ನಿಷ್ಪಾಪಿ ಸಸ್ಯಗಳು (ಭಾಗ ೪೨) - ಪಂಚಪತ್ರೆ ಗಿಡ
12 hours 13 minutes ago - ಬರಹಗಾರರ ಬಳಗನಾವು ಸಣ್ಣವರಿದ್ದಾಗ ನಮ್ಮಮ್ಮ ಅಮವಾಸ್ಯೆ ಹುಣ್ಣಿಮೆ ಅಂತ ಆಗಾಗ "ಚಿಹ್ನೆ" ಯ ಮಾತ್ರೆ ಕೊಡ್ತಿದ್ದರು. ಏನೋ ಒಂದು ವಾಸನೆಯ ಮಾತ್ರೆಯನ್ನು ತುಳಸಿ ಎಲೆಯ ರಸದ ಜೊತೆ, ಜೇನುತುಪ್ಪದ ಜೊತೆ, ಪಂಚಪತ್ರೆಯ ಎಲೆ ರಸದ ಜೊತೆ ಒತ್ತಾಯದಿಂದ ಕುಡಿಸುತ್ತಿದ್ದರು. ತುಳಸಿ, ಜೇನು, ಪಂಚಪತ್ರೆಯ ವಾಸನೆಯೇ ಅಸಹ್ಯವೆನಿಸುವಂತಾಗಿತ್ತು. ಅದೆಷ್ಟು ಉತ್ತಮ ಔಷಧೀಯ ವಸ್ತುಗಳೆಂದು ಈಗ ಅರಿವಾಗುತ್ತಿದೆ. ಇದು ಮಕ್ಕಳ ಹಠದ ಸ್ವಭಾವವನ್ನು ಕಡಿಮೆ ಮಾಡುತ್ತದೆಯೆಂದೂ, ಮಗು ಆರೋಗ್ಯವಾಗಿರುತ್ತದೆಂದೂ ತಾಯಂದಿರು ಮಾತನಾಡಿಕೊಳ್ಳುತ್ತಿದ್ದರು. ಅದು ಸತ್ಯವೋ ಸುಳ್ಳೋ ತಿಳಿಯದು. ಈಗಲೂ ಹಲವರು ಈ ಪದ್ಧತಿಯನ್ನು ಅನುಸರಿಸುತ್ತಾರೆ.
ಚಿಹ್ನೆಯ ಮಾತ್ರೆಯ ಜೊತೆ ಸೇರಿಸುವ ಪಂಚಪತ್ರೆ ಅನ್ನುವ ಸೊಪ್ಪಿನ ಗಿಡದ ಪರಿಚಯವನ್ನು ಈ ಬಾರಿ ಮಾಡಿಕೊಳ್ಳೋಣ. ಇದೊಂದು ಸುಂದರವಾದ ಸಸ್ಯ. ಸರಳ ಸುಂದರಿ. ಇತರ ಯಾವ ಸಸ್ಯಗಳಿಗೂ ಕಿರಿಕಿರಿ ಮಾಡದೆ ತುಂಡೊಂದನ್ನು ನೆಲಕ್ಕೆ ಊರಿದಲ್ಲಿ ಅತ್ತಿತ್ತ ಹರಡಿ ನೆಲವನ್ನೆ ಹಸಿರಾಗಿಸುತ್ತದೆ. ಎಲೆಗೆ ಬಹಳ ಪರಿಮಳವಿದೆ. ಆರ್ಟಿಮಿಸಿಯಾ ಅನುವ ಎಂಬ ಹೆಸರಿನ ಪಂಚಪತ್ರೆ ಅಸ್ಪರೇಸಿ ಕುಟುಂಬದ ಸಸ್ಯ. ಸಮಶೀತೋಷ್ಣ ವಲಯದ ಏಷ್ಯಾದಲ್ಲಿ ಸ್ಥಳೀಯ ಸಸ್ಯ. ಉತ್ತರ ಅಮೇರಿಕಾ, ಚೀನಾ ಗಳಲ್ಲೂ ಕಂಡುಬರುತ್ತದೆ.
ಇದರ ಕಾಂಡ ಕಂದು ಅಥವಾ ತಿಳಿನೇರಳೆ ಬಣ್ಣ ಹೊಂದಿದ್ದು 30 ರಿಂದ ಸುಮಾರು 100 cm ಎತ್ತರ ಬೆಳೆಯಬಲ್ಲದು. ಎಲೆಗಳು 3 ರಿಂದ 5 cm ಉದ್ದವಿದ್ದು ಹೆಚ್ಚು ಆಳ ಸೀಳುಗಳಾಗಿ ಏಳು ಪುಟ್ಟ ಭಾಗಗಳಾಗಿರುತ್ತವೆ. ಕಾಂಡದ ಮೇಲೆ ಬೇರೆ ಬೇರೆ ದಿಕ್ಕುಗಳಲ್ಲಿ ಜೋಡಣೆಗೊಂಡ ಎಲೆಗಳು ಸೂರ್ಯರಶ್ಮಿಗೆ ಮೈಯ್ಯೊಡ್ಡಲು ಸಹಕಾರಿಯಾಗಿವೆ. ಬಿಸಿಲು ಮತ್ತು ಬೆಚ್ಚಗಿನ ವಾತಾವರಣ ಬಯಸುವ ಈ ಗಿಡಮೂಲಿಕೆ ಬಹಳ ನೀರನ್ನು ಬಯಸದು. ಬರಗಾಲದಂತಹ ಹವಾಮಾನಕ… ಮುಂದೆ ಓದಿ...