ಈ ಭೂಮಿಗೆ ಎಲ್ಲರೂ ವಲಸಿಗರೇ...
3 days ago - Shreerama Diwana
ಅಮೆರಿಕಾದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ ಬೇರೆ ದೇಶದ ಜನರನ್ನು ಆಚೆಗೆ ಅಟ್ಟುತ್ತಿದ್ದಾರೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ಭಾರತದ 104 ಜನರನ್ನು ಬಂಧಿಸಿ ಕೈಗೆ ಕೋಳ ತೊಡಿಸಿ ಅವರದೇ ಸೈನಿಕ ವಿಮಾನದಲ್ಲಿ ಕರೆತಂದು ಭಾರತಕ್ಕೆ ಬಿಡಲಾಯಿತು. ಇದನ್ನು ನೋಡಿದಾಗ ಒಮ್ಮೆ ಕರುಳು ಚುರ್ ಎಂದಿತು. ನಿಜ, ಅಕ್ರಮ ಎಂಬ ಪದವೇ ಬಹುತೇಕ ಒಂದು ಅಪರಾಧ ಅಥವಾ ಮಾಡಬಾರದ ಕೆಲಸ ಅಥವಾ ಕಾನೂನಿನ ಉಲ್ಲಂಘನೆ ಅಥವಾ ಶಿಕ್ಷೆಗೆ ಗುರಿಯಾಗಬಹುದಾದ ತಪ್ಪು ಅಥವಾ ಸಕ್ರಮವಲ್ಲದ್ದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಅಕ್ರಮ ವಲಸೆಗಳಿಗೆ ನಾನಾ ಕಾರಣಗಳಿವೆ ಮತ್ತು ನಾನಾ ಉದ್ದೇಶಗಳಿವೆ, ವಿವಿಧ ಮುಖಗಳೂ ಇದೆ. ಅದನ್ನು ಬಹು ಆಯಾಮದಲ್ಲಿ ನೋಡಬೇಕಾಗುತ್ತದೆ.
ಬಹುತೇಕ ಎಲ್ಲಾ ಜೀವರಾಶಿಗಳು ಸೃಷ್ಟಿಯ ಮೂಲದಿಂದಲೂ ತಮಗೆ ಅನುಕೂಲಕರವಾದ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ವಲಸೆಗಳನ್ನು ನಿರಂತರವಾಗಿ ಮಾಡುತ್ತಿವೆ. ಮನುಷ್ಯ ಮಾತ್ರ ಅಲ್ಲ ಪ್ರಾಣಿ-ಪಕ್ಷಿಗಳು ಸಹ ವಲಸೆಯನ್ನು ಮಾಡುತ್ತಿರುತ್ತವೆ. ಆ ಪ್ರಕ್ರಿಯೆಯಲ್ಲಿ ಘರ್ಷಣೆಗಳು ಸಹ ನಿರಂತರವಾಗಿ ನಡೆಯುತ್ತದೆ. ಮೂಲತಃ ಮನುಷ್ಯನ ನಾಗರಿಕತೆಗಳು ನದಿ ತೀರಗಳಲ್ಲಿ ಬೆಳವಣಿಗೆ ಹೊಂದಿವೆ. ಮುಂದೆ ಜನಸಂಖ್ಯೆ ಹೆಚ್ಚಳ, ಅವಶ್ಯಕತೆ, ಅನಿವಾರ್ಯತೆ, ಪ್ರಾಕೃತಿಕ ವಿಕೋಪ, ಮಹತ್ವಾಕಾಂಕ್ಷೆ, ದುರಾಸೆ, ತಪ್ಪು ನಿರ್ಧಾರಗಳ ಕಾರಣದಿಂದ ಅದು ಬೆಳೆಯುತ್ತಾ, ಹಳ್ಳಿ, ಗ್ರಾಮ, ಪಟ್ಟಣ, ನಗರ, ಮೆಟ್ರೋಪಾಲಿಟನ್ ಸಿಟಿಗಳಾಗಿ ಅಭಿವೃದ್ಧಿ ಹೊಂದಿದವು. ನದಿ ಸಮುದ್ರ ಬೆಟ್ಟ ಗುಡ್ಡ ಕಾಡು ಮೇಡು ಮರುಭೂಮಿ ಬಯಲು ಪ್ರದೇಶ ಎಲ್ಲವನ್ನೂ ದಾಟಿ ಎಲ್ಲೆಂದರಲ್ಲಿ ವಾಸಿಸಲು ಸ್ಥಳಾವಕಾಶ ಸೃಷ್ಟಿಸಿಕೊಂಡ. ಭವಿಷ್ಯದಲ್ಲಿ ಚಂದ್ರನಲ್ಲಿಯೂ ವಾಸಿಸುವ ಯೋಜನೆ ರೂಪಿಸುತ್ತಿರುವ ಮಾಹ… ಮುಂದೆ ಓದಿ...