‘ನಾನು ಚೆಲುವೆ’ ಎಂಬ ಒಂದು ಗಝಲ್

‘ನಾನು ಚೆಲುವೆ’ ಎಂಬ ಒಂದು ಗಝಲ್

ಕವನ

ಉಪ್ಪರಿಗೆಯಲ್ಲಿ ಕೂರಿಸಿ ಮಾತನಾಡಿಸಿದೆ ನಾನು ಚೆಲುವೆ

ತಪಲೆಯಲ್ಲೆ ಚಿನ್ನವ ಗೆಲುವಾಗಿಸಿದೆ ನಾನು ಚೆಲುವೆ

 

ಮಾತುಗಳ ಸವಿಗೆ ಬಾರದೇ ಹೋಯ್ತೆ ಬೆಳದಿಂಗಳು

ಆಸೆಯ ಕಂಗಳನು ಕಾಯಲಿರಿಸಿದೆ ನಾನು ಚೆಲುವೆ

 

ಹಣದ ವ್ಯಾಮೋಹದ ನಡುವೆ ಪ್ರೀತಿ ಕಾಣೆಯಾಗಿ ಹೋಯಿತೆ

ಮೌನಕೆ ಆತುರವ ಕಲ್ಪಿಸದೆ ದೂರವಾಗಿಸಿದೆ  ನಾನು ಚೆಲುವೆ

 

ಇಂಪಾದ ಗಾಯನದಂತೆ ಹೃದಯ ಹೂವಿನಂತೆ ಅರಳಲೆಂದು

ಮರೆಯದಿರು ಬಾಂಧವ್ಯವನು ಚೆಲುವಾಗಿಸಿದೆ ನಾನು ಚೆಲುವೆ

 

ಈಶನ ಮನಸ್ಥಿತಿಯ ಅರ್ಥೈಸಿಕೊಳ್ಳದೆ ದೂರ ಹೋದೆಯಲ್ಲೆ

ನಾಳೆಗಾದರೂ ಬರಬಹುದೆಂದು  ಪ್ರೇಮವಾಗಿಸಿದೆ ನಾನು ಚೆಲುವೆ

 

-ಹಾ ಮ ಸತೀಶ

 

ಚಿತ್ರ್