’ಕನ್ನಡ ಅಕ್ಕ ವಿಶ್ವಸಮ್ಮೇಳನ’ ದ ಕರ್ನಾಟಕ ರಥಯಾತ್ರೆ’ ಕಾರ್ಯಕ್ರಮ !

’ಕನ್ನಡ ಅಕ್ಕ ವಿಶ್ವಸಮ್ಮೇಳನ’ ದ ಕರ್ನಾಟಕ ರಥಯಾತ್ರೆ’ ಕಾರ್ಯಕ್ರಮ !

ಬರಹ

ಅಮೆರಿಕದ ಚಿಕಾಗೋ ನಗರದಲ್ಲಿ ಆಗಸ್ಟ್ ೩೦ ರ ಶನಿವಾರದಂದು ಬೆಳಿಗ್ಯೆ ೯ ಗಂಟೆಗೆ ’ಕನ್ನಡ ಅಕ್ಕ ವಿಶ್ವಸಮ್ಮೇಳನ’ ದ ಅಂಗವಾಗಿ, ಕರ್ನಾಟಕ ರಥಯಾತ್ರೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರುದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರಮನಸ್ಸನ್ನೂ ರಂಜಿಸಿತಣಿಸಿದವು.

ವಿದೇಶದಕನ್ನಡಿಗರ ಕೊಡುಗೆ ಅಪಾರ. ಸಾಹಿತ್ಯದಲ್ಲೂ ಅವರು ಮುಂದಿದ್ದಾರೆ. ದೂರದ ಅಮೆರಿಕದಲ್ಲಿ, ರಚಿತವಾಗಿ, ಅಮೆರಿಕದ ’ಹೂಸ್ಟನ್ ಕನ್ನಡವೃಂದ,’ ದವರಿಂದ ಬಿಡುಗಡೆಯಾಗಿರುವ ’ಕರ್ಣಾಟಕ ಭಾಗವತ’ ವೆಂಬ ಉದ್ಗ್ರಂಥದ ಸಂಪಾದಕ, ಲಿಪಿಕಾರ, ಸಂಶೋಧಕ, ಡಾ. ಚಂದ್ರಶೇಖರ್ ರವರೂ ರಥಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಈಗ್ರಂಥಕ್ಕೆ ಆರ್ಥಿಕ ನೆರವು ( ೧೦, ೦೦೦ ಡಾಲರ್) ನೀಡಿ ಪ್ರೋತ್ಸಾಹಿಸಿದ ’ಹೂಸ್ಟನ್ ಕನ್ನಡವೃಂದ’ ಬೇರೆಲ್ಲಕನ್ನಡ ಸಂಘಗಳಿಗೆ ಮಾದರಿಯಾಗಿದೆ. ಅಮೆರಿಕದಲ್ಲೇನು, ನಮ್ಮತಾಯ್ನಾಡಿನಲ್ಲೂ ಇಂತಹ ಪ್ರಯೋಗಬಂದಿರುವುದು ಅಪರೂಪ. ಈ ಕೃತಿ ಅತ್ಯಂತ ವಿಶಿಷ್ಟವಾದದ್ದೆಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದಲ್ಲಿ ಕಾಣುವ ರಥಯಾತ್ರೆಯಲ್ಲಿ ಭಾಗವಹಿಸಿದವರು, ಸೇಂಟ್ ಲೂಯಿಸ್ ಕನ್ನಡ ಸಂಘದವರು, ಇದೇರೀತಿ ಅಮೆರಿಕದ ಹಲವಾರುರಾಜ್ಯಗಳಲ್ಲಿ ಕನ್ನಡವನ್ನು ಕಟ್ಟಿಬೆಳಸುತ್ತಿರುವ ಕನ್ನಡ ಸಂಘಗಳು, ಮೆರವಣಿಗೆಯಲ್ಲಿ ತಮ್ಮ ಕಲಾವಂತಿಕೆಯನ್ನು ಪ್ರದರ್ಶಿಸಿದರು. ಕೆನಡಾ ಮುಂತಾದ ರಾಷ್ಟ್ರಗಳಿದಿಂದಲೂ ಬಂದು ಪಾಲ್ಗೊಂಡ ಕನ್ನಡಿಗರು, ಕನ್ನಡನಾಡಿನ ಹೆಸರನ್ನು ವಿಶ್ವದಾದ್ಯಂತ ಮೆರೆಸುತ್ತಿದ್ದಾರೆ.ನಮ್ಮ ಪ್ರೀತಿಯ ಸಂಪದಿಗ, ಶ್ರೀವತ್ಸ ಜೋಷಿಯವರು, ಅಕ್ಕ ಕಾರ್ಯಕ್ರಮದ ಅತಿಸೂಕ್ಷ್ಮ ವಿಷಯಗಳನ್ನು ತಮ್ಮಲೇಖನಿಯಲ್ಲಿ ಹೊರತರುತ್ತಿದ್ದಾರೆ. ಅವರು ತಮ್ಮ ’ವಿಚಿತ್ರಾನ್ನ ಅಂಕಣದಿಂದ ಹೊರಹೊಮ್ಮಿದ ಲೇಖನಗಳನ್ನೆಲ್ಲಾ ಸಂಗ್ರಹಿಸಿ ’ಇನ್ನೊಂದಿಷ್ಟು ವಿಚಿತ್ರಾನ್ನ,’ ’ಮತ್ತೊಂದಿಷ್ಟು ವಿಚಿತ್ರಾನ್ನ’ ಎಂಬ ಶೀರ್ಷಿಕೆಗಳ ಪುಸ್ತಕಗಳನ್ನು ಹೊರತಂದಿದ್ದಾರೆ. ಅವರಿಗೆ ನಮ್ಮಸಂಪದೀಯರಪರವಾಗಿ ಅಭಿನಂದನೆಗಳು.

-ಚಿತ್ರ, ’ದಟ್ಸ್ ಕನ್ನಡ’ ಪತ್ರಿಕೆಯ ಸೌಜನ್ಯದಿಂದ.