ಹಸಿ ಹಸಿಯಾದ ಹರಯ...

ಹಸಿ ಹಸಿಯಾದ ಹರಯ...

ಕವನ

 

ಗೆಳೆಯಾ,
ಹಸಿ ಹಸಿಯಾದ ಹರಯ 
ಕುಡಿಸಿತ್ತು ನನಗೆ ಸುರೆಯ!
ನಾ ಹಿಡಿದಿದ್ದೆ ನಿದಿರೆ ಜಾಡು  
ಅಲ್ಲಿ ಕಟ್ಟು ಪಾಡು ಇರದ ಕಾಡು!
ಬಲಿತ ಮರದಂತೆ ನಿಂತಿದ್ದೆ ನೀನು 
ಬಳಸಿ ತಬ್ಬಿದ್ದೆ, ಬಳ್ಳಿ ನಾನು!
ಇರುಳಲ್ಲಿ ಕಂಡ ಕನಸು 
ನಿಜವಾಗಲೆಂದು ಹರಸು!
-ಮಾಲು