ಹೊಸತು: ಸಂಪದದಲ್ಲಿ ಮಾಡರೇಶನ್ - ಹೇಗೆ?

ಹೊಸತು: ಸಂಪದದಲ್ಲಿ ಮಾಡರೇಶನ್ - ಹೇಗೆ?

ಬರಹ

ಎಲ್ಲ ಓದುಗರ ಗಮನಕ್ಕೆ,

ಕಳೆದ ಕೆಲವು ದಿನಗಳಿಂದ ಸಂಪದದ ಪುಟಗಳಲ್ಲಿ ನೀವು ಗಮನಿಸಿರುವಂತೆ ಹೊಸತೊಂದು ಫೀಚರ್ ಸೇರ್ಪಡೆಯಾಗಿದೆ:

 

ಪುಟಗಳಲ್ಲಿ:

"ನಿರ್ವಾಹಕರ ಗಮನಕ್ಕೆ ತನ್ನಿ"

ಪ್ರತಿಕ್ರಿಯೆಗಳಲ್ಲಿ:

"ಅನುಚಿತ ಪ್ರತಿಕ್ರಿಯೆ? ಇಲ್ಲಿ ಕ್ಲಿಕ್ ಮಾಡಿ"

 

ಲಾಗಿನ್ ಆದ ಸದಸ್ಯರಿಗೆ ಮಾತ್ರ ಈ ಮಾಡರೇಶನ್ ಬಟನ್ನುಗಳು ಲಭ್ಯ.

ಸದಸ್ಯರು ಇದನ್ನು ಸಾಧ್ಯವಾದಷ್ಟು ಬಳಸಿ ಸಂಪದದಲ್ಲಿ ಸೇರಿಸಲ್ಪಡುತ್ತಿರುವ ಬರಹ ಹಾಗೂ ಪ್ರತಿಕ್ರಿಯೆಗಳಿಗೆ ಸ್ವತಃ ಸಮುದಾಯವೇ ಮಾಡರೇಶನ್ ಮಾಡಿಕೊಳ್ಳುವಂತೆ ಮಾಡಬಹುದು.

 

ಹೇಗೆ ಕೆಲಸ ಮಾಡುತ್ತದೆ?

ಪ್ರತಿ ಸದಸ್ಯರ ಅಕೌಂಟಿಗೂ ಒಂದು ಮಾಡರೇಶನ್ ಅಂಕ. ಒಟ್ಟಾರೆ ಮಾಡರೇಶನ್ ಅಂಕಗಳು  ನಿರ್ದಿಷ್ಟ ಸಂಖ್ಯೆ ತಲುಪಿದ ಕೂಡಲೆ ಪುಟ ಅಥವ ಪ್ರತಿಕ್ರಿಯೆ ತನ್ನಷ್ಟಕ್ಕೆ ಪ್ರಕಟಣೆಯಿಂದ ಹೊರಹೋಗುವುದು.

ಸಂಪದದ ಸೂಚನೆಗಳನ್ನು ಉಲ್ಲಂಘಿಸುವ ಸದಸ್ಯರ ಅಕೌಂಟುಗಳನ್ನೂ ಉಳಿದ ಸದಸ್ಯರು ರಿಪೋರ್ಟ್ ಮಾಡಬಹುದು.