೨೫೦ರ ಸಂಭ್ರಮದಲ್ಲಿ ಜಾಗೃತಿ.

೨೫೦ರ ಸಂಭ್ರಮದಲ್ಲಿ ಜಾಗೃತಿ.

ಬರಹ

೨೫೦ರ ಸಂಭ್ರಮದಲ್ಲಿ ಜಾಗೃತಿ.
ಮಸಾಲೆ ಸಂಸ್ಕೃತಿಯ ಇಂದಿನ ಯುಗದಲ್ಲಿ ವೀಕ್ಷಕರಿಗೆ ನಿಜವಾಗಿ ಏನು ಬೇಕು ಎಂದು ಯಾರೂ ಯೋಚಿಸುವ ಗೋಜಿಗೆ ಹೋಗಿಲ್ಲ.ಹೀಗಾಗಿ ವೀಕ್ಷಕ ಕೊಟ್ಟಿದ್ದೆಲ್ಲವನ್ನು ಇಷ್ಟಪಡುತ್ತಾನೆ ಎನ್ನುವ ಕಲ್ಪನೆಯಲ್ಲಿ ದೃಶ್ಯ ಮಾಧ್ಯಮ ಮುಳುಗಿದೆ. ದೃಷ್ಯ ಮಾಧ್ಯಮದಲ್ಲಿ ಜನರಿಗೆ ಉಪಯುಕ್ತವಾದ ಮಾಹಿತಿ ನೀಡುವ ಪ್ರಯತ್ನ ಗಂಭೀರವಾಗಿ ನಡೆದದ್ದು ಬಲು ಕಡಿಮೆ. ಟಿ. ಆರ್.ಪಿ. ಯುದ್ದದಲ್ಲಿ ಮುಳುಗಿರುವ ದೃಷ್ಯ ಮಾಧ್ಯಮ, ಜನರಿಗೆ ಏನು ಬೇಕೋ ಅದನ್ನು ಕೊಡುವ ನಿಟ್ಟಿನಲ್ಲಿ ವಿಫಲವಾಗುತ್ತಿದೆ.
ಆದರೆ, ಉಪಯುಕ್ತವಾದ ಮಾಹಿತಿಯನ್ನು ಆಕರ್ಷಕ ರೀತಿಯಲ್ಲಿ ನೀಡಿದರೆ ವೀಕ್ಷಕರು ಖಂಡಿತವಾಗಿ ಇಷ್ಟಪಡುತ್ತಾರೆಂಬುದು ಕಸ್ತೂರಿ ವಾಹಿನಿತ ಧೃಡ ನಂಬಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಸ್ತೂರಿವಾಹಿನಿಯು, ಮಾಹಿತಿ ಆಧರಿತವಾದ ’ಜಾಗೃತಿ’ ಎಂಬ ಅರ್ಧ ತಾಸಿನ ವಿಶಿಷ್ಟ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಸಪ್ಟೆಂಬರ್ ೨೬, ೨೦೦೭ ರಂದು ತನ್ನ ಮೊದಲ ಕಂತ್ತನ್ನು ಪ್ರಾರಂಭಿಸಿದ ವಾಹಿನಿಯು ಇದೇ ೭ಕ್ಕೆ’ಜಾಗೃತಿ’ಯ ೨೫೦ ನೇ ಕಂತನ್ನು ಬಿತ್ತರಿಸಲಿದೆ.
ಪ್ರತಿದಿನ ಬೆಳಿಗ್ಗೆ ೧೦:೦೫ ರಿಂದ ೧೦:೩೦ ರ ತನಕ ಪ್ರಸಾರವಾಗುವ ಈ ಕಾರ್ಯಕ್ರಮವು ಹೆಸರೇ ಹೇಳುವಂತೆ, ಜನಸಾಮಾನ್ಯನ ತಿಳುವಳಿಕೆಯನ್ನು ಹೆಚ್ಚಿಸಿ ಜಾಗೃತಿ ಮೂಡಿಸುವತ್ತ ಸಾಗಿದೆ. ಆರೋಗ್ಯ, ಪರಿಸರ, ಅಭಿವೃದ್ದಿ, ಮಹಿಳೆ, ಕಾನೂನು,ವಿಜ್ಞಾನ, ಸಮಾಜದಲ್ಲಿ ಪ್ರಚಲಿತವಿರುವ ಸಮಸ್ಯೆಗಳು, ನಾಗರೀಕರೇ ಕಂಡುಕೊಂಡ ಪರಿಹಾರಗಳು ಮುಂತಾದ ವಿಚಾರಗಳು ಜಾಗೃತಿಯಲ್ಲಿ ಮೂಡಿಬರುತ್ತಿರುವ ಕಾರ್ಯಕ್ರಮಗಳಾಗಿವೆ.
ಜನರಿಗೆ ಬೇಕಾಗುವ ವಿಚಾರಗಳ ಜೊತೆಗೆ, ಅವರಿಗೆ ಗೊತ್ತಿಲ್ಲದ ವಿಚಾರಗಳನ್ನು ಈ ಕಾರ್ಯಕ್ರಮವು ಪ್ರಸಾರ ಮಾಡುತ್ತದೆ. ನಮ್ಮ ಸುತ್ತಮುತ್ತಲಿರುವ ಋಣಾತ್ಮಕ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ , ಅವುಗಳ ಪರಿಹಾರಕ್ಕೆ ಸಾಧ್ಯವಿರುವ ಧನತ್ಮಕ ಪರಿಹಾರಗಳ ಮೇಲೂ ಜನರಿಗೆ ಅರ್ಥವಾಗುವ ಸರಳವಾದ ಭಾಷೆಯಲ್ಲಿ ಈ ಕಾರ್ಯಕ್ರಮ ಬೆಳಕು ಚೆಲ್ಲುತ್ತದೆ.