141

141

ನಾನೇ ಧನ್ಯ, ನಾನೇ ಧನ್ಯ ಎನ್ನುವ, ರಾಧೆಯ ನಯನಗಳು, ಕೃಷ್ಣನ ರಥದ ಹಿಂದಿನ ಧೂಳಿನ ಕಡೆ ಇವೆ. ಕೃಷ್ಣನ ಮಾತು, ಕೃಷ್ಣನ ಕೊಳಲು , ಕೃಷ್ಣನ ಜೊತೆ ಆಡಿದ ಎಲ್ಲ ಕ್ಷಣಗಳು  ನೆನಪಿಗೆ ಬರುತ್ತಿವೆ ದೈವದ ಸೃಷ್ಟಿಯಲ್ಲಿ ಭಕ್ತಿ, ಆ ಭಕ್ತಿಯಲ್ಲಿಯ ಅನುರಾಗದ ರಸ, ಆ ರಸದ ಅನುಭವವೆ ದೈವ. ಇದ ಪಡೆದ ಹೇ ರಾಧೆ ನೀನೆ ಧನ್ಯ , ನೀನೆ ಧನ್ಯ

ಟಿವಿ ಮೇಲಿನ ದೃಷ್ಟಿ ಡಿಜಿಟಲ್ ಗಡಿಯಾರದ ಮೇಲೆ ಹಾಯಿತು. ಅರೆ ಮತ್ತೆ 1.41 pm. ಕೃಷ್ಣ-ರಾಧೆ ಸೀರಿಯಲ್ಲಿನಿಂದ , ಮನಸ್ಸು ಐದು ವರ್ಷ ಹಿಂದೆ ಸರಿಯಿತು. ಮುದ್ದು ಮುದ್ದಾದ ಮಗಳ ಪ್ರಶ್ನೆಗಳು ಮತ್ತು ಶಾಲೆ ವಿಷಯಗಳು , ಕೇಳುತ್ತಾ  ಶಾಲೆಯಿಂದ ಮನೆಯ ಕಡೆಗೆ ನಡೆ , ಮನೆ ಸೇರಿ ಊಟ ಮಾಡಿ , ಮಗಳಿಗೆ ಸಮಯ ಕೇಳಿದರೆ , ಮತ್ತೆ ಅದೇ 1.41 pm .  ಈ ನಂಬರ್ ನನ್ನ ತಲೆಯಿಂದ ಹೋಗುವುದಿಲ್ಲ ಎಂದು ಗೊತ್ತಿದ್ದೂ, ವಾಸ್ತವದ ಕಡೆ ಗಮನ ಹರಿಸಿದೆ. ಎಷ್ಟೋ ಸಲ ಹೀಗೆ ಆಗಿದ್ದುಂಟು.

ಇನ್ನೂ ಐದು ವರುಷಗಳ ಹಿಂದಿನ ಅನುಭವ ಬೇರೆ. ಮನೆ ಕಟ್ಟಿದ್ದಾಗಿದೆ , FD ಆಗಿದೆ , ಟೆರೇಸಿನಲ್ಲಿ ಹಿಂದಿ ಕ್ಲಾಸಿಕಲ್ ಹಾಡುಗಳು , ರಾತ್ರಿ ತಂಪಾದ ಗಾಳಿ 'ಮೇರಿ ಆವಾಝಹೀ ಪೆಹೆಚಾನ..ಹೆ ...... ಗರ ಯಾದ ರಹೇ ...... ' ಅವಳ ಜೊತೆ ಮಾತಾಡಿದ ನೆನಪು. ಯುಟ್ಯೂಬ್ ಅಡ್ವರ್ಟೈಸ್ಮೆಂಟಿನ ಬ್ರೇಕ್ , ಮೊಬೈಲಲ್ಲಿ ಸಮಯ ನೋಡಿದರೆ, ಮತ್ತೆ ಅದೇ 1.41 am. 

ಈ ಮನೆ ಕಟ್ಟುವದಕ್ಕೆ , ಹಣ ಕೂಡಿಸುವದಕ್ಕೆ ಪಟ್ಟ ಪರಿಶ್ರಮ ಅಷ್ಟಿಸ್ಟಲ್ಲ. ಅದೇನು ರಾತ್ರಿ-ಹಗಲು  coding, design , discussions , meetings . ಬೆಂಗಳೂರು , ಆ busy life , traffic , pollution. ಊರಿನಾಚೆ ಆಫೀಸ್, ಮಳೆಗಾಲ, ಮೊದಲೇ long-weekend, ಅಂದು ಶುಕ್ರವಾರ, ದೊಡ್ಡ ಕೆಫೆಟೇರಿಯದಲ್ಲಿ, ಅಲ್ಲೊಬ್ಬ ಇಲ್ಲೊಬ್ಬ. ಬಿಸಿಬಿಸಿ ಕಾಫಿ ಹೀರುತ್ತಾ ಕೂತೆ .  ನಾ ಕುಳಿತ ಮೂಲೆಗೆ opposit ಮೂಲೆಗೆ ಹುಡುಗಿ ಕೂತಿದ್ದಾಳೆ . ಅದೇ ಶೈಲಿ , ಅದೇ ಚೂಡಿದಾರಾ , ಆದೆ ಬಣ್ಣ . ಬಹುಶಃ ಅವಳೇ ಇರಬಹುದು. earth-is-round..... ಛೆ ಛೆ,  ನಾನು ಜವಾಬ್ದಾರಿಯುತ ವಿವಾಹಿತ.  ಕೆಳಗೆ ತಲೆ ಹಾಕಿದೆ, laptopಲ್ಲಿ ಸಮಯ 1.41 pm.

 ಆಗ ಹೊಸ ಕೆಲಸ , ಕೈಯಲ್ಲಿ 'ನನ್' ಸಂಬಳ , ದುಡಿಯುವ ಹುರುಪು. ರಜೆ ಇದ್ದರು ಶನಿವಾರ ಆಫೀಸಿಗೆ ಹೋಗಿ ಕೆಲಸ ಮಾಡಿದರಾಯಿತು  ಎಂದು ಮೆಜೆಸ್ಟಿಕ್ ಗೆ  ಬಂದೆ. ಬಸ್ ಪಾಸ್ ಇದೆ , ಸೌತ್-ಎಂಡ್-ಸರ್ಕಲ್ ಯಾವುದು ಹೋಗುತ್ತೋ  ನೋಡಿದೆ. ಚಾಮರಾಜಪೇಟೆ ಪುಷ್ಪಕ್ ಬಸ್ ಖಾಲಿ ಖಾಲಿ , ಹತ್ತಿ ಕುಳಿತೆ . ಕಂಡಕ್ಟರ್ ಪ್ರಯಾಣಿಕಾರಿಗಾಗಿ ಕಾಯುತ್ತಿದ್ದಾನೆ, ಡ್ರೈವರ್ ಬಸ್ ಸ್ಟಾರ್ಟ್ ಮಾಡಿದ್ದಾನೆ, ಆದರೆ ಮುಂದೆ ಬಿಡುತ್ತಿಲ್ಲ. ಅಷ್ಟರಲ್ಲಿ ಅವಳೇ ಹತ್ತಿದಳು. ೧೦೦% ಅವಳೇ. ಮನಸ್ಸಿಗೆ ಗೊತ್ತು ಈಗ ಆಕೆ ನನ್ನವಳಲ್ಲ. ನನಕ್ಕಿಂತ ನಾಲ್ಕು ಸಾಲಿನ ಮುಂದೆ ಕುಳಿತಿದ್ದಾಳೆ. ಬಸ್ ಸ್ಟಾರ್ಟ್ ಆಯಿತು , ವೇಗವಾಯಿತು , ನನ್ನ ಉಸಿರಿನ ಜೊತೆ. ಮಾತನಾಡಿಸಬೇಕೆಂಬ ಆಸೆ , ವಿರಹದ ಕ್ಷಣಗಳನ್ನು ಹೇಳಿ , ಅತ್ತುಬಿಡುವ ಬಯಕೆ .  ಆದರೆ ಗಲಿಬಿಲಿಯಲ್ಲಿ....  ಯಾವೊದೋ stopಲ್ಲಿ ಇಳಿದಿದ್ದಾಳೆ.  ತೋಚದೆ next-stopಲ್ಲಿ ನಾನೂ ಇಳಿದುಬಿಟ್ಟೆ . ಆಟೋ ಹಿಡಿದೆ, ಹುಡುಕಿದೆ, ಎಲ್ಲಿ ಹುಡುಕಿದರೂ ಅವಳ ಸುಳಿವೇ ಇಲ್ಲ. ಬೇಸರದಿಂದ ಹೋಟೆಲಿಗೆ ಹೋಗಿ ಟೀ ಆರ್ಡರ್ ಮಾಡಿದೆ. ಯಾರೋ ಸಮಯ ಕೇಳಿದರು , ಕೈ-ಗಡಿಯಾರ ನೋಡಿದರೆ, ಅರೆ ಅದೇ 1.41 pm.

 ಕಾಲೇಜಿನ ದಿನಗಳು, ಬೆಳಗ್ಗೆ  ಆ ಬಸ್ miss ಮಾಡಬಾರದು , ಅದು ಆಕೆಯ ಖಾಯಂ ಬಸ್ .  ಬಸ್ಸಿನ ತುಂಬ ರಸಭರಿತ engineersಗಳ ದಂಡೆದಂಡು.  ಆದರೆ ನನ್ನ ದೃಷ್ಟಿ  ಮಾತ್ರ ಅವಳು ಮುಡಿದ ಮಲ್ಲಿಗೆ ಮೇಲೆ. ಕಾಲೇಜ್ ಸ್ಟಾಪ್ ನಿಂದ ಕ್ಲಾಸ್ ರೂಮ್ ತನ ಹಿಂಬಾಲಿಸದೆ ಬಿಡುತ್ತಿರಲಿಲ್ಲ. ಲೆಕ್ಚರರ್ ಬಂದರು ಅಟೆಂಡೆನ್ಸ್ ಶುರು , ಈ ಕಡೆ ನನ್ನ ಎದೆಬಡಿತ, ಅದೇನು ಆ ಧ್ವನಿ ಕೇಳಲು ಕಿವಿ ಕಾತುರ , ಮೈ ರೋಮಾಂಚನ ಆಗುವ ಸಮಯ  100,101.... 125,126... ಡಬ್ ಡಬ್  ಬಡಿತ  131,132.... ಜಗತ್ತೇ ನಿಂತಿದೆ .... 138,139,140,141  'ಪ್ರೆಸೆಂಟ್ ಸರ್'... ಆಹಾ ಆಹಾ, ಅನುರಾಗಿಸಿದ ನಾನೇ ಧನ್ಯ, ನಾನೇ ಧನ್ಯ....