ಹರ್ಷ ವರ್ಷ
ಕವನ
ಆಹಾ.......ಎಂಥಾ ಸೊಬಗು
ಚಿಮ್ಮುವ ನಗೆಯ ಬಗೆಯು
ವರ್ಷ ಧಾರೆಯಲಿ ಚೆಲುವು
ಚಿಣ್ಣರ ಮೊಗದಲಿ ಸಂತಸವು......
ಭೂರಮೆ ಮಡಿಲಲಿ ಬೆಳ್ಳಂಬೆಳಕು
ಹಸಿರ ಉಸಿರಲಿ ಜಲ ಸಿರಿಯು....
ಧಪಧಪ ಸುರಿದ ಮಳೆಯಲ್ಲಿ.....
ಆಟದ ಓಟವು ನಗೆಯಲ್ಲಿ..........
ಮಳೆಯಲಿ ನೆನೆಯುಕ ಮೋಜಿನಲಿ
ಕುಣಿದು,ಕುಪ್ಪಳಿಸುವ ಬಗೆಯಲ್ಲಿ...
ತಂದಿತು ಮೊಗದಲಿ ತುಂಬು ನಗೆ....
ಹರುಷದ ಕಾರಂಜಿಯ ನವಬುಗ್ಗೆ....
ಭೂರಮೆ ಮಡಿಲಿಗೆ ತುಂತುರು ಸ್ನಾನ
ತನು,ಮನಕದು ಹರ್ಷದ ಸಿಂಚನ....
ಸಮೃದ್ದಿಯ ಹಸಿರುಡುಗೆಯು ಇಳೆಗಿಲ್ಲಿ
ಮನಮೋಹಕ ದೃಶ್ಯವು ನಮಗಿಲ್ಲಿ...
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
