ಕೃಷಿ ಭೂಮಿಯನ್ನು ಬಿಡದೆ 30/40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 50000 ಇದೆಯಂತೆ. 500/510/520/530 ರೂಪಾಯಿಗಳ ದರದಲ್ಲಿ ಒಂದು ಗ್ರಾಂಗೆ ಒಂದು ವರ್ಷದ ಅವಧಿಯಲ್ಲಿ ಏರಿಕೆಯಾಗುತ್ತಿತ್ತು ಹಳದಿ ಲೋಹ ಚಿನ್ನ . ಆದರೆ ಈಗ ಕೆಲವೇ ವರ್ಷಗಳಲ್ಲಿ 5000 ರೂಪಾಯಿ ತಲುಪಿದೆ. ಸಣ್ಣ ಕಟ್ಟಡಗಳ, ವಿಶಾಲ ಮೈದಾನದಲ್ಲಿ ಹಸಿರು ಗಿಡಗಳ ನಡುವೆ ಸರಳವಾಗಿ ನಡೆಯುತ್ತಿದ್ದ ಶಾಲೆಗಳು ಖಾಸಗಿ ಜನರ ಕೈಸೇರಿ ಅದ್ದೂರಿ ಕಾಂಕ್ರೀಟ್ ಕಟ್ಟಡಗಳಾಗಿ ಕೇವಲ ಒಂದನೇ ತರಗತಿಗೆ ಒಂದು ವರ್ಷಕ್ಕೆ ಲಕ್ಷ ರೂಪಾಯಿಗಳನ್ನು ಮೀರಿದ ಹಣ ಪಾವತಿ ಮಾಡಬೇಕಿದೆ....
ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಐಷಾರಾಮಿ ಹೋಟೆಲುಗಳನ್ನು ಮೀರಿಸುವ ಭವ್ಯತೆ ಪಡೆದು ಕೆಮ್ಮು, ಜ್ವರಕ್ಕೂ ಸಾವಿರಾರು ರೂಪಾಯಿ ತೆರುವಂತಾಗಿದೆ. ಸಾಮಾನ್ಯ ಜನರು ಕನಸಿನಲ್ಲೂ ಯೋಚಿಸಿದ ಐಷಾರಾಮಿ ಕಾರುಗಳು ಸಾಮಾನ್ಯರ ಕಾಲ ಕೆಳಗೆ ಸೇರಿ ಅವರನ್ನು ಹೊತ್ತು ತಿರುಗುತ್ತಿವೆ.....
ಪಿಎಚ್ ಡಿ ಮಾಡಿರುವವರೂ ಕೂಡ ಪಡೆಯದ ಲಕ್ಷ ರೂಪಾಯಿ ಸಂಬಳ ಕೇವಲ ಪಿಯುಸಿ ಮತ್ತು ಕಂಪ್ಯೂಟರ್ ಡಿಪ್ಲೊಮಾ ಮಾಡಿದ 20 ವಯಸ್ಸಿನ ಹುಡುಗ ಹುಡುಗಿಯರು ಎಣಿಸತೊಡಗಿದ್ದಾರೆ....ಫೇಶೀಯಲ್ ಮಸಾಜ್, ಲಿಪ್ ಸ್ಟಿಕ್, ಡ್ಯಾನ್ಸ್ ಕ್ಲಬ್ ಫ್ಯಾಷನ್ ಡಿಸೈನಿಂಗ್ ಗಳು ಶಾಪಿಂಗ್ ಮಾಲ್ ಗಳು ಒಂದು ಕಡೆ,....
ಮಾಸ್ಟರ್ ಬೆಡ್ ರೂಂ, ಚಿಲ್ಡ್ರನ್ಸ್ ಬೆಡ್ ರೂಂ, ಸರ್ವೆಂಟ್ ಬೆಡ್ ರೂಂ, ಗೆಸ್ಟ್ ಬೆಡ್ ರೂಂ ಗಳೆಂಬ ಐಷಾರಾಮಿ ಇನ್ನೊಂದು ಕಡೆ...
ಪ್ರಕೃತಿ ಸಂಪನ್ಮೂಲಗಳು ಯಾರಪ್ಪನದು.....
ತಿನ್ನುವ, ಅಪಾರ ಪೌಷ್ಠಿಕಾಂಶದ ಹಣ್ಣು ತರಕಾರಿ ಎಳನೀರುಗಳು ಬೀದಿ ಬದಿಯ ಬಿಸಿಲಿನಲ್ಲಿ ಅತ್ಯಂತ ಕಡಿಮೆ…
ಮುಂದೆ ಓದಿ...