ಹೆಸರೊಂದಿಟ್ಟರೆನಗೆ
ಹೆಸರೊಂದಿಟ್ಟರೆನಗೆ ಹೆಸರಿರದ ನನಗೆ
ಹೆಸರೊಂದಿಟ್ಟರೆನಗೆ || ಪ ||
ಎನಿತು ಜನನವೋ ಎನಿತು ಮರಣವೋ
ಯಾವ ಜೀವವೋ ಎಂಥ ಮಾಯೆಯೋ
ಆದಿ ಅಂತ್ಯವನರಿಯದವಗೆ ಹೆಸರೊಂದಿಟ್ಟರೆನಗೆ ||
ಹಿಂದೆ ಇರದ ಮುಂದೆ ಇರದಿಹ
ತನುವ ಕಣಕಣ ಚಣಚಣಕೆ ಬದಲು
ಇಂತಪ್ಪ ತನುವೆ ತಾನು ಎಂದವಗೆ ಹೆಸರೊಂದಿಟ್ಟರೆನಗೆ ||
ಪಂಚತತ್ವದ ದೇಹ ಬಣ್ಣ ಬಣ್ಣದ ಬಟ್ಟೆ
ಚೈತನ್ಯವಿಲ್ಲದಿರೆ ಬರಿಯ ಲೊಳಲೊಟ್ಟೆ
ಚೇತನದ ಚೆಲುವ ಕಂಡರಿಯದವಗೆ ಹೆಸರೊಂದಿಟ್ಟರೆನಗೆ ||
ಅವನ ಕರುಣೆ ನವರಸದ ಅರಮನೆ
ಚಲಿಪ ಅರಮನೆಗೊಡೆಯನೆಂದು
ಬೀಗಿ ರಾಗದಿ ನಿಜವ ಮರೆತವಗೆ ಹೆಸರೊಂದಿಟ್ಟರೆನಗೆ ||
ಎನಿತು ಪುಣ್ಯವೋ ಮನುಜನಾಗಿಹೆ
ಮತಿಯ ಬಿಟ್ಟರೆ ಜಾರಿಹೋಗುವೆ
ಅರಿಗೆ ಗುರಿಯಾಗಿರುವ ನರಗೆ ಹೆಸರೊಂದಿಟ್ಟರೆನಗೆ ||
ಹೆಸರು ಹೆಸರೆಂದು ಕೊಸರುತಿಹರು
ಅರಿತವರೆ ಬಿಡರು ಹೆಸರ ಹಂಬಲ
ಹೆಸರು ಹಸಿರೆಂದುಸಿರುವವಗೆ ಹೆಸರೊಂದಿಟ್ಟರೆನಗೆ ||
-ಕ.ವೆಂ.ನಾಗರಾಜ್.
Comments
ಉ: ಹೆಸರೊಂದಿಟ್ಟರೆನಗೆ
ನಾಗರಾಜರೆ ತುಂಬಾ ಚೆನ್ನಾಗಿದೆ !
In reply to ಉ: ಹೆಸರೊಂದಿಟ್ಟರೆನಗೆ by partha1059
ಉ: ಹೆಸರೊಂದಿಟ್ಟರೆನಗೆ
ಧನ್ಯವಾದ, ಪಾರ್ಥರೇ.
ಉ: ಹೆಸರೊಂದಿಟ್ಟರೆನಗೆ
ಎನಿತು ಪುಣ್ಯವೋ ಮನುಜನಾಗಿಹೆ,ಮತಿಯ ಬಿಟ್ಟರೆ ಜಾರಿಹೋಗುವೆ,ಅರಿಗೆ ಗುರಿಯಾಗಿರುವ ನರಗೆ ಹೆಸರೊಂದಿಟ್ಟರೆನಗೆ || ಸರಳ ಹಾಗೂ ಸುಂದರ ಕವನ ..
In reply to ಉ: ಹೆಸರೊಂದಿಟ್ಟರೆನಗೆ by Vinutha B K
ಉ: ಹೆಸರೊಂದಿಟ್ಟರೆನಗೆ
ಉ: ಹೆಸರೊಂದಿಟ್ಟರೆನಗೆ
ನಾಗರಾಜರೆ ನಿಮಗೆ ಹೆಸರಿನ ಚಿಂತೆಯ ಅಗತ್ಯವೆ ಇಲ್ಲ ಬಿಡಿ , 'ಕವಿ' ಯೆನ್ನುವ ಹೆಸರೆ ಅನ್ವರ್ಥಕವಾಗಿ ಸೂಕ್ತವಾಗಿ ಹೊಂದುತ್ತದೆ :-) ಸೊಗಸಾದ ಕವನ - ನಾಗೇಶ ಮೈಸೂರು
In reply to ಉ: ಹೆಸರೊಂದಿಟ್ಟರೆನಗೆ by nageshamysore
ಉ: ಹೆಸರೊಂದಿಟ್ಟರೆನಗೆ
ಉ: ಹೆಸರೊಂದಿಟ್ಟರೆನಗೆ
In reply to ಉ: ಹೆಸರೊಂದಿಟ್ಟರೆನಗೆ by makara
ಉ: ಹೆಸರೊಂದಿಟ್ಟರೆನಗೆ
In reply to ಉ: ಹೆಸರೊಂದಿಟ್ಟರೆನಗೆ by kavinagaraj