’ನಾಱು’ ಪದದ ಅರ್ಥ
ಬರಹ
ಕನ್ನಡದ ’ನಾಱು’ ಶಬ್ದದ ಅರ್ಥ ವಾಸನೆ ಬೀಱು ಎಂದು. ಆದರೆ ಇದಱರ್ಥವನ್ನು ಬಹಳಷ್ಟು ಜನರು ಬಱಿ ಕೆಟ್ಟ ವಾಸನೆ ಬೀಱು ಎಂದು ಬೞಸುತ್ತಿದ್ದಾರೆ. ಆದರೆ ನಾನು ತಿಳಿದಂತೆ ನಾಱು ಮೂಗಿಗೆ ಕಡುವಾಗಿ (ಗಾಢವಾಗಿ) ಹೊಡೆಯುವ ವಾಸನೆ ಬೀಱು ಎಂಬರ್ಥದಲ್ಲಿ ಎಂದು ಭಾವಿಸಿದ್ದೇನೆ. ಏಕೆಂದರೆ ಸರ್ವಜ್ಞ ’ಇಂಗಿನೊಳು ನಾತವನು’ ಎಂದು ಶಿವಕೋಟ್ಯಾಚಾರ್ಯನು ವಡ್ಡಾರಾಧನೆಯಲ್ಲಿ ’ನಾರ್ಪ ತುಪ್ಪದಿಂ ಬಡಿಸಿದರ್’ ಎಂದು ಬೞಸಿರುವುದಱಿಂದ ಮೂಗಿಗೆ ಕಡುವಾಗಿ ಹೊಡೆಯುವ ಒಳ್ಳೆಯ ಅಥವಾ ಕೆಟ್ಟ ವಾಸನೆ ಬೀಱು ಎಂಬರ್ಥದಲ್ಲಿ ಇದನ್ನು ಬೞಸುತ್ತಾರೆಂದು ನನ್ನ ಭಾವನೆ. ಹಾಗಾಗಿ ’ಮೈಸೂರು ಮಲ್ಲಿಗೆ ಘಮ್ಮೆಂದು ನಾಱುತ್ತಿದೆ’ ಎಂದು ಹೇೞಬಹುದೆಂದು ನನ್ನ ನಂಬಿಕೆ. ನಿಮ್ಮ ಆಕ್ಷೇಪ ಅಥವಾ ಸಮಜಾಯಿಷಿಯನ್ನು ಸಾಧಾರ ನನಗೆ ತಿಳಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ’ನಾಱು’ ಪದದ ಅರ್ಥ