ಹಾ ಮ ಸತೀಶರ ಚುಟುಕುಗಳು

ಹಾ ಮ ಸತೀಶರ ಚುಟುಕುಗಳು

ಕವನ

ಮರ್ಯಾದೆ

ಭಾಷಣವ ಬಿಗಿಯುತ್ತ ನೀ ಸಾಗಬೇಡ

ಪ್ರೀತಿಯನು ತೋರಿಸದೆ ಹೊರೆಯಾಗಬೇಡ

ಜನರೊಳಗೆ ಸವಿಮಾತ ತುಂಬುತಿರುಯೆಂದು

ಕೊಡುವರು ಮರ್ಯಾದೆ ಜನನಾಯಕನೆಂದು

*

ಅರಿವು

ಗುಣವಿರಲಿ ನಡತೆಯಲಿ ಅತಿಯಾಸೆಯಿರದೆ

ಜನವಿರಲಿ ಜೊತೆಗಿಂದು ದ್ವೇಷವದುಯಿರದೆ

ಮೌನದೊಳು ಸಾಗುತಲಿ ಕುತಂತ್ರವುಯಿರದೆ

ಬದುಕನ್ನು ನಡಸೋಣ ಕ್ಲೇಷವದುಯಿರದೆ

*

ಭಾಗ್ಯ

ಚಂದಿರನ ಲೋಕದಲಿ

ತಾರೆಗದು ಚೆಂದವು

ಮದುಮಗನು ಕೈಹಿಡಿಯೆ

ಮದುಮಗಳ ಭಾಗ್ಯವು

*

ನನಸು ಬರಲಿ

ಕಾನನದ ತುಂಬೆಲ್ಲ ಹೂವೆಲ್ಲ ಹರಡಿರಲು

ಪರಿಮಳವು ಸೂಸುತಿದೆ ಬಂದೊಮ್ಮೆ ನೋಡು

ಜೀವನದ ದಾರಿಯಲಿ ಕನಸೊಂದು ಬಂದಿರಲು

ನನಸೊಂದು ಮೂಡುವುದು ನಲಿದು ಹಾಡು

*

ಮತ್ತಿನಲಿ

ಕುಣಿಯುವ ಮತ್ತಿನಲಿ ನೆಲಡೊಂಕೆಂದು

ನೋಡುತ್ತಲೇ ನಾವು ನರ್ತಿಸುವುದಿಲ್ಲ

ಆಕಸ್ಮಿಕ ಬಿದ್ದರೂ ಏನೂ ಆಗದವರು

ಸಿಕ್ಕ ಸಿಕ್ಕಲ್ಲಿ ಕುಣಿಯುತ್ತಲೇ ಇರುತ್ತಾರೆ 

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್