ಹಳ್ಳಿ = ಶಾಲೆ?!

ಹಳ್ಳಿ = ಶಾಲೆ?!

Comments

ಬರಹ

ನಿನ್ನೆ ಸಾಯಂಕಾಲ ಟೀ ಕುಡೀತಿದ್ದಾಗ ನನ್ನ ಮತ್ತು ನನ್ನ ತಮಿಳು ಸ್ನೇಹಿತನ ಚರ್ಚೆ ತಮಿಳು ಇತಿಹಾಸದ ಕಡೆ ತಿರುಗಿತು.

ಅವನ ಓದಿನ ಪ್ರಕಾರ ಪಳ್ಳಿ ( ನಮ್ಮ ಹಳ್ಳಿ) ಅನ್ನುವುದು ಅಂದಿನ ( ಹಲ ಶತಮಾನಗಳ ಹಿಂದೆ) ರಾಜರಿಂದ ಜೈನರಿಗೆ ದತ್ತಿಯಾಗಿ ಕೊಡಲ್ಪಟ್ಟ ಜಾಗ. ಹೆಚ್ಚಾಗಿ ಹಳ್ಳಿ ಅಂದ್ರೆ ಶಾಲೆ ಅನ್ನೋ ಅರ್ಥ ಬಾರೋ ರೀತಿ ಬಳಸ್ತ ಇದರಂತೆ.

ಅದೇರೀತಿ "ಮಂಗಳಂ" ಪದದಿಂದ ಕೊನೆಯಾಗೋ ನಗರ/ಪ್ರದೇಶಗಳು ಬ್ರಾಹ್ಮಣರಿಗೆ ದತ್ತಿಯಾಗಿ ಕೊಡಲ್ಪಟ್ಟ ಸ್ಥಳಗಳಂತೆ.

ನಮ್ಮ ಕನ್ನಡನಾಡಿನ ಇತಿಹಾಸ ನೋಡಿದರೆ ... ಇಲ್ಲಿ (ವೀರಶೈವವೂ ಸೇರಿದಂತೆ ) ಇತರ ಧರ್ಮಗಳು ನೆಲೆಗೊಳ್ಳುವ ಮುಂಚೆ ಜೈನರೆ ಬಹು ಮಂದಿ ತುಂಬಿದ್ದರು. ಇದರಂತೆ "ಹಳ್ಳಿ" ನಮ್ಮಲ್ಲಿ ಹೆಚ್ಚು ಅಂತ ಹೇಳಬಹುದೇ?!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet