‘ಸಂಪದ’ ನಗೆಬುಗ್ಗೆ - ಭಾಗ ೧೦೮
2 days 12 hours ago - Ashwin Rao K P
ಒಂಟೆ ಬೇಕಾ?
ಒಬ್ಬ ಅರಬನೊಂದಿಗೆ ಸೂರಿ ಬರಿಗಾಲಿನಲ್ಲಿ ಮರುಭೂಮಿಯ ಮೇಲೆ ಹೋಗುತ್ತಿದ್ದ. ಅರಬ್ಬಿ ‘ಕುಳಿತುಕೊಳ್ಳಲು ಒಂಟೆ ಬೇಕಾ?’ ಕೇಳಿದ. ಅವನು ಬೇಡವೆಂದ. ಅರಬ್ಬಿಗೆ ಕೋಪ ಬಂತು. ಒಂಟೆಯಿಂದ ಕೆಳಗಿಳಿದು ಸೂರಿಗೆ ಹೊಡೆಯಲು ಹೋದ. ಅವನು ಅರಬ್ಬಿಯ ಕೈಗೆ ಸಿಗದೆ ಓಡತೊಡಗಿದ. ಅರಬ್ಬಿ ಹಿಂದಿನಿಂದ ಓಡಿಸಿಕೊಂಡು ಬಂದ, ತುಂಬ ದೂರ ಓಡಿದಾಗ ಮರುಭೂಮಿ ಮುಗಿಯಿತು. ಅರಬ್ಬಿ ಆಯಾಸದಿಂದ ಸುಸ್ತಾದ. ಸೂರಿ ‘ನಾನು ಗೆದ್ದು ಬಿಟ್ಟೆ, ಕೋಟಿ ರೂಪಾಯಿ ನನ್ನದಾಯಿತು’ ಎಂದು ಕುಣಿಯತೊಡಗಿದ.
ಅರಬ್ಬಿಗೆ ಅರ್ಥವಾಗಲಿಲ್ಲ. ‘ಕೋಟಿ ರೂಪಾಯಿ ನಿನ್ನದಾಯಿತೇ? ಹೇಗೆ? ‘ ಅಚ್ಚರಿಯಿಂದ ಕೇಳಿದ. ‘ಒಂಟೆಯಿಲ್ಲದೆ ಮರುಭೂಮಿಯನ್ನು ದಾಟುವುದು ಹೇಗೆ? ಎಂಬುದನ್ನು ಕಂಡುಕೊಳ್ಳಲು ಒಂದು ಪಂಥ ಏರ್ಪಾಡಾಗಿತ್ತು. ಒಬ್ಬ ಅರಬ್ಬಿಗೆ ಕೋಪ ಬರಿಸಿದರೆ ಅದನ್ನು ಮಾಡಬಹುದು ಎಂದು ಗೊತ್ತಾಯಿತು.’ ಎಂದ ಸೂರಿ ಹರುಷದಿಂದ.
***
ಶುಭಾಶಯ
ಸೂರಿ ಮತ್ತು ಗಾಂಪ ಪ್ರಯಾಣಿಸುತ್ತಿದ್ದ ವಿಮಾನ ಅರಬ್ ಮರುಭೂಮಿಯಲ್ಲಿ ದುರಂತಕ್ಕೀಡಾಗಿ ಅವರಿಬ್ಬರೂ ಬದುಕಿ ಉಳಿದುಕೊಂಡರು. ನೀರು ಹುಡುಕುತ್ತ ಮುಂದೆ ಹೋದಾಗ ಒಂದು ಮಸೀದಿ ಕಾಣಿಸಿತು. ಗಾಂಪ ‘ಅಲ್ಲಿಗೆ ಹೋದರೆ ನೀರು ಸಿಗಬಹುದು. ಆದರೆ ಅರಬ್ಬರಲ್ಲದವರಿಗೆ ನೀರು ಕೊಡಲಿಕ್ಕಿಲ್ಲ. ಆದ್ದರಿಂದ ನನ್ನ ಹೆಸರನ್ನು ಮಹಮ್ಮದ್ ಎಂದು ಬದಲಾಯಿಸಿಕೊಳ್ಳುತ್ತೇನೆ’ ಎಂದು ಹೇಳಿದ. ಸೂರಿ ಅದಕ್ಕೆ ಒಪ್ಪಲಿಲ್ಲ. ಇಬ್ಬರೂ ಮಸೀದಿಗೆ ಹೋದರು. ಸೂರಿ ತನ್ನ ನಿಜವಾದ ಹೆಸರನ್ನೇ ಹೇಳಿ ದುರಂತದ ವಿಷಯ ತಿಳಿಸಿದ. ಮಸೀದಿಯವರು ಅವನಿಗೆ ಕುಡಿಯಲು ನೀರು ಮತ್ತು ಆಹಾರ ಕೊಟ್ಟರು.
ಗಾಂಪ, ‘ನಾನೂ ಅದೇ ವಿಮಾನದಲ್ಲಿದ್ದೆ. ನನ್ನ ಹೆಸರು ಮಹಮ್ಮದ್’ ಎಂದು ಹೇಳಿ ದೊಡ್ಡ ಸತ್ಕಾರದ ನಿರೀಕ್ಷೆಯಲ್ಲಿದ್ದ ಅವನನ್ನು ಮುಲ್ಲಾಗಳು ತಬ್ಬಿಕೊಂಡರು. ‘ರಂಜ… ಮುಂದೆ ಓದಿ...