ಹುಟ್ಟು ಹಬ್ಬದ ಹಿತಾಶಯಗಳು

ಹುಟ್ಟು ಹಬ್ಬದ ಹಿತಾಶಯಗಳು

ಬರಹ

ಗೆಳೆಯ ಹರಿಪ್ರಸಾದ್ ನಾಡಿಗರಿಗೆ

ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ ನಿಮ್ಮನ್ನು. ನಿಮ್ಮ ವ್ಯಕ್ತಿತ್ವ, ನಿಮ್ಮ ಸರಳತೆ, ನಿಮ್ಮಲ್ಲಿರುವ ಆಳವಾದ ಜ್ಞಾನ, ಫ್ರೆಂಡ್ಲಿ ನೇಚರ್... ಇವು ಈ ಕಾಲದಲ್ಲಿ ಸಿಗುವುದು ವಿರಳ.

ಕೋಟ್ಯಾಂತರ ಕಠಿಣ ಕೋಡ್ ಗಳನ್ನ ಕ್ಷಣಮಾತ್ರದಲ್ಲಿ ಬಿಡಿಸುವ ನೀವು,’ಮೋಬಾಯಿಲಿಗೆ ರಿಂಗ್ ಟೋನ್ ಸೆಟ್ ಮಾಡೋದು ತುಂಬಾ ಕಾಂಪ್ಲಿಕೇಟೆಡ್ ರೀ’ ಎಂದು ಹೇಳುವಾಗ ಒಂದು ಅಚ್ಚರಿಯಂತೆ ನಿಮ್ಮನ್ನು ನೋಡಿದ್ದೇನೆ.

ಬದುಕಿನಲ್ಲಿ ಒಂದು ನಿರ್ದಿಷ್ಟವಾದ ಗುರಿಯನ್ನಿಟ್ಟುಕೊಂಡು, ಸಾಮಾನ್ಯರನ್ನು ಕಾಡುವ ಡಿಸ್ಟ್ರಾಕ್ಷನ್ ಗಳಿಂದ ದೂರವಿದ್ದು, ಗುರಿಯನ್ನು ತಲುಪಲು ನಿರಂತರವಾಗಿ ಯಜ್ಞ ಮಾಡುತ್ತಿರುವ ನಿಮ್ಮಂತಹ, ಶಿವೂ ಹಾಗೂ ಅನಿಲ್ ರಂತಹ ಯುವಕರನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ.

ಇಂದು ನಿಮ್ಮ ಜನ್ಮ ದಿನ. ಇಂದು ಹೇಳುವುದಿಷ್ಟೇ

ಜನ್ಮದಿನದ ಹಿತಾಶಯಗಳು.. ನೂರ್ಕಾಲ ಬಾಳು ಗೆಳೆಯಾ..ಶುಭವಾಗಲಿ.. ನಿಮ್ಮ ಬದುಕು ಇತರರಿಗೂ ದಾರಿದೀಪವಾಗಲಿ :-)

ಅವಿನಾಶ್ ಕಾಮತ್