‘ದೇವರು’ ಕೃತಿಯ ಎ.ಎನ್.ಮೂರ್ತಿರಾವ್ ಒಂದು ನೆನಪು

‘ದೇವರು’ ಕೃತಿಯ ಎ.ಎನ್.ಮೂರ್ತಿರಾವ್ ಒಂದು ನೆನಪು

ಕನ್ನಡದಲ್ಲಿ ಶ್ರೇಷ್ಠ ಪ್ರಬಂಧಕಾರರೂ, ವಿಮರ್ಶಕರೂ, ಆಗಿದ್ದು ‘ದೇವರು’ ಪುಸ್ತಕದ ಮೂಲಕ ಜನಪ್ರಿಯರಾದ ಪ್ರೊ.ಎ.ಎನ್.ಮೂರ್ತಿರಾವ್ ಅವರ ಜನ್ಮದಿನಕ್ಕೆ (ಜೂನ್ ೧೬) ಶುಭಹಾರೈಸುತ್ತಾ ಅವರ ವ್ಯಕ್ತಿ ಚಿತ್ರಣ ನಿಮ್ಮ ಓದಿಗಾಗಿ...

ಕನ್ನಡದಲ್ಲಿ ಶ್ರೇಷ್ಠ ಪ್ರಬಂಧಕಾರರೂ, ವಿಮರ್ಶಕರೂ, ಆಗಿದ್ದು ‘ದೇವರು’ ಪುಸ್ತಕದ ಮೂಲಕ ಜನಪ್ರಿಯರಾದ ಪ್ರೊ.ಎ.ಎನ್.ಮೂರ್ತಿರಾವ್ ಅವರು ಎಂ.ಸುಬ್ಬರಾವ್ ಮತ್ತು ಪುಟ್ಟಮ್ಮ ದಂಪತಿಗಳ ಪುತ್ರರಾಗಿ 16 ಜೂನ್ 1900ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಹೇಮಾವತಿ ನದಿಯ ಪ್ರಕೃತಿ ಸೊಬಗಿನಲ್ಲಿರುವ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು. ಬಾಲ್ಯದ ದಿನಗಳನ್ನು ಮೇಲುಕೋಟೆ ನಾಗಮಂಗಲದಲ್ಲಿ ಕಳೆದರು. 1913ರಲ್ಲಿ ಮೈಸೂರಿನ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿನಂತರ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು.

1922ರಲ್ಲಿ ಬಿ.ಎ.ಪದವಿ ಮುಗಿಸಿ 1924ರಲ್ಲಿ ಎಂ.ಎ ಪದವಿ ಪಡೆದರು. 1924 ರಲ್ಲಿ ಮಹಾರಾಜ ಕಾಲೇಜಿನಲ್ಲಿ ಟ್ಯೊಟರ್ ಆಗಿ, 1927ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, 1940 ರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಬಡ್ತಿ ಪಡೆದರು. 1940 ರಿಂದ 1943ರ ವರೆಗೆ ಶಿವಮೊಗ್ಗ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, 1943 ರಲ್ಲಿ ಆಕಾಶವಾಣಿಯ ಸಹಾಯಕ ನಿರ್ದೇಶಕರಾದರು. 1948ರಲ್ಲಿ ಚಿತ್ರದುರ್ಗ ಕಾಲೇಜಿನಲ್ಲಿ ಮುಖ್ಯಸ್ಥರಾಗಿದ್ದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ,1955 ನಿವೃತಿಗೊಂಡರು. 1955ರಲ್ಲಿ ಸರ್ಕಾಧ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶರಾದರು. 1954ರಲ್ಲಿ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸದರ್ನ್ ಲಾಂಗ್ವೇಜಸ್ ಬುಕ್ ಟ್ರಸ್ ಕನ್ನಡ ಶಾಖೆಯ ಸಂಚಾಲಕ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ, ಆಕಾಶವಾಣಿಯಲ್ಲಿ ಸೆಂಟ್ರಲ್ ಪ್ರೋಂಗ್ರಾಂ ಅಡ್ವೆಸರಿ ಕಮಿಟಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಎ.ಎನ್.ಮೂರ್ತಿರಾವ್ ಅವರು ಸಾಕ್ರೆಟೀಸನ ಕೊನೆಯ ದಿನಗಳು, ಹವಳದ ಸ್ವೀಪ, ಯೋಧನ ಪುನರಾಗಮನ, ಪಾಶ್ಚಾತ್ಯ ಸಣ್ಣ ಕಥೆಗಳು, ಅಮೆರಿಕನ್ ಸಾಹಿತ್ಯ ಚರಿತ್ರೆ, ಇಂಡಿಯ-ಇಂದು ಮತ್ತು ನಾಳೆ, ಚಂಡಮಾರುತ ಇವು ಅನುವಾದ ಕೃತಿಗಳು. ಹಗಲುಗನಸುಗಳು, ಮಿನುಗು ಮಿಂಚು, ಅಲೆಯುವ ಮನ, ಜನತಾ ಜನಾರ್ಧನ, ಸಮಗ್ರ ಲಲಿತ ಪ್ರಬಂಧಗಳು ಇವು ಲಲಿತ ಪ್ರಬಂಧಗಳು. ಆಷಾಢಭೂತಿ ಇದು ನಾಟಕ ಸಂಕಲನ. ಷೇಕ್‌ಸ್ವಿಯರ್-ಪೂರ್ವಭಾಗ, ಮಾಸ್ತಿಯವರ ಕಥೆಗಳು, ಸಾಹಿತ್ಯ ಮತ್ತು ಸತ್ಯ, ಪೂರ್ವ ಸೂರಿಗಳೊಡನೆ, ವಿಮರ್ಶಾತ್ಮಕ ಪ್ರಬಂಧಗಳು ಇವು ವಿಮರ್ಶಾತ್ಮಕ

ಕೃತಿಗಳು. ಚಿತ್ರಗಳು-ಪತ್ರಗಳು, ಬಿ.ಎಂ ಶ್ರೀಕಂಠಯ್ಯ ಇವು ವ್ಯಕ್ತಿಚಿತ್ರ ಕೃತಿಗಳು. ಅವರವಯಸ್ಕನ ಅಮೆರಿಕಾಯಾತ್ರೆ ಇದು ಪ್ರವಾಸ ಕೃತಿ. ಸಂಜೆಗಣ್ಣಿನ ಹಿನ್ನೋಟ ಇದು ಆತ್ಮ ಚರಿತ್ರೆ. ದೇವರು, ಗಾನ ವಿಹಾರ, ಮಹಾಭಾತರದಲ್ಲಿ ಕೇಡು ಎಂಬುದರ ಸಮಸ್ಯೆ ಇವು ಮೂರ್ತಿರಾವ್ ಅವರ ಇತರೆ ಕೃತಿಗಳು.

ಎ.ಎನ್.ಮೂರ್ತಿರಾವ್ ಅವರು ಸಾಕಷ್ಟು ವಿದೇಶ ಪ್ರವಾಸ ಮಾಡಿದ್ದರೆ. ಅವರು ತಮ್ಮ ಲೋಕಾನುಭವದಿಂದ ಬರೆದ ‘ಅಪರವಯಸ್ಕನ ಅಮೇರಿಕ ಯಾತ್ರೆ’ ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಯಿ ಪ್ರಶಸ್ತಿ, ‘ಚಿತ್ರಗಳು-ಪತ್ರಗಳು’ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಿಂದ 1977ರಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ, ಸಮಗ್ರ ಸಾಹಿತ್ಯಕ್ಕೆ ಮಾಸ್ತಿ ಪ್ರಶಸ್ತಿ, ‘ದೇವರು’ ಕೃತಿಗೆ ಪಂಪ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಗೌರವ ಡಿ.ಲಿಟ್ ಸೇರಿ ಅನೇಕ ಪ್ರಶಸ್ತಿಗಳ ಮಹಾಪೂರವೇ ಇವರಿಗೆ ಹರಿದು ಬಂದಿದೆ.

1948ರಲ್ಲಿ ಕೋಲಾರ ಜಿಲ್ಲೆಯ ಕೈವಾರದಲ್ಲಿ ನಡೆದ 56ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಶಸ್ವಿಯಾಗಿ ಗಡಿನಾಡಿನದಲ್ಲಿ ಸಮ್ಮೇಳನವನ್ನು ನಡೆಸಿಜಕೊಟ್ಟಿದ್ದರು. ಎ.ಎನ್. ಮೂರ್ತಿರಾವ್‌ರವರು 23 ಆಗಸ್ಟ್ 2003ರಲ್ಲಿ ವಿಧಿವಶರಾದರು. ಇವರಿಗೆ 104 ವರ್ಷ ಬದುಕಿದ ಶತಮಾನದ ವ್ಯಕ್ತಿ ಎಂಬ ಗೌರವವನ್ನು ಸರ್ಕಾರವು ಇವರ ನಿಧನದ ನಂತರ ನೀಡಲಾಗಿದೆ. ಇಂತಹ ವೈಚಾರಿಕ ಲೇಖಕರನ್ನು ಪಡೆದ ಕನ್ನಡ ನಾಡು ಧನ್ಯವಾಗಿದೆ. ಇಂತಹ ಸಾಹಿತಿಗಳು ಕನ್ನಡ ನಾಡಿನಲ್ಲಿ ಮತ್ತೆ ಹುಟ್ಟಿ ಬರಲೆಂದು ನಾವೆಲ್ಲರೂ ಆಶೀಸೋಣ.

-ಮೊಹಮ್ಮದ್ ಅಜರುದ್ದೀನ್

ಚಿತ್ರ ಕೃಪೆ: ಇಂಟರ್ನೆಟ್ ತಾಣ