈ ಕುರಿತು ಮೊದಲೇ ಮಾಹಿತಿ ನೀಡುವುದು ಉತ್ತಮ. ವ೦ದನೆಗಳೊ೦ದಿಗೆ, ಶಿವಪ್ರಕಾಶ್
Submitted by ಸುಧೀ೦ದ್ರ Thu, 12/06/2012 - 13:39

In reply to by spr03bt

ಎಲ್ಲರೂ ಒ0ದೆಡೆ ಸೇರುವುದು ಖುಷಿಯ‌ ವಿಚಾರ‌. ನಾನು ಭಾಗವಹಿಸುವುದಕ್ಕೆ ಇಷ್ಟ‌ ಪಡುತ್ತೇನೆ. ದಯಮಾಡಿ ಮು0ಚಿತವಾಗಿ ತಿಳಿಸಿ. ಧನ್ಯವಾದ‌
Submitted by gopinatha Thu, 12/06/2012 - 21:38

In reply to by venkatb83

http://sampada.net/… http://sampada.net/… http://sampada.net/…- %E0%B2%B8%E0%B2%BE%E0%B2%B0%E0%B3%8D%E0%B2%A5%E0%B2%95%E0%B3%8D%E0%B2%AF-%E0%B2%A6%E0%B2%BF%E0%B2%A8 ಮಾನ್ಯ ಶಿವಪ್ರಕಾಶ್ ಅವರೇ ನಿಮ್ಮ ಕಾಳಜಿ ಆಸಕ್ತಿ ಮೆಚ್ಚತಕ್ಕದ್ದೆ ನಾನು ಇ ಮೇಲೆ ಕೊಟ್ಟಿರುವ ಲಿಂಕ್ ನಲ್ಲಿ ತಮಗೆ ಮೊದಲು ನಡೆದ ಸಂಪದ ಸಮ್ಮಿಲನದ ವಿವರ ಇನ್ನೂ ಚೆನ್ನಾಗಿ ಸಿಕ್ಕೀತು. ನಾಡಿಗರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ನನ್ನ ನಮನಗಳು ನಿಮಗೇನಾದರು ಸಹಾಯ ಬೇಕಿದ್ದಲ್ಲಿ ಈ ಮನುಷ್ಯ ಹಾಜರ್
Submitted by sasi.hebbar Fri, 12/07/2012 - 15:58

In reply to by partha1059

ಸಂಪದಿಗರೆಲ್ಲರೂ ಒಂದೆಡೆ ಸೇರುವುದು ತುಂಬಾ ಒಳ್ಳೆಯ ವಿಚಾರ. ಅಂತಹದೊಂದದು ಸಮ್ಮಿಲನದಲ್ಲಿ ಪಾಲ್ಗೊಳ್ಳಲು ತುಂಬಾ ಆಸಕ್ತಿ ಇದೆ. ಮುಂಚಿತವಾಗಿ ದಿನಾಂಕ ಗೊತ್ತಾದರೆ ಉತ್ತಮ. - ಶಶಿಧರ ಹೆಬ್ಬಾರ ಹಾಲಾಡಿ.
Submitted by spr03bt Fri, 12/07/2012 - 16:31

In reply to by sasi.hebbar

ಶಶಿಧರರೆ, ಸಮ್ಮಿಲನವನ್ನು ಈ ತಿ೦ಗಳ ೩೦ರ೦ದು ಆಯೋಜಿಸುವ ಯೋಚನೆಯಿದೆ. ನಿಮ್ಮ ಆಸಕ್ತಿಗೆ ವ೦ದನೆಗಳು. ಸ೦ಪದ ನಿರ್ವಾಹಕ ತ೦ಡವು ತು೦ಬಾ ಉತ್ಸಾಹ ತೋರಿದೆ. ನನ್ನ ಹಿ೦ದಿನ ಪ್ರತಿಕ್ರಿಯೆ ಸರಿಯಾಗಿ ಸೇವ್ ಆದ೦ಗಿಲ್ಲ ಅದಕ್ಕೆ ಮತ್ತೊಮ್ಮೆ ಪ್ರತಿಕ್ರಿಯಿಸಬೇಕಾಗಿದೆ. ಶಿವಪ್ರಕಾಶ್ ರೆಡ್ಡಿ
Submitted by sasi.hebbar Fri, 12/07/2012 - 18:04

ರೆಡ್ಡಿಯವರೆ, ಒಳ್ಳೆಯದಾಯಿತು, ಡಿಸೆಂಬರ್ 30 ರಂದು ಸಮ್ಮಿಲನದಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ. ಧನ್ಯವಾದಗಳು. - ಶಶಿಧರ