ಹಲಸಿನ ಸೊಳೆ ರೊಟ್ಟಿ
ಬೇಕಿರುವ ಸಾಮಗ್ರಿ
ಹಲಸಿನ ಸೊಳೆ ೨ ಕಪ್, ತೆಂಗಿನ ತುರಿ ೧/೨ ಕಪ್, ಅಕ್ಕಿ ಹಿಟ್ಟು ೧ ಕಪ್, ಹಸಿಮೆಣಸು ೧-೨, ಈರುಳ್ಳಿ ೧, ಕರಿಬೇವು ಸೊಪ್ಪು ೨ ಚಮಚ, ಶುಂಠಿ ಚೂರು ೧/೪ ಚಮಚ, ಎಣ್ಣೆ ಅಥವಾ ತುಪ್ಪ ೧/೪ ಕಪ್, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
ಹಲಸಿನಕಾಯಿ ಸೊಳೆ, ತೆಂಗಿನತುರಿ, ನೀರು, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಆಮೇಲೆ ಅಕ್ಕಿ ಹಿಟ್ಟು, ಉಪ್ಪು, ಸಣ್ಣಗೆ ಹೆಚ್ಚಿದ ನೀರುಳ್ಳಿ-ಕರಿಬೇವು-ಶುಂಠಿ ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಬಾಳೆಎಲೆಯಲ್ಲಿ ರೊಟ್ಟಿ ತಟ್ಟಿ ಕಾದ ಕಾವಲಿಯಲ್ಲಿ ಹಾಕಿ, ಎರಡೂ ಬದಿ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿ ತೆಗೆಯಿರಿ. ಬೆಣ್ಣೆ, ಶುಂಠಿ ಚಟ್ನಿ ಜೊತೆ ತಿನ್ನಲು ಬಹಳ ರುಚಿ.
- ಸಹನಾ ಕಾಂತಬೈಲು, ಮಡಿಕೇರಿ