ಹರಕೆಯ ಕುರಿ !
ಹೂವಿನ ಎಸಳ ಸುವಾಸನೆಯಲ್ಲಿ ನಿನ್ನ
ಅಧರದ ಸುವಾಸನೆ ಆಘ್ರಾಣಿಸುತ್ತ
ಹೂವನ್ನು ನಾಸಿಕಕ್ಕೆ ಒತ್ತಿ ಹಿಡಿದು
ದುಂಬಿಯಿಂದ ಕಡಿಸಿಕೊಂಡವ ನಾನೇ ಕಣೆ
ಚೆಲುವೆ ನಾನೇ ಕಣೆ
ನೀಲಾಕಾಶ ಬಣ್ಣದ ಸೀರೆಯುಟ್ಟ ನಿನ್ನ
ನೋಡ್ಕೊಂಡೇ ಇಹವ ಮರೆತು ಸಾಗುತ್ತ
ಬೈಕನ್ನು ಕಸದ ತೊಟ್ಟಿಯಲಿ ನುಗ್ಗಿಸಿ
ಕಸಾಭಿಷೇಕ ಮಾಡಿಸ್ಕೊಂಡವ ನಾನೇ ಕಣೆ
ಚೆಲುವೆ ನಾನೇ ಕಣೆ
ಹೂದೋಟದ ಹೂವಿನ ಹಾಗೆ ನಿಂತಿದ್ದ ನಿನ್ನ
ನೋಡ್ಕೊಂಡೇ ಸಾಗಿದ್ದೆ ರೋಡಲ್ಲಿ ನಾನು
whole universe’ನಲ್ಲಿ ನೀನೇ ಸುಂದರಿ ಎಂದುಕೊಳ್ಳುತ್ತ
ಮ್ಯಾನ್-ಹೋಲ್’ನಲ್ಲಿ ಕಾಲಿಟ್ಟು ಮುರ್ಕೊಂಡವ ನಾನೇ ಕಣೆ
ಚೆಲುವೆ ನಾನೇ ಕಣೆ
ದಟ್ಟ ಕರಿ ತಲೆಗೂದಲ ಹೊತ್ತಿಹ ನಿನ್ನ
ತುರುಬಿಗೆ ಹೂವನಲಂಕರಿಸಲು ಬಂದ ನಾನು
ಎದುರು ಸೀಟಿನ ಹೆಣ್ಣ ತುರುಬ ಪಿಡಿದು
ಕೆನ್ನೆಗೆ ಹೊಡೆಸಿಕೊಂಡವ ನಾನೇ ಕಣೆ
ಚೆಲುವೆ ನಾನೇ ಕಣೆ
ಕನಸು ಮನಸಿನಲಿ ತುಂಬಿಕೊಂಡಿದ್ದೆ ನೀನು
ನಿನ್ನನ್ನೇ ಮದುವೆ ಆಗಬೇಕೆಂದಿದ್ದೆ ನಾನು
ಬೆನ್ನಲ್ಲಿ ಬಿದ್ದ ತಂಗಿಯಿದ್ದಳು ಮದುವೆಗೆ
ಅವಳನು ಒಳ್ಳೆಯ ಮನೆಗೆ ಸೇರಿಸಬೇಕಿತ್ತೆನಗೆ
ಕೊಟ್ಟು-ತೊಗೊಳ್ತೀವಿ ಬ್ಯಾಡ ವರದಕ್ಷಿಣೆ ಎಂದಾಗ
ವಿಧಿಯಿಲ್ಲದೆ ಹೂಗುಟ್ಟಿದ್ದು ನಾನೇ ಕಣೆ
ನನ್ನವಳಾಗದ ಚೆಲುವೆ ನೀನೇ ಕಣೆ
ಕೆಟ್ಟ ವ್ಯವಸ್ಥೆಯ ಹರಕೆಯ ಕುರಿ ನಾನೇ ಕಣೆ
Comments
ಹ್ಹ...ಹ್ಹ...ಹ್ಹ....ಹ್ಹ
In reply to ಹ್ಹ...ಹ್ಹ...ಹ್ಹ....ಹ್ಹ by sathishnasa
ಮೊದಲಿಗೆ ಸಂಪೂರ್ಣ ಹಾಸ್ಯವೇ
ಭಲ್ಲೆ ಅವರೇ-ಅಂತೂ ಬಹಳ ದಿನಗಳ
In reply to ಭಲ್ಲೆ ಅವರೇ-ಅಂತೂ ಬಹಳ ದಿನಗಳ by venkatb83
ಹುಡುಗಿ ಹಿಂದೆ ಹೋಗೋ ಧೈರ್ಯ
ಭಲ್ಲೇಜಿ, ನಿಮ್ಮ ಅವಸ್ಥೇನೇ
In reply to ಭಲ್ಲೇಜಿ, ನಿಮ್ಮ ಅವಸ್ಥೇನೇ by ಗಣೇಶ
ಗಣೇಶ್'ಜಿ
In reply to ಗಣೇಶ್'ಜಿ by bhalle
>>...ಚಂದ್ರಮುಖಿಯನ್ನು ಕಂಡು ಎಡವಿ
In reply to >>...ಚಂದ್ರಮುಖಿಯನ್ನು ಕಂಡು ಎಡವಿ by ಗಣೇಶ
ಖಾರ ತಿಂದು ಮೂಗಲ್ಲಿ ನೀರು
ಕಡೆಯ ಬಾಗ ಪದ್ಯವಷ್ಟೆ ಆಗಿರಲಿ
In reply to ಕಡೆಯ ಬಾಗ ಪದ್ಯವಷ್ಟೆ ಆಗಿರಲಿ by partha1059
ನಮ್ಮವರು ಮಾರಿ ಆಗಬಹುದು ಅಥವ
ಯಾರವಳು ಯಾರವಳು, ದುಂಬಿಯಿಂದ
In reply to ಯಾರವಳು ಯಾರವಳು, ದುಂಬಿಯಿಂದ by kavinagaraj
ಅದ್ಬುತ ಕವಿಗಳೇ ... ಬೊಂಬಾಟಾಗಿ